ದಿವ್ಯಾಂಗ ಮುಸ್ಲಿಂ ಸಹಪಾಠಿಗೆ ನೆರವಾಗುವ ಹಿಂದೂ ಸ್ನೇಹಿತೆಯರು

  • ಕೈಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಅಲಿಫ್ ಮುಹಮ್ಮದ್‌
  • ಕಾಲೇಜಿಗೆ ಆತನನ್ನು ಕರೆ ತರುವ ಹಿಂದೂ ಯುವತಿಯರು
  • ಸಾಮರಸ್ಯ ಸಾರಿದ ಕೇರಳದ ಈ ಕಾಲೇಜು ವಿದ್ಯಾರ್ಥಿಗಳು
A Muslim differently abled youth Alif Muhammad was being helped by two Hindu friends Arya and Archana on the campus video viral akb

ದೇಶದಲ್ಲಿ ಕೋಮು ದ್ವೇಷ ವ್ಯಾಪಕವಾಗಿ ಹೊಗೆಯಾಡುತ್ತಿರುವ ಇಂದಿನ ದಿನಗಳಲ್ಲಿ ಕೇರಳದ ಶಾಲೆಯೊಂದರ ವಿದ್ಯಾರ್ಥಿಗಳು ಎಲ್ಲರಿಗೂ ಮಾದರಿಯಾಗಿದ್ದಾರೆ. ಹುಟ್ಟಿನಿಂದಲೇ ಎರಡು ಕಾಲುಗಳ ಸ್ವಾಧೀನವಿಲ್ಲದ ಮುಸ್ಲಿಂ ವಿಶೇಷಚೇತನ  ಯುವಕನೋರ್ವನನ್ನು ಆತನ ಇಬ್ಬರು ಹಿಂದೂ ಸಹಪಾಠಿಗಳು ಶಾಲೆಗೆ ಕರೆದುಕೊಂಡು ಬರುವುದು ಮನೆಗೆ ಕರೆದುಕೊಂಡು ಹೋಗುವುದು. ಕಾಲೇಜಿನಲ್ಲಿ ಆತನೇ ಮಾಡಲಾಗದ ಅಗತ್ಯವಾದ ಕೆಲಸಗಳನ್ನು ಮಾಡಿಕೊಡುವುದನ್ನು ಮಾಡುತ್ತಿದ್ದಾರೆ.

ವಿಕಲಚೇತನ ಯುವಕ ಅಲಿಫ್ ಮುಹಮ್ಮದ್‌ಗೆ (Alif Muhammad) ಕಾಲೇಜು ಕ್ಯಾಂಪಸ್‌ನಲ್ಲಿ ಇಬ್ಬರು ಹಿಂದೂ ಸ್ನೇಹಿತರಾದ ಆರ್ಯ (Arya) ಮತ್ತು ಅರ್ಚನಾ (Archana) ಸಹಾಯ ಮಾಡುತ್ತಾರೆ. ಇಬ್ಬರು  ಅಲಿಫ್‌ನ ಆಚೆ ಹಾಗೂ ಈಚೆ ನಿಂತು ಆತನ ಹೆಗಲಿಗೆ ಹೆಗಲು ಕೊಟ್ಟು ಆತನನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯತ್ತಾರೆ. ಈ ಇಬ್ಬರು ಹುಡುಗಿಯರು ತಮ್ಮ ಸಹಪಾಠಿ ಆಲಿಫ್‌ ಮುಹಮ್ಮದ್‌ನನ್ನು ಹೆಗಲಿನಲ್ಲಿ ನೇತಾಡಿಸಿಕೊಂಡು ಕರೆದುಕೊಂಡು ಹೋಗುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ (viral) ಆಗಿದ್ದು, ಶ್ಲಾಘನೆ ವ್ಯಕ್ತವಾಗಿದೆ. 

ಇವರೆಲ್ಲರೂ ಕೇರಳದ (Kerala) ಕೊಲ್ಲಂ (Kollam) ಜಿಲ್ಲೆಯ ಸಾಸ್ತಾಂಕೋಟ್ಟ (Sastamkotta) ಡಿ.ಬಿ ಕಾಲೇಜಿನ ಬಿಕಾಂ ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಾಗಿದ್ದಾರೆ. ಅಲಿಫ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಅಂಗವಿಕಲತೆ ಹೊಂದಿರುವ ಅಲಿಫ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅಲಿಫ್ ಮುಹಮ್ಮದ್‌ ತಂದೆ ತಾಯಿ ಇಬ್ಬರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಜೀನತ್ (Zeenath) ಹಾಗೂ ತಂದೆ ಶಾನವಾಸ್ (Shanavas) ಈ ವಿಡಿಯೋ ಹಾಗೂ ಚಿತ್ರ ನೋಡಿ ಭಾರೀ ಖುಷಿಪಟ್ಟಿದ್ದಾರೆ. 

