ಪಾಲಿಟೆಕ್ನಿಕ್ ಓದುತ್ತಿದ್ದ ವಿದ್ಯಾರ್ಥಿಯೋರ್ವ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಗೆ ಬಸ್ ನಿಲ್ದಾಣದಲ್ಲೇ ತಾಳಿ ಕಟ್ಟಿದ ಆಘಾತಕಾರಿ ಘಟನೆ ನೆರೆಯ ರಾಜ್ಯ ತಮಿಳುನಾಡಿನಲ್ಲಿ ನಡೆದಿದೆ.
ಚೆನ್ನೈ: ಪಾಲಿಟೆಕ್ನಿಕ್ ಓದುತ್ತಿದ್ದ ವಿದ್ಯಾರ್ಥಿಯೋರ್ವ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಗೆ ಬಸ್ ನಿಲ್ದಾಣದಲ್ಲೇ ತಾಳಿ ಕಟ್ಟಿದ ಆಘಾತಕಾರಿ ಘಟನೆ ನೆರೆಯ ರಾಜ್ಯ ತಮಿಳುನಾಡಿನಲ್ಲಿ ನಡೆದಿದೆ. ಕಡಲೂರಿನ ಚಿದಂಬರಂ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಂಚಲನ ಸೃಷ್ಟಿಸಿದೆ.
ಕಡಲೂರಿನಲ್ಲಿರುವ (Cuddalore) ಚಿದಂಬರಂ (Chidambaram) ಬಸ್ ನಿಲ್ದಾಣದ (bus station) ಗಾಂಧಿ ಪ್ರತಿಮೆ (Gandhi statue) ಬಳಿ ಸಮವಸ್ತ್ರ ಧರಿಸಿದ್ದ ಸ್ಥಳೀಯ ಸರ್ಕಾರಿ ಕಾಲೇಜೊಂದರಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳು ಬಂದು ಬಸ್‌ಗಾಗಿ ಕಾಯುತ್ತಾ ಕುಳಿತಿದ್ದಳು. ಇದೇ ವೇಳೆ ಕೀರಪಾಲ್ಯಂನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯೋರ್ವ (polytechnic college student) ಅಲ್ಲಿಗೆ ಬಂದು ವಿದ್ಯಾರ್ಥಿನಿ ಪಕ್ಕದಲ್ಲೇ ಕುಳಿತಿದ್ದಾನೆ. ಬಳಿಕ ತನ್ನ ಬಳಿ ಇದ್ದ ತಾಳಿ ತೆಗೆದು ಪಿಯು ವಿದ್ಯಾರ್ಥಿನಿಗೆ ಕಟ್ಟಿದ್ದಾನೆ. ಇದೇ ವೇಳೆ ಅಲ್ಲೇ ಇದ್ದ ಕೆಲ ವಿದ್ಯಾರ್ಥಿಗಳು ಸ್ನೇಹಿತರು ಆಕೆಗೆ ಶುಭಾಶಯ ಹೇಳುತ್ತಿರುವುದು ವಿಡಿಯೋ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ.
15ರ ಬಾಲಕಿ ಮೇಲೆ 33 ಜನರಿಂದ ರೇಪ್: ಪ್ರಿಯಕರ, ಆತನ ಸ್ನೇಹಿತರ ಕೃತ್ಯ!
ಈ ವಿಡಿಯೋ ನೋಡಿ ಚಿದಂಬರಂ ಠಾಣೆಯ ಪೊಲೀಸರೇ ಶಾಕ್ ಆಗಿದ್ದು, ಬಸ್ ನಿಲ್ದಾಣದಲ್ಲಿ ಮದುವೆಯ ಆಟವಾಡಿದ ಈ ಇಬ್ಬರನ್ನು ಹಿಡಿದು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಅಲ್ಲದೇ ಈ ಇಬ್ಬರು ವಿದ್ಯಾರ್ಥಿಗಳ ಪೋಷಕರನ್ನು ಕೂಡ ಠಾಣೆಗೆ ಕರೆಸಿ ವಿಚಾರಿಸಿದ್ದಾರೆ. ಅಲ್ಲದೇ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಮ್ಯಾ ಅವರ ಗಮನಕ್ಕೆ ಈ ವಿಚಾರ ಬಂದಿದ್ದು, ಈ ಇಬ್ಬರು ವಿದ್ಯಾರ್ಥಿಗಳ ತನಿಖೆಗೆ ಮುಂದಾಗಿದ್ದಾರೆ.
ಅಲ್ಲದೇ ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ (Facebook page) ಪೋಸ್ಟ್ ಮಾಡಿದ್ದ ಬಾಲಾಜಿ ಗಣೇಶ್ (Balaji Ganesh) ಎಂಬಾತನನ್ನು ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಪೋಷಕರು ನೀಡಿದ ದೂರನ್ನು ಆಧರಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಹೀಗೆ ಬಂಧಿತನಾದ ಬಾಲಾಜಿ ಗಣೇಶ್ ಅಸ್ವಸ್ಥನಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಾಥ ಅಪ್ರಾಪ್ತೆಯರ ಜೊತೆ ಮದುವೆಯಾದ ಯುವಕರು
ಇವು ಗಾಢವಾದ ಪರಿಣಾಮ ಬೀರುವ ಸೂಕ್ಷ್ಮ ವಿಚಾರಗಳಾಗಿವೆ. ಸಾಮಾಜಿಕ ಜಾಲತಾಣಗಳು ಸಾಕಷ್ಟು ಪ್ರಭಾವಶಾಲಿಯಾಗಿರುವ ಇಂದಿನ ಕಾಲಘಟ್ಟದಲ್ಲಿ ನಾವಿದ್ದು, ಹೀಗಾಗಿ ಇಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆದರೆ ಅದರ ಪ್ರಭಾವ ಎಂತಹದ್ದು ಎಂಬುದರ ಅರಿವು ಕೂಡ ಈ ಮಕ್ಕಳಿಗೆ ಇದ್ದಂತಿಲ್ಲ. ಹರೆಯದಲ್ಲೇ ವಿದ್ಯಾರ್ಥಿಗಳು ದಾರಿ ತಪ್ಪದಂತೆ ಸರಿ ಮಾರ್ಗದಲ್ಲಿ ನಡೆಯುವಂತಾಗಲು ಅವರಿಗೆ ಈ ಬಗ್ಗೆ ತಿಳುವಳಿಕೆ ನೀಡುವ ಅಗತ್ಯವಿದೆ.