ಶ್ವಾಸಕೋಶ ಸಾಗಿಸುತ್ತಿದ್ದ ಆಂಬುಲೆನ್ಸ್ ಅಪಘಾತ: ಗಾಯಗೊಂಡರೂ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾದ ವೈದ್ಯ
ವೈದ್ಯೋ ನಾರಾಯಣ ಹರಿಃ ಎಂಬ ಸಂಸ್ಕೃತ ಉಕ್ತಿಯೊಂದಿದೆ. ವೈದ್ಯರೇ ದೇವರು ಎಂಬುದು ಈ ಉಕ್ತಿಯ ಅರ್ಥ ಈ ವಿಚಾರವನ್ನು ಹಲವು ಬಾರಿ ವೈದ್ಯರು ಸಾಬೀತುಪಡಿಸಿದ್ದಾರೆ. ಅದೇ ರೀತಿ ಇಲ್ಲೊಬ್ಬರು ವೈದ್ಯರು ತಾವು ಅಪಘಾತಕ್ಕೊಳಗಾಗಿ ಗಾಯಗೊಂಡರು ತನ್ನ ಗಾಯದ ಬಗ್ಗೆ ತಲೆಕೆಡಿಸಿಕೊಳ್ಳದೇ ವ್ಯಕ್ತಿಯ ಜೀವ ಉಳಿಸುವ ಶಸ್ತ್ರಚಿಕಿತ್ಸೆಯೊಂದರಲ್ಲಿ ಭಾಗಿಯಾಗುವ ಮೂಲಕ ಈ ಉಕ್ತಿಯನ್ನು ಮತ್ತೆ ನೆನಪಿಸಿದ್ದಾರೆ.
ಪುಣೆ: ವೈದ್ಯೋ ನಾರಾಯಣ ಹರಿಃ ಎಂಬ ಸಂಸ್ಕೃತ ಉಕ್ತಿಯೊಂದಿದೆ. ವೈದ್ಯರೇ ದೇವರು ಎಂಬುದು ಈ ಉಕ್ತಿಯ ಅರ್ಥ ಈ ವಿಚಾರವನ್ನು ಹಲವು ಬಾರಿ ವೈದ್ಯರು ಸಾಬೀತುಪಡಿಸಿದ್ದಾರೆ. ಅದೇ ರೀತಿ ಇಲ್ಲೊಬ್ಬರು ವೈದ್ಯರು ತಾವು ಅಪಘಾತಕ್ಕೊಳಗಾಗಿ ಗಾಯಗೊಂಡರು ತನ್ನ ಗಾಯದ ಬಗ್ಗೆ ತಲೆಕೆಡಿಸಿಕೊಳ್ಳದೇ ವ್ಯಕ್ತಿಯ ಜೀವ ಉಳಿಸುವ ಶಸ್ತ್ರಚಿಕಿತ್ಸೆಯೊಂದರಲ್ಲಿ ಭಾಗಿಯಾಗುವ ಮೂಲಕ ಈ ಉಕ್ತಿಯನ್ನು ಮತ್ತೆ ನೆನಪಿಸಿದ್ದಾರೆ.
ಚೆನ್ನೈನಲ್ಲಿ ರೋಗಿಯೊಬ್ಬರಿಗೆ ಕಸಿ ಮಾಡುವುದಕ್ಕಾಗಿ ಪುಣೆಯ ಆಸ್ಪತ್ರೆಯೊಂದರಿಂದ ಆಂಬುಲೆನ್ಸ್‌ನಲ್ಲಿ ಜೀವಂತ ಶ್ವಾಸಕೋಶವನ್ನು ಸಾಗಿಸುತ್ತಿದ್ದ ವೇಳೆ ಈ ಆಂಬುಲೆನ್ಸ್ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ. ಪರಿಣಾಮ, ಆಂಬುಲೆನ್ಸ್ ಚಾಲಕ ಸೇರಿದಂತೆ ಅದರಲ್ಲಿದ್ದ ವೈದ್ಯರುಗಳು ಗಾಯಗೊಂಡಿದ್ದರು. ಆದರೆ ವೈದ್ಯರು ತಮ್ಮ ಗಾಯದ ಕಾರಣಕ್ಕೆ ಈ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ ನಿಂತು ಹೋದರೆ ರೋಗಿ ಸಾಯುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ತಮ್ಮ ಗಾಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯ ಜೀವ ಉಳಿಸಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಈ ಶ್ವಾಸಕೋಶದ ಶಸ್ತ್ರಚಿಕಿತ್ಸೆ ನಡೆದಿದೆ
ಶಿವಮೊಗ್ಗ: ಗರ್ಭನಾಳದಲ್ಲಿ ಬೆಳೆದ ಗರ್ಭ, ಮಹಿಳೆಗೆ ಜೀವದಾನ ಮಾಡಿದ ವೈದ್ಯರು..!