ಜೀವಕ್ಕೆಲ್ಲಿದೆ ಧರ್ಮ ಭೇದ?: ಕೇರಳ ಮುಸ್ಲಿಮರಿಗೆ ನಮಾಜ್ ಮಾಡಲು ಜಾಗಕೊಟ್ಟ ದೇವಸ್ಥಾನ!

ನನಗೆ, ಜೀವನವು ಯಾವಾಗಲೂ ನನ್ನ ಸ್ನೇಹಿತರೊಂದಿಗೆ ಇರುತ್ತದೆ. ನಾನು ನನ್ನ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ (Two wheeler) ಕಾಲೇಜಿಗೆ ಹೋಗುತ್ತೇನೆ. ಕಾಲೇಜಿನಲ್ಲಿ ನನ್ನ ಗೆಳೆಯರು ಗೆಳತಿಯರು ಕರೆದುಕೊಂಡು ಹೋಗುತ್ತಾರೆ. ಇದು ನನಗೆ ದಿನಚರಿ. ಅವರು ನನ್ನನ್ನು ಎಂದಿಗೂ ಕೀಳರಿಮೆಗೆ ಒಳಪಡಿಸಿಲ್ಲ. ನನ್ನ ಸ್ನೇಹಿತರ್ಯಾರೂ ಸಹಾನುಭೂತಿಯಿಂದ ನನ್ನತ್ತ ನೋಡಿಲ್ಲ. ಅವರು ನನ್ನನ್ನು ಸಾಮಾನ್ಯ ಹುಡುಗನಂತೆ ಪರಿಗಣಿಸುತ್ತಾರೆ ಮತ್ತು ನನ್ನ ಸ್ನೇಹಿತರ ಬಗ್ಗೆ ನಾನು ಇಷ್ಟಪಡುತ್ತೇನೆ. ಈ ಚಿತ್ರ ನನಗೆ ತುಂಬಾ ಪ್ರಿಯವಾಗಿದೆ' ಎನ್ನುತ್ತಾರೆ ಅಲಿಫ್

ಅಯೋಧ್ಯೇಲಿ ಹನುಮಾನ್ ಛಾಲೀಸ್ ಪಠಿಸೋ ಮುಸ್ಲಿಮರು: ಕೋಮು ಸಾಮರಸ್ಯಕ್ಕಿಲ್ಲಿಲ್ಲ ಬರ 

ಉತ್ತರಪ್ರದೇಶದ ಈ ಮುಸ್ಲಿಂ ಉದ್ಯಮಿ ಮಾಡಿದ ಕಾರ್ಯ ಕೇಳಿದರೆ ಭಕ್ತಿಗೆ, ನಂಬಿಕೆಗೆ ಧರ್ಮ ಎಂಬ ಗಡಿಗಳಿಲ್ಲ ಎಂಬುದು ಸಾಬೀತಾಗುತ್ತದೆ. ಅಲ್ಲದೇ ಇತರ ಧರ್ಮವನ್ನು ಗೌರವಿಸುವುದಷ್ಟೇ ಅಲ್ಲ ಅದನ್ನು ಬೆಂಬಲಿಸುವ ಗುಣವೂ ನಮ್ಮ ಮಣ್ಣಿನಲ್ಲಿದೆ ಎಂಬುದು ಗೊತ್ತಾಗುತ್ತದೆ. ಲಕ್ನೋ ಮೂಲದ ಮುಸ್ಲಿಂ ಉದ್ಯಮಿ, ಶೈನ್ ಗ್ರೂಪ್ ಆಫ್ ಕಂಪನೀಸ್ ಮಾಲೀಕ ರಶೀದ್ ನಸೀಮ್ ಉತ್ತರಪ್ರದೇಶ ಮತ್ತು ಬಿಹಾರದ ವಿವಿಧೆಡೆ ಒಟ್ಟು 51 ದೇವಸ್ಥಾನ ಕಟ್ಟಲು ನೆರವಾಗಿದ್ದಾರೆ. ಉತ್ತರಪ್ರದೇಶ ಮತ್ತು ನೆರೆಯ ಬಿಹಾರ ರಾಜ್ಯಗಳಲ್ಲಿ 51 ದೇವಸ್ಥಾನಗಳನ್ನು ಕಟ್ಟಲು ರಶೀದ್ ಭೂಮಿಯನ್ನು ದಾನ ಮಾಡಿದ್ದಾರೆ. ಅಲ್ಲದೇ ಅಷ್ಟೂ ದೇವಾಲಯಗಳ ನಿರ್ಮಾಣ ವೆಚ್ಚವನ್ನು ತಾವೇ ಭರಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಕಾರ್ಯಕ್ಕೆ ಪ್ರೇರಣೆ ಎಂದು ಹೇಳುವ ರಶೀದ್, ಸಮಾಜದಲ್ಲಿ ಕೋಮು ಸಾಮರಸ್ಯ ಮತ್ತು ಪರಸ್ಪರರ ನಂಬಿಕೆಗಳನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಲಿ ಎಂದು ಬಯಸಿ ದೇವಾಲಯ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios