Asianet Suvarna News Asianet Suvarna News

ಚಿಂದಿ ಅಂತ ಛೀ ಅನ್ಬೇಡಿ... ಮನೆ ಮನೆಯಿಂದ ಕಸ ಆಯ್ದು ಸಂಪಾದಿಸಿದ್ದು ಕೋಟಿ ಲೆಕ್ಕದಲ್ಲಿ

ಗುಜುರಿ ಮಾರಿದ್ರೆ ಎಷ್ಟು ಸಂಪಾದನೆ ಮಾಡ್ಬಹುದು ಸಾವಿರ, ಲಕ್ಷ ಒಂದು ವೇಳೆ ಗುಜುರಿ ಸಾಮಾನುಗಳು ಸ್ವಲ್ಪ ಅಮೂಲ್ಯವೆನಿಸಿಸುವಂತಿದ್ದರೆ, ಹೆಚ್ಚೆಂದರೆ 10 ಲಕ್ಷ, ಆದರೆ ಕೇರಳದ ಸಂಸ್ಥೆಯೊಂದು ಗುಜುರಿ ಮಾರಿ ಬರೋಬ್ಬರಿ 5 ಕೋಟಿ ಸಂಪಾದನೆ ಮಾಡಿದೆ.

A Kerala Company owned by the state government and local bodies earned 5 crore profit by selling waste akb
Author
First Published Oct 5, 2022, 3:31 PM IST

ತಿರುವನಂತಪುರ: ಗುಜುರಿ ಮಾರಿದ್ರೆ ಎಷ್ಟು ಸಂಪಾದನೆ ಮಾಡ್ಬಹುದು ಸಾವಿರ, ಲಕ್ಷ ಒಂದು ವೇಳೆ ಗುಜುರಿ ಸಾಮಾನುಗಳು ಸ್ವಲ್ಪ ಅಮೂಲ್ಯವೆನಿಸಿಸುವಂತಿದ್ದರೆ, ಹೆಚ್ಚೆಂದರೆ 10 ಲಕ್ಷ, ಆದರೆ ಕೇರಳದ ಸಂಸ್ಥೆಯೊಂದು ಗುಜುರಿ ಮಾರಿ ಬರೋಬ್ಬರಿ 5 ಕೋಟಿ ಸಂಪಾದನೆ ಮಾಡಿದೆ. ಹೌದು ಕ್ಲೀನ್ ಕೇರಳ ಕಂಪನಿ ಲಿಮಿಟೆಡ್ ಎಂಬ ಸಂಸ್ಥೆಯೇ ಹೀಗೆ ವೇಸ್ಟ್ ಮಾರಿ 5 ಕೋಟಿ ಸಂಪಾದನೆ ಮಾಡಿದ ಸಂಸ್ಥೆ. ಇದು 1972 ಟನ್ ಇ-ವೇಸ್ಟ್ ಮಾರಿ 5 ಕೋಟಿ ಸಂಪಾದನೆ ಮಾಡಿದೆಯಂತೆ ಸಂಸ್ಥೆಯೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 

ಪರಿಸರ ಸ್ನೇಹಿ ಪ್ರಕ್ರಿಯೆಗಳನ್ನು ಅಳವಡಿಸಿಕೊಂಡು ತ್ಯಾಜ್ಯವನ್ನು ನಿರ್ಮೂಲನೆ ಮಾಡುವ  ಕ್ಲೀನ್ ಕೇರಳ ಕಂಪನಿ ಲಿಮಿಟೆಡ್ (CKCL) ಸಂಸ್ಥೆಯೂ ತನ್ನ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಕೇವಲ 20 ತಿಂಗಳಲ್ಲಿ 5 ಕೋಟಿ ರೂಪಾಯಿಗಳ ಲಾಭವನ್ನು ಪಡೆದಿರುವುದಾಗಿ ವರದಿ ಮಾಡಿದೆ. ಕೇರಳ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆ ಜಂಟಿಯಾಗಿ ನಡೆಸುತ್ತಿರುವ 'ಕ್ಲೀನ್ ಕೇರಳ ಕಂಪನಿ ಲಿಮಿಟೆಡ್'(Clean Kerala Company Ltd) ಸಂಸ್ಥೆಯೂ ಒಟ್ಟು 7,382 ಟನ್ ಮರು ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಈ ಸಾಧನೆ ಮಾಡಿದೆ. 

ಬೆಂಗಳೂರಿನ ತ್ಯಾಜ್ಯ ವಿಲೇವಾರಿಗೆ 590 ಕೋಟಿಯ ಟೆಂಡರ್‌..!

20 ತಿಂಗಳ ಅವಧಿಯಲ್ಲಿ ಈ ಅವಧಿಯಲ್ಲಿ ಸಿಕೆಸಿಎಲ್ 1,972 ಟನ್ ಇ-ತ್ಯಾಜ್ಯವನ್ನು ವಿವಿಧ ಮರು ಬಳಕೆ ಮತ್ತು ಸಂಸ್ಕರಣಾ ಘಟಕಗಳಿಂದ ಸಂಗ್ರಹಿಸಿ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (Managing Director) ಸುರೇಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಂಸ್ಥೆಯ ಇದುವರೆಗಿನ ಲಾಭ 5 ಕೋಟಿ ರೂ.ಗೆ ತಲುಪಿದೆ ಎಂದು ಅಂದಾಜಿಸಲಾಗಿದ್ದರೂ, ಅಂತಿಮ ಲೆಕ್ಕ ಪರಿಶೋಧನಾ ವರದಿ (final audit reports) