Asianet Suvarna News Asianet Suvarna News

'ತೈಲ ಬೆಲೆ ಏರಿಳಿಸುವುದರಲ್ಲಿ ಮೋದಿ ಮ್ಯಾಜಿಕ್‌ ಮ್ಯಾನ್‌'

*  ಇನ್ನರೆಡು ದಿನಗಳಲ್ಲಿ ತೈಲ ಬೆಲೆ ಯಥಾಸ್ಥಿತಿಗೆ
*  ಕಾಂಗ್ರೆಸ್‌ದಲ್ಲಿ ಕಾರ್ಯಕರ್ತರಿಗೆ ಟಿಕೆಟ್‌ ನೀಡಿರುವುದು ಒಳ್ಳೆಯ ಬೆಳವಣಿಗೆ
*  ರಾಜ್ಯದಲ್ಲಿ ಬಿಜೆಪಿ ಕಟ್ಟಿಬೆಳೆಸಿದ ಮಹಾ ನಾಯಕ ಯಡಿಯೂರಪ್ಪರನ್ನು ಕಡೆಗಣಿಸಲಾಗುತ್ತಿದೆ

Congress Leader Satish Jarkiholi Talks Over PM Narendra Modi grg
Author
Bengaluru, First Published May 26, 2022, 6:46 AM IST

ಗೋಕಾಕ(ಮೇ.26): ತೈಲ ಬೆಲೆ ಏರಿಳಿಸುವುದರಲ್ಲಿ ಮೋದಿ ಮ್ಯಾಜಿಕ್‌ ಮ್ಯಾನ್‌, ಇನ್ನರೆಡು ದಿನಗಳಲ್ಲಿ ತೈಲ ಬೆಲೆ ಯಥಾಸ್ಥಿತಿಗೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.

ನಗರದ ಹಿಲ್‌ ಗಾರ್ಡನ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಇಳಿಕೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಆಡಳಿತದಲ್ಲಿದಾಗ ಜನರಿಗೆ ಯಾವುದೇ ಹೊರೆಯಾಗಿಲ್ಲ. ಆದರೆ ದೇಶದಲ್ಲಿ ಮೋದಿ ಮ್ಯಾಜಿಕ್‌ನಿಂದ ಇದೇಲ್ಲ ಸರ್ಕಸ್‌ ನಡೆಯುತ್ತಿದೆ ಎಂದರು.

ಬಡವರನ್ನು ಬಡವರಾಗಿಯೇ ಮಾಡುವುದೇ ಬಿಜೆಪಿ ಸಿದ್ಧಾಂತ: ಸತೀಶ್ ಜಾರಕಿಹೊಳಿ

ರಾಜ್ಯದಲ್ಲಿ ಬಿಜೆಪಿ ಕಟ್ಟಿಬೆಳೆಸಿದ ಮಹಾ ನಾಯಕ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ. ಮೊದಲು ತಮ್ಮಲಿರುವ ಹುಳುಕನ್ನು ಬಿಜೆಪಿ ಸರಿಪಡಿಸಿಕೊಳ್ಳಲಿ. ಆಮೇಲೆ ವಿರೋಧ ಪಕ್ಷದ ಕುರಿತು ಮಾತನಾಡಲಿ ಎಂದರು. ನಮ್ಮ ಪಕ್ಷದಲ್ಲಿ ಯಾವುದೇ ರೀತಿ ಗೊಂದಲಗಳಿಲ್ಲ. ಒಂದು ವೇಳೆ ಗೊಂದಲಗಳು ಬಂದರೆ ನಾವೇಲ್ಲಾ ಒಂದುಗೂಡಿ ನಮ್ಮಲಿಯೇ ಬಗೆಹರಿಸಿಕೊಳ್ಳುತ್ತೆವೆ. ಮೊದಲು ಬಿಜೆಪಿ ತಮ್ಮಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಎಂದು ಚಾಟಿ ಬೀಸಿದರು.

ಕಾಂಗ್ರೆಸ್‌ದಲ್ಲಿ ಕಾರ್ಯಕರ್ತರಿಗೆ ಟಿಕೆಟ್‌ ನೀಡಿರುವುದು ಒಳ್ಳೆಯ ಬೆಳವಣಿಗೆ, ಇದರಿಂದ ಕಾರ್ಯಕರ್ತರಿಗೆ ಕೆಲಸ ಮಾಡಲು ಹುಮ್ಮಸು ಹೆಚ್ಚಿಸುತ್ತಿದೆ. ಈಗಾಗಲೇ ಕಾಂಗ್ರೆಸ್‌ ನಿಂದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಅಭ್ಯರ್ಥಿಗಳು ಈಗಾಗಲೇ ಬಾಗಲಕೋಟೆ, ವಿಜಯಪುರ, ಬೆಳಗಾವಿ ಭಾಗದಲ್ಲಿ ಪ್ರಚಾರ ಕೈಗೊಂಡಿದ್ದಾರೆ ಎಂದರು.
 

Follow Us:
Download App:
  • android
  • ios