* ಅಪ್ರಾಪ್ತ ಬಾಲಕಿಯರಿಗೆ ಆಮಿಷ ನೀಡಿ ಮದುವೆಯಾಗಿದ್ದ ವಂಚನೆ ಪ್ರಕರಣ ಬೆಳಕಿಗೆ* ಇಬ್ಬರನ್ನು ಮದುವೆಯಾಗಿದ್ದ   ಇಬ್ಬರ  ವಿರುದ್ಧ ಪೋಸ್ಕೋ ಪ್ರಕರಣ ದಾಖಲು* ದಾವಣಗೆರೆ ನಗರದ ಹೊಸ ಕುಂದವಾಡದಲ್ಲಿ ಘಟನೆ

ದಾವಣಗೆರೆ, (ಜೂನ್.12): ಅನಾಥ ಹಾಗೂ ಅಪ್ರಾಪ್ತ ಬಾಲಕಿಯರನ್ನು ಪುಸಲಾಯಿಸಿ, ಮದುವೆಯಾಗಿದ್ದ ಯುವಕರಿಬ್ಬರ ವಿರುದ್ಧ ಪ್ರಕರಣ ದಾಖಲಲಾಗಿದೆ. ದಾವಣಗೆರೆ ನಗರದ ಹೊಸ ಕುಂದವಾಡದಲ್ಲಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗಿದ್ದ ಹೊಸಕುಂದವಾಡದ ಇಬ್ಬರು ಯುವಕರ ವಿರುದ್ಧ ಅಪಹರಣ, ಬಾಲ್ಯವಿವಾಹ ನಿಷೇಧ, ಪೋಕ್ಸೋ ಕಾಯ್ದೆಯಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವಕರು ನಾಪತ್ತೆಯಾಗಿದ್ದು ಪತ್ತೆ ಕಾರ್ಯ ನಡೆದಿದೆ.

ಶಿರಸಿ-ಸಿದ್ದಾಪುರ; ಪ್ರಿಯಕರನ ನಿರ್ಲಕ್ಷ್ಯ, ಯುವತಿ ಆತ್ಮಹತ್ಯೆ

ಬಾಲಕಿಯರ ತಂದೆ ಎರಡು ವರ್ಷಗಳ ಹಿಂದೆ, ತಾಯಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಈ ದಂಪತಿಗೆ 15,13, 8, 6 ವರ್ಷದ ನಾಲ್ವರು ಹೆಣ್ಣು ಮಕ್ಕಳು, ಐದು ವರ್ಷದ ಒಬ್ಬ ಮಗನಿದ್ದು ಈ ಐದು ಮಕ್ಕಳನ್ನು ಕಣ್ಣು ಕಾಣದ ಅಜ್ಜಿ ಸಾಕಿಕೊಂಡಿದ್ದರು. 

9ನೇ ತರಗತಿ ಓದುತ್ತಿದ್ದ 15ವರ್ಷದ ಬಾಲಕಿಯನ್ನು ಸ್ಥಳೀಯ ಯುವಕನೋರ್ವ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಆಗಿದ್ದನು. ಮತ್ತೊಬ್ಬ ಸ್ಥಳೀಯ ಯುವಕ ಆಕೆಯ ತಂಗಿ 7ನೇ ತರಗತಿ ಓದುತ್ತಿದ್ದ 13 ವರ್ಷದ ಬಾಲಕಿಯನ್ನು 9 ದಿನಗಳ ಹಿಂದೆ ಮದುವೆಯಾಗಿದ್ದನು ಎನ್ನಲಾಗಿದೆ.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಶುಕ್ರವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವೈ.ಆರ್. ಕಿರಣ್ ಮತ್ತು ಮಮತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ವರದಿ ನೀಡಿದ್ದರು.

ಈ ವರದಿ ಆಧರಿಸಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್, ಶನಿವಾರ ಭೇಟಿ ಎಲ್ಲ ಐದು ಮಕ್ಕಳನ್ನು ಸಖಿ ಒನ್ ಕೇಂದ್ರದಲ್ಲಿ ಆಶ್ರಯ ನೀಡಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.