8 ವರ್ಷಗಳ ದಣಿವರಿಯದ ಪಯಣ, ಸವಾಲುಗಳ ಹಾದಿಯಲ್ಲಿ ಮೋದಿ ಸಾಧನೆಯ ಹೆಜ್ಜೆ

ನರೇಂದ್ರ ಮೋದಿ ಪ್ರಧಾನಿಯಾಗಿ ಮೇ 26ಕ್ಕೆ 8 ವರ್ಷ. ಹೊಸತನಕ್ಕೆ ತುಡಿಯುತ್ತಿದ್ದ ದೇಶದ 130 ಕೋಟಿ ಮನಸ್ಸುಗಳ ಆಶಯ ಈಡೇರಿಸುವಲ್ಲಿ ಕಳೆದ 8 ವರ್ಷಗಳಲ್ಲಿ ನರೇಂದ್ರ ಮೋದಿ ಕ್ರಮಿಸಿದ ಹಾದಿ ಬಲು ದೂರದ್ದು.

A Look At The Modi Govt Eight Year Of Governance Journey hls

ನರೇಂದ್ರ ಮೋದಿ ಪ್ರಧಾನಿಯಾಗಿ ಮೇ 26ಕ್ಕೆ 8 ವರ್ಷ. ಹೊಸತನಕ್ಕೆ ತುಡಿಯುತ್ತಿದ್ದ ದೇಶದ 130 ಕೋಟಿ ಮನಸ್ಸುಗಳ ಆಶಯ ಈಡೇರಿಸುವಲ್ಲಿ ಕಳೆದ 8 ವರ್ಷಗಳಲ್ಲಿ ನರೇಂದ್ರ ಮೋದಿ ಕ್ರಮಿಸಿದ ಹಾದಿ ಬಲು ದೂರದ್ದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಎಲ್ಲಾ ಸೇವೆಗಳು ಲಭ್ಯವಾಗಬೇಕು, ಪ್ರತಿಯೊಬ್ಬರಿಗೂ ಉತ್ತಮ ಆಡಳಿತ ದೊರಕಿಸಬೇಕು, ಘೋಷಣೆಯಲ್ಲೇ ಉಳಿದಿದ್ದ ಬಡವರ ಕಲ್ಯಾಣ ವಾಸ್ತವ ರೂಪದಲ್ಲಿ ಜಾರಿಯಾಗಬೇಕೆಂಬ ಹಂಬಲದೊಂದಿಗೆ, ಮೋದಿ ಸರ್ಕಾರ ಸಾಗಿದ 8 ವರ್ಷ ಪ್ರಯಾಣ ಸ್ಮರಣಾರ್ಹ.

ಮೋದಿ, ಬಿಜೆಪಿಯಲ್ಲಿ ನಂಬಿಕೆ, ವಿಶ್ವಾಸ

2014ರ ಲೋಕಸಭಾ ಚುನಾವಣೆ, ದೇಶದ ಇತಿಹಾಸದಲ್ಲಿ ಹೊಸ ಪರ್ವಕ್ಕೆ ಮುನ್ನುಡಿ ಬರೆದ ಸಮಯ. ಹಿಂದಿನ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಆರೋಪದಿಂದ ಬೇಸತ್ತಿದ್ದ ದೇಶದ ಜನತೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದರು. 30 ವರ್ಷಗಳ ನಂತರ ಒಂದೇ ಪಕ್ಷಕ್ಕೆ ಸ್ಪಷ್ಟಬಹುಮತ ಬಂದಿತ್ತು. ಇನ್ನು 2019ರಲ್ಲಿ, ಎನ್‌ಡಿಎ ಸರ್ಕಾರ ಇನ್ನೂ ದೊಡ್ಡ ಜನಾದೇಶದೊಂದಿಗೆ ಅಧಿಕಾರಕ್ಕೆ ಮರಳಿತು. ಬಿಜೆಪಿಯ ಸಂಖ್ಯಾಬಲ 282ರಿಂದ 303ಕ್ಕೆ ಏರಿಕೆಯಾಯಿತು. 6 ದಶಕಗಳ ನಂತರ 5 ವರ್ಷಗಳ ಕಾಲ ಸಂಪೂರ್ಣ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರದ ಅದೇ ಪ್ರಧಾನಿ ನೇತೃತ್ವದಲ್ಲಿ ಮತ್ತೆ ಆಯ್ಕೆಯಾಗಿ ದಾಖಲೆ ಬರೆಯಿತು.

'ತೈಲ ಬೆಲೆ ಏರಿಳಿಸುವುದರಲ್ಲಿ ಮೋದಿ ಮ್ಯಾಜಿಕ್ ಮ್ಯಾನ್'

ಸಮರ್ಥ ನಾಯಕತ್ವದ ಅನಾವರಣ

2014ರಲ್ಲಿ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಮೋದಿ ಎದುರಿಸಿದ್ದು ಹತ್ತಾರು ಸವಾಲು. ಇಂಥ ಸವಾಲುಗಳ ನಡುವೆಯೇ ಪ್ರಧಾನಿ ಮೋದಿ ‘ಸೇವಾ, ಸುಶಾಸನ್‌, ಗರೀಬ್‌ ಕಲ್ಯಾಣ್‌’ (ಸೇವೆ, ಉತ್ತಮ ಆಡಳಿತ, ಬಡವರ ಕಲ್ಯಾಣ) ಮೂಲಕ ತಮ್ಮ ನಾಯಕತ್ವ ಪ್ರದರ್ಶಿಸಿದರು. ಗಾಂಧೀಜಿಯವರ ಪ್ರಮುಖ ಕನಸಾಗಿದ್ದ ಸಂಪೂರ್ಣ ನೈರ್ಮಲ್ಯದ ಹಾದಿಯಲ್ಲಿ ಸ್ವಚ್ಛತೆ ಮತ್ತು ಶೌಚಾಲಯ ನಿರ್ಮಾಣದಂತಹ ವಿಷಯಗಳಿಗೆ ಮೋದಿ ಆದ್ಯತೆ ನೀಡಿದರು. ಇಂಥ ಯತ್ನಗಳು ಸ್ವಚ್ಛತೆಯ ಜೊತೆಜೊತೆಗೆ ಬಡತನದ ವಿರುದ್ಧದ ಹೋರಾಟವನ್ನೂ ಬಲಪಡಿಸಿತು. ಆರೋಗ್ಯದ ಗುಣಮಟ್ಟಸುಧಾರಣೆ, ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಕಲ್ಪಿಸಿತು.

ಮೋದಿ ಮೇಲಿನ ನಂಬಿಕೆಗೆ ಎಲ್‌ಪಿಜಿ ಸಬ್ಸಿಡಿ ತ್ಯಾಗವೇ ಸಾಕ್ಷಿ

ಹಿಂದಿನ ಸರ್ಕಾರಗಳ ಮೇಲಿನ ದುರಾಡಳಿತ, ಭ್ರಷ್ಟಾಚಾರದ ಆರೋಪದಿಂದಾಗಿ ಜನರು ಬದಲಾವಣೆ ಬಯಸಿದ್ದರು. ಇಂತಹ ಸಂದರ್ಭದಲ್ಲಿ ಮೋದಿ ನೀಡಿದ ಭ್ರಷ್ಟಾಚಾರ ರಹಿತ ಆಡಳಿತ ಅವರ ಮೇಲಿನ ಜನರ ವಿಶ್ವಾಸವನ್ನು ಹಿಗ್ಗಿಸಿತು. ಪ್ರಧಾನಿಯ ಕರೆಗೆ ಓಗೊಟ್ಟು, ಶ್ರೀಮಂತರು ಮಾತ್ರವಲ್ಲದೇ ಮಧ್ಯಮ ವರ್ಗದ ಜನರು ಕೂಡಾ ತಮ್ಮ ಸ್ವಂತ ಎಲ್‌ಪಿಜಿ ಸಬ್ಸಿಡಿ ಬಿಟ್ಟುಕೊಟ್ಟಿದ್ದು ಇದಕ್ಕೊಂದು ಉದಾಹರಣೆ.

ಸಬ್‌ ಕಾ ಸಾಥ್‌.....

ದೇಶವಿಂದು 135 ಕೋಟಿ ಭಾರತೀಯರ ಸಾಮರ್ಥ್ಯ, ಕೌಶಲ್ಯದಿಂದ ‘ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌, ಸಬ್ಕಾ ವಿಶ್ವಾಸ್‌, ಸಬ್ಕಾ ಪ್ರಯಾಸ್‌’ ಎಂಬ ಮಂತ್ರದಿಂದÜ ನಡೆಸಲ್ಪಡುತ್ತಿದೆ. ಕೇಂದ್ರ ಸರ್ಕಾರ ಬಡತನ ನಿವಾರಣೆ ಮತ್ತು ಸಮೃದ್ಧಿ ಹೆಚ್ಚಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿಯೇ ಸರ್ಕಾರದ ಕೆಲಸವು ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರು ಅಂತ್ಯೋದಯ ಎಂದು ಕರೆದುದ್ದಕ್ಕೆ ಅನುಗುಣವಾಗಿದೆ. ಅಂದರೆ ಸರದಿಯಲ್ಲಿರುವ ಕೊನೆಯ ವ್ಯಕ್ತಿಗೂ ಸೇವೆ ಸಲ್ಲಿಸುವುದು.

ಮೋದಿ ಪ್ರಧಾನಿಯಾಗಿ ಇಂದಿಗೆ 8 ವರ್ಷ

ಸಣ್ಣ ಕೃಷಿಕರಿಗೂ ಕೃಪೆ ತೋರಿದ ಸರ್ಕಾರ

ದೇಶದ ಶೇ.70ರಷ್ಟುಜನರ ಬದುಕು ಕೃಷಿ ಮೇಲೆ ಅವಲಂಬಿತ. ಈ ಪೈಕಿ ಬಹುತೇಕರು ಸಣ್ಣ ಕೃಷಿಕರು. ಈ ವಿಷಯವನ್ನು ಮನಗಂಡ ಕೇಂದ್ರ ಸರ್ಕಾರ ‘ಪಿಎಂ-ಕಿಸಾನ್‌ ಯೋಜನೆ’ ಮೂಲಕ ರೈತರ ಹಣಕಾಸಿನ ಹೊರೆ ಕಡಿಮೆ ಮಾಡಿತು. ನೀರಾವರಿ ಸುಧಾರಣೆಗೆ, ಬೇವು ಲೇಪಿತ ಯೂರಿಯಾ ಒದಗಿಸುವ ಪ್ರಯತ್ನಗಳು ರೈತರಿಗೆ ಮತ್ತಷ್ಟುನೆರವು ಕಲ್ಪಿಸಿದವು. ರೈತರ ಆದಾಯ ದ್ವಿಗುಣಗೊಳಿಸುವ ಕನಸು ನನಸು ಮಾಡುವ ಆಶಯಕ್ಕೆ ಸರ್ಕಾರದ ಈ ಪ್ರಯತ್ನಗಳು ನೀರೆರೆದವು.

ಮೇಕ್‌ ಇನ್‌ ಇಂಡಿಯಾ ಯಶಸ್ಸು

ದೇಶೀಯವಾಗಿ ವಸ್ತುಗಳನ್ನು ಉತ್ಪಾದಿಸುವ ಗುರಿಯೊಂದಿಗೆ ಆರಂಭಿಸಲಾದ ಮೇಕ್‌ ಇನ್‌ ಇಂಡಿಯಾ, ಸರ್ಕಾರದ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದ ಯೋಜನೆ. ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವಲ್ಲಿನ ದಾಪುಗಾಲು, ಆಡಳಿತ ಸುಧಾರಣಾ ಕ್ರಮಗಳು, ಪಿಎಲ್‌ಐ ಯೋಜನೆಗಳು ಯಶಸ್ಸು, ಮೇಕ್‌ ಇನ್‌ ಇಂಡಿಯಾ ಮೂಲಕ ವ್ಯಕ್ತವಾದವು. ಸರ್ಕಾರದ ನೆರವಿನ ಪರಿಣಾಮ ಸ್ಟಾರ್ಟಪ್‌ ವಲಯ ಅಭೂತಪೂರ್ವ ಬೆಳವಣಿಗೆ ಕಂಡಿತು. ಮಹಿಳಾ ಸಬಲೀಕರಣದ ದಿಸೆಯಲ್ಲಿ ಜಾರಿಗೊಳಿಸಿದ ಉಜ್ವಲ, ಬೇಟಿ ಬಚಾವೋ, ಬೇಟಿ ಪಢಾವೋ ಆಂದೋಲನ, ಮಹಿಳೆಯರ ಹೆಸರಿನಲ್ಲಿ ವಸತಿ ಒದಗಿಸುವ ಯೋಜನೆಗಳು ಅಭಿವೃದ್ಧಿಯ ಹೊಸ ಶಕೆಗೆ ಕಾರಣವಾಯಿತು. ಮೀನುಗಾರರಿಗೆ ಕೆಸಿಸಿ ಕಾರ್ಡ್‌ ನೀಡುವಂತಹ ನಿರ್ಧಾರಗಳು ಮೀನುಗಾರಿಕಾ ವಲಯದಲ್ಲಿ ಅತ್ಯುತ್ತಮ ಫಲಿತಾಂಶ ನೀಡಿದರೆ, ಆಯುಷ್ಮಾನ್‌ ಭಾರತ್‌ ಯೋಜನೆ ಲಕ್ಷಾಂತರ ಭಾರತೀಯರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಗೆ ಲಭ್ಯವಾಗುವಂತೆ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೈಗೆಟುಕುವ ದರದಲ್ಲಿ ಔಷಧಗಳನ್ನು ಖಾತ್ರಿಪಡಿಸಿತು.

ವಿಶ್ವ ಬುದ್ಧನ ಪಥದಲ್ಲಿ ಸಾಗಬೇಕು: ಯುದ್ಧದ ವೇಳೆ ಶಾಂತಿ ಕಾಪಾಡಲು ನಮೋ ಸೂತ್ರ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ

ಶೈಕ್ಷಣಿಕ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾಗಲ್ಲದೆಂದು ಊಹಿಸಲಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀಡಿ ಕೇಂದ್ರ ಸರ್ಕಾರದ ಮತ್ತೊಂದು ಮಹತ್ವಕಾಂಕ್ಷಿ ಯೋಜನೆ. 30 ವರ್ಷಗಳ ಬಳಿಕ ದೇಶದಲ್ಲಿ ಹೊಸ ಶಿಕ್ಷಣ ನೀತಿ ಪರಿಚಯಿಸಲಾಗಿದ್ದು, ಹೊಸ ನೀತಿಯು, ದೇಶವು ಶಿಕ್ಷಣ, ನಾವೀನ್ಯತೆ ಮತ್ತು ಸಂಶೋಧನೆಯ ಕೇಂದ್ರವಾಗಿ ಹೊರಹೊಮ್ಮಲು ವೇದಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣಕ್ಕೆ ಅವಕಾಶ ನೀಡುವ ಸರ್ಕಾರದ ನಿರ್ಧಾರ, ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳ ಸಂಖ್ಯೆ ಹೆಚ್ಚಳವು ಮತ್ತಷ್ಟುವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ನನಸಾಗಿಸಿದೆ.

ತಂತ್ರಜ್ಞಾನ, ಸಂಸ್ಕೃತಿಗೆ ಒತ್ತು

ತಂತ್ರಜ್ಞಾನವು, ಸರ್ಕಾರದ ಯೋಜನೆಗಳನ್ನು ದೇಶದ ಅತ್ಯಂತ ಕುಗ್ರಾಮಕ್ಕೂ ತಲುಪುವ ಸಂಪರ್ಕ ಸೇತುವೆಯಾಗಬೇಕೆಂಬ ಮೋದಿ ಹಂಬಲದ ಫಲವೇ, ಸರ್ಕಾರದ ಪ್ರತಿ ಯೋಜನೆಗೂ ತಂತ್ರಜ್ಞಾನದ ಸ್ಪರ್ಶಕ್ಕೆ ಕಾರಣವಾಗಿದೆ. ಎಂಒ (ಜನ್‌ ಧನ್‌ ಆಧಾರ್‌ ಮೊಬೈಲ್‌) ಟ್ರಿನಿಟಿ ಮತ್ತು ನೇರ ವರ್ಗಾವಣೆಗೂ ಯಾವುದೇ ಮಧ್ಯವರ್ತಿಗಳಿಲ್ಲದೆ ಕೋಟ್ಯಂತರ ಜನರನ್ನು ತಲುಪಿಸಿದೆ.

ತನ್ನ ಬೇರುಗಳ ಬಗ್ಗೆ ಹೆಮ್ಮೆ ಪಡದ ಸಮಾಜ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಮ್ಮ ವೈವಿಧ್ಯತೆ, ನಮ್ಮ ನಂಬಿಕೆಗಳು, ಭಾಷೆಗಳೂ, ಸಂಸ್ಕೃತಿಗಳು ಮತ್ತು ಪದ್ಧತಿಗಳು ಭಾರತದ ಶಕ್ತಿ ಎಂದು ಪ್ರಧಾನಿ ಮೋದಿ ಪದೇ ಪದೇ ಎತ್ತಿ ತೋರಿಸಿದ್ದಾರೆ. ಹಲವಾರು ಪುರಾತನ ವಸ್ತುಗಳು ಮತ್ತು ಕಲಾಕೃತಿಗಳು ಭಾರತಕ್ಕೆ ಮರಳುತ್ತಿರುವುದು ಕೇಂದ್ರ ಸರ್ಕಾರದ ಅವಿರತ ಶ್ರಮಕ್ಕೆ ಸಾಕ್ಷಿ.

ಮೂಲೆ ಗುಂಪಾಗಿದ್ದ ಈಶಾನ್ಯ ಭಾಗದಲ್ಲೀಗ ಅಭಿವೃದ್ಧಿ ಪರ್ವ

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಪರಿಕಲ್ಪನೆಯನ್ನು ಸರ್ಕಾರ ಪರಿಚಯಿಸಿತು. ಇದು ಅಭಿವೃದ್ಧಿಯ ಅಂಚಿನಲ್ಲಿ ಉಳಿದಿರುವ ಪ್ರದೇಶಗಳಿಗೆ ವಿಸ್ತೃತ ಗಮನ ನೀಡುವ ಉದ್ದೇಶ, ಗುರಿ ಹೊಂದಿವೆ. ಪರಿಣಾಮ ಹಿಂದೆ ಹಿಂಸಾಚಾರ ಮತ್ತು ದಿಗ್ಬಂಧನಗಳಿಗೆ ಹೆಸರಾಗಿದ್ದ ಈಶಾನ್ಯ ಈಗ ದಾಖಲೆಯ ಅಭಿವೃದ್ಧಿಯಿಂದ ಸುದ್ದಿ ಮಾಡುತ್ತಿವೆ. ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಗಡಿ ಪ್ರದೇಶಗಳು ಮತ್ತು ಅಲ್ಲಿನ ಮೂಲಸೌಕರ್ಯಗಳನ್ನು ಬಲಪಡಿಸುವ ಬಗ್ಗೆ ವಿಶೇಷ ಗಮನವನ್ನು ನೀಡಲಾಗಿದೆ.

ಕೋವಿಡ್‌ ಸವಾಲು ಮೆಟ್ಟಿನಿಂತ ಮೋದಿ

2020ರ ವರ್ಷ ಇಡೀ ಭೂಮಿಗೆ ಸವಾಲಿನ ವರ್ಷವಾಗಿತ್ತು. ಶತಮಾನಕ್ಕೊಮ್ಮೆ ಸಂಭವಿಸುವ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಾಕ್ಷಿಯಾಯಿತು. ಪ್ರತಿ ಹಂತದಲ್ಲೂ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವಿಜ್ಞಾನ-ಚಾಲಿತ ವಿಧಾನವನ್ನು ಮೋದಿ ಒತ್ತಿ ಹೇಳಿದರು. ಮೊದಲಿನಿಂದಲೂ ವೈರಸ್‌ ಹರಡುವುದನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಯಿತು. ಸೀಮಿತ ಲಾಕ್ಡೌನ್‌, ಅಗತ್ಯವಿದ್ದಾಗ ಪೂರ್ಣ ಲಾಕ್ಡೌನ್‌, ವ್ಯಾಪಕವಾದ ಲಸಿಕಾಕರಣ, ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮೂಲಕ ಕೋವಿಡ್‌ ಸಾಂಕ್ರಾಮಿಕವನ್ನು ಮೆಟ್ಟಿನಿಲ್ಲುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಯಿತು.

ಕಡಿಮೆ ಜನಸಂಖ್ಯೆ ಹೊಂದಿರುವ ವಿಶ್ವದ ಮುಂದುವರೆದ, ಶ್ರೀಮಂತ ದೇಶಗಳೇ ಪರಿಸ್ಥಿತಿ ನಿರ್ವಹಣೆಯಲ್ಲಿ ಕೈಚೆಲ್ಲಿ ಕುಳಿತಾಗ, ಮೋದಿ ಸರ್ಕಾರ 3ನೇ ಅಲೆಯ ಪರಿಣಾಮಗಳನ್ನು ಯಶಸ್ವಿಯಾಗಿ ತಡೆಯಿತು. ಭಾರತದ ಕೋವಿಡ್‌ ನಿರ್ವಹಣೆಗೆ ಜಗತ್ತಿಗೆ ಮಾದರಿಯಾಯಿತು. ಅಷ್ಟುಮಾತ್ರವಲ್ಲ ಕೋವಿಡ್‌ ಸಾಂಕ್ರಾಮಿಕದ ವೇಳೆ ವಿಶ್ವಕ್ಕೆ ಅತ್ಯಗತ್ಯವಾದ ನಾನಾ ರೀತಿಯ ಔಷಧ, ಲಸಿಕೆ, ಚಿಕಿತ್ಸಾ ಉಪಕರಣಗಳನ್ನು ದಾಖಲೆ ಮಟ್ಟದಲ್ಲಿ ಪೂರೈಸುವ ಮೂಲಕ ಭಾರತ ವಿಶ್ವಗುರುವಾಗಿ ಹೊರಹೊಮ್ಮುವಂತೆ ಮಾಡಿದ್ದು ಮೋದಿ ಹಿರಿಮೆ.

ಜಪಾನ್‌ನಲ್ಲಿ ಮೊಳಗಿತು ಜೈ ಹೋ ಮೋದಿ, ಚೀನಾಗೆ ಪುಕಪುಕ!

ಅಭಿವೃದ್ಧಿ ಪಥದಲ್ಲೂ ಅರಣ್ಯ, ಪರಿಸರ ವೃದ್ಧಿ

ಕಳೆದ 8 ವರ್ಷಗಳಲ್ಲಿ ಭಾರತವು ಪರಿಸರವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರಾರಂಭಿಸಿದೆ. ಭಾರತದ ಅರಣ್ಯ ಪ್ರದೇಶವು ಹೆಚ್ಚಿದೆ. ಸಿಂಹ, ಹುಲಿ, ಘೇಂಡಾಮೃಗ ಮತ್ತು ಚಿರತೆಗಳ ಸಂಖ್ಯೆಯೂ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಮೂಲಸೌಕರ್ಯಗಳ ಒಕ್ಕೂಟ ಸ್ಥಾಪಿಸಲು ಪ್ರಧಾನಿ ಮೋದಿ ಅವರ ಪ್ರಯತ್ನಗಳು ನಮ್ಮ ಗ್ರಹವನ್ನು ಸ್ವಚ್ಛ ಮತ್ತು ಹಸಿರು ಮಾಡಲು ಮುರಿಯಲಾಗದ ಬದ್ಧತೆಯನ್ನು ವ್ಯಕ್ತಪಡಿಸಿವೆ. ಪರಿಸರ, ಸಬಲೀಕರಣ ಮತ್ತು ಆರ್ಥಿಕ ಬೆಳವಣಿಗೆ ಒಟ್ಟಿಗೆ ಸಾಗಬಹುದು ಎಂಬುದನ್ನು ದೇಶ ನಿರೂಪಿಸಿದೆ. ಯಾತ್ರಿಕರು ಮತ್ತು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ಸರ್ಕಾರ ನೀಡಿದೆ. ಭಾರತದ ಸಂಸ್ಕೃತಿಯಲ್ಲಿ ಆಸಕ್ತಿ ಬಲಪಡಿಸುವ ಜೊತೆಗೆ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುವ ಇಂಥ ಯೋಜನೆಗೆ ಪ್ರಮುಖ ಉದಾಹರಣೆ ಕಾಶಿ ವಿಶ್ವನಾಥ ಕಾರಿಡಾರ್‌.

ಅನಿವಾಸಿಯರ ಜೊತೆಗಿನ ಸಂಬಂಧಕ್ಕೆ ಹೊಸ ವ್ಯಾಖ್ಯಾನ

ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿಯವರು ತಮಿಳಿನಲ್ಲಿ ಹೇಳಿದ ಮಾತುಗಳು ಅವರಿಗೆ ವಿವಿಧ ಭಾರತೀಯ ಭಾಷೆಗಳ ಮೇಲಿನ ಪ್ರೀತಿಯನ್ನು ಸೂಚಿಸುತ್ತವೆ. ಪ್ರಧಾನಿ ಮೋದಿ ಅವರ ಇಂಡಿಯಾ ಫಸ್ಟ್‌ ವಿದೇಶಿ ನೀತಿಯು ಅದ್ಭುತ ಫಲಿತಾಂಶಗಳಿಗೆ ಕಾರಣವಾಗಿದೆ. ಇದು ಹೆಚ್ಚಿನ ಹೂಡಿಕೆ ಮತ್ತು ಬಲವಾದ ಜನರ-ಜನರ ಸಂಬಂಧಗಳಿಗೆ ಕಾರಣವಾಗಿದೆ. ಅವರು ವಿದೇಶದಲ್ಲಿನ ಭಾರತೀಯ ಸಮುದಾಯದವರ ಜೊತೆಗಿನ ಸಂಬಂಧವನ್ನು ಮರು ವ್ಯಾಖ್ಯಾನಿಸಿದ್ದಾರೆ ಮತ್ತು ಅವರನ್ನು ಭಾರತದ ಬಾಹ್ಯ ಸಂಬಂಧಗಳ ಅವಿಭಾಜ್ಯ ಸ್ತಂಭಗಳಾಗಿ ಮಾಡಿದ್ದಾರೆ.

ಲಸಿಕೆ ಮಾತ್ರವಲ್ಲ; ಬಡವರಿಗೆ ಆಹಾರ ಭದ್ರತೆ:

ಕೋವಿಡ್‌ ಸಮಯದಲ್ಲಿ, ದೇಶದ ಜನರ ಆರೋಗ್ಯ ಕಾಪಾಡುವ ಜೊತೆಗೆ ಬಡವರು ಹಸಿವನಿಂದ ಜೀವ ಕಳೆದುಕೊಳ್ಳದಂತೆ ಕಾಪಾಡಿದ್ದು ಕೂಡಾ ಮೋದಿ ಸರ್ಕಾರದ ಸಾಧನೆ. ಸಾಂಕ್ರಾಮಿಕದ ಅವಧಿಯುದ್ದಕ್ಕೂ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರವನ್ನು ಸರ್ಕಾರ ಖಾತ್ರಿಪಡಿಸಿದರು. ಇದು ಕೋಟ್ಯಂತರ ಜನರು ಮತ್ತಷ್ಟುಬಡತನದ ಕೂಪಕ್ಕೆ ತಳ್ಳದಂತೆ ಕಾಪಾಡುವ ಜೊತೆಗೆ ಜನರ ಜೀವ ಉಳಿಸಲೂ ನೆರವಾಯಿತು.

Latest Videos
Follow Us:
Download App:
  • android
  • ios