ನವಿ ಮುಂಬೈನ ಅಪೋಲೋ ಆಸ್ಪತ್ರೆಗಳ ಮುಖ್ಯ ಕಾರ್ಡಿಯೋಥೊರಾಸಿಕ್ ಸರ್ಜನ್ ಡಾ ಸಂಜೀವ್ ಜಾಧವ್ ಎಂಬುವವರೇ ಹೀಗೆ ತನ್ನ ನೋವನ್ನು ನಿರ್ಲಕ್ಷಿಸಿ ರೋಗಿಯ ಜೀವ ಉಳಿಸಲು ಪಣ ತೊಟ್ಟ ವೈದ್ಯ. ಪುಣೆಯ ಆಸ್ಪತ್ರೆಯೊಂದರಿಂದ ಚೆನ್ನೈನಲ್ಲಿರುವ 26 ವರ್ಷದ ರೋಗಿಗೆ ಕಸಿ ಮಾಡುವುದಕ್ಕಾಗಿ ಶ್ವಾಸಕೋಶದೊಂದಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಶ್ವಾಸಕೋಶದೊಂದಿಗೆ ಚೆನ್ನೈಗೆ ತೆರಳಲು ಲೋಹೆಗಾಂವ್‌ನ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಪಿಂಪ್ರಿ-ಚಿಂಚ್‌ವಾಡ್ ಟೌನ್‌ಶಿಪ್‌ನಲ್ಲಿ ಈ ಅಪಘಾವಾಗಿತ್ತು.
ಟೈರ್ ಸ್ಫೋಟಗೊಂಡ ಪರಿಣಾಮ ಸೇತುವೆ ಮೇಲೆ ಇವರು ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ಅವರು ಗಾಯಗೊಂಡಿದ್ದರೂ ಗಾಯದ ಬಗ್ಗೆ ತಲೆಕೆಡಿಸಿಕೊಳ್ಳದ ಅವರು ಆಂಬ್ಯುಲೆನ್ಸ್ ಅನ್ನು ಹಿಂಬಾಲಿಸುತ್ತಿದ್ದ ಮತ್ತೊಂದು ವಾಹನವನ್ನು ಹತ್ತಿ ಏರ್‌ಫೋರ್ಟ್ ತಲುಪಿದ್ದಾರೆ. ಅಲ್ಲಿ ಅವರನ್ನು ಚೆನ್ನೈಗೆಕರೆದೊಯ್ಯಲು ಚಾರ್ಟೆಡ್ ವಿಮಾನವೊಂದು ಸಿದ್ಧಗೊಂಡು ನಿಂತಿತ್ತು.
ಈ ಬಗ್ಗೆ ವೈದ್ಯ ಜಾಧವ್ ಅವರರೇ ಮಾತನಾಡಿದ್ದು ಏನಾಯಿತು ಎಂಬುದನ್ನು ವಿವರಿಸಿದ್ದಾರೆ. 'ಪುಣೆಯಲ್ಲಿ 19 ವರ್ಷದ ಹುಡುಗನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಶ್ವಾಸಕೋಶವನ್ನು ಕುಟುಂಬದವರು ದಾನ ಮಾಡಿದ ಹಿನ್ನೆಲೆಯಲ್ಲಿ ಪಂಪ್ರಿ ಚಿಂಚವಾಡದ ಆಸ್ಪತ್ರೆಯಿಂದ ಆ ಶ್ವಾಸಕೋಶವನ್ನು ತೆಗೆದುಕೊಂಡು ಬರುತ್ತಿದ್ದೆವು. ಈ ಶ್ವಾಸಕೋಶವನ್ನು ಚೆನ್ನೈನ ಅಪೊಲೊ ಆಸ್ಪತ್ರೆಗಳಿಗೆ ಸಾಗಿಸಲು ನಿರ್ಧರಿಸಲಾಗಿತ್ತು, ಅಲ್ಲಿ 26 ವರ್ಷದ ರೋಗಿಯೊಬ್ಬರಿಗೆ ಈ ಶ್ವಾಸಕೋಶವನ್ನು ಕಸಿ ಮಾಡಲು ನಿರ್ಧರಿಸಿದ್ದೆವು'
ದೇಶದ ಮೊದಲ ಯಕೃತ್ ಕಸಿಗೆ 25 ವರ್ಷ : ಯಕೃತ್ ಕಸಿಗೊಳಗಾದ ಮೊದಲ ಮಗು ಈಗ ವೈದ್ಯ
"ದಾನ ಪಡೆ ಅಂಗಾಂಗವನ್ನು ಸಾಮಾನ್ಯವಾಗಿ ಆರು ಗಂಟೆಗಳ ಒಳಗೆ ಕಸಿ ಮಾಡಿದಲ್ಲಿ ಮಾತ್ರ ಅದು ಬಳಕೆಗೆ ಯೋಗ್ಯವಾಗಿರುತ್ತದೆ. ಹೀಗಾಗಿ ಅಂದೇ ಶ್ವಾಸಕೋಶವನ್ನು ಚೆನ್ನೈಗೆ ಸಾಗಿಸುವುದು ಅತ್ಯಗತ್ಯವಾಗಿತ್ತು. ಪುಣೆಯ ಡಿವೈ ಆಸ್ಪತ್ರೆಯಿಂದ ಶ್ವಾಸಕೋಶವನ್ನು ತೆಗೆದುಕೊಂಡು ಪುಣೆ ಏರ್ಪೋರ್ಟ್‌ನತ್ತ ಸಾಗುತ್ತಿದ್ದಾಗ ಸಂಜೆ 5 ಗಂಟೆಗೆ ಆಂಬುಲೆನ್ಸ್ ಟೈರ್ ಬಸ್ಟ್ ಆಗಿ ಅಪಘಾತ ಸಂಭವಿಸಿತು. ಸೇತುವೆಯ ಕಬ್ಬಿಣದ ತಡೆಗೆ ಆಂಬುಲೆನ್ಸ್ ಗುದ್ದಿದ ಕಾರಣ ಆಂಬ್ಯುಲೆನ್ಸ್‌ನ ಮುಂಭಾಗಕ್ಕೆ ಭಾರಿ ಹಾನಿಯಾಗಿತ್ತು. ಮತ್ತು ಅದರಲ್ಲಿದ್ದ ಆಮ್ಲಜನಕ ಸಿಲಿಂಡರ್ ಹೊರಗೆ ಹಾರಿ ಹೋಗಿತ್ತು. ಇದರಿಂದ ನನಗೆ ತಲೆಗೆ ಕೈಗೆ, ಮೊಣಕಾಲಿಗೆ ಗಾಯವಾಗಿದೆ. ಅಲ್ಲದೇ ಇವರ ತಂಡದಲ್ಲಿದ್ದ ಇತರರಿಗೂ ಗಾಯಗಳಾಗಿವೆ.'
ಅಪಘಾತದ ನಂತರ ಮೊದಲಿಗೆ ನಾವು ಚಾಲಕನನ್ನು ಡಿ ವೈ ಪಾಟೀಲ್ ಆಸ್ಪತ್ರೆಗೆ ಸೇರಿಸಿದೆವು. ಏಕೆಂದರೆ ಅವರು ಜಾಸ್ತಿ ಗಾಯಗೊಂಡಿದ್ದರು ನಂತರ ನಮ್ಮನ್ನು ಹಿಂಬಾಲಿಸುತ್ತಿದ್ದ ಆಸ್ಪತ್ರೆಯ ಮತ್ತೊಂದು ವಾಹನ ಏರಿದೆವು ಮತ್ತು ನಿಗದಿತ ಸಮಯದಲ್ಲಿ ಅಂಗಾಂಗ ಸಾಗಿಸುವುದು ಮುಖ್ಯವಾದ ಕಾರಣ ಸಂಜೆ 6 ಗಂಟೆಗೆ ವಿಮಾನ ನಿಲ್ದಾಣ ತಲುಪಿದೆವು ಎಂದು ವೈದ್ಯ ಜಾಧವ್ ಆ ಗೋಲ್ಡನ್ ಅವರ್ಸ್‌ನಲ್ಲಿ ಎದುರಾದ ಆಪಘಾತದ ಬಗ್ಗೆ ಮಾತನಾಡಿದ್ದಾರೆ.
ನಾವು ಚೆನ್ನೈನ ಅಪೋಲೋ ಆಸ್ಪತ್ರೆ ತಲುಪಿದಾಗ, ಅಲ್ಲಿ ಶ್ವಾಸಕೋಸದ ಕಸಿಗೆ ಒಳಗಾಗಬೇಕಿದ್ದ ರೋಗಿ ಆಪರೇಟಿಂಗ್ ಟೇಬಲ್‌ನಲ್ಲಿದ್ದರು. ನಂತರ ಸಂಜೆಯ ವೇಳೆಗೆ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಶ್ವಾಸಕೋಶ ಕಸಿ ಮಾಡಿದ್ದರಿಂದ ರೋಗಿಗೆ ಹೊಸ ಬದುಕು ಸಿಕ್ಕಿರುವುದು ಸಂತಸ ತಂದಿದೆ ಎಂದು ಸಂತೃಪ್ತಿಯ ಭಾವದಿಂದ ಹೇಳಿದ್ದಾರೆ ಜಾಧವ್. ಅಂತೂ ವೈದ್ಯ ಜಾಧವ್ ಹಾಗೂ ಅವರ ತಂಡದ ತ್ವರಿತ ಕ್ರಮ ಮತ್ತು ಬದ್ಧತೆಯ ಕಾರಣದಿಂದ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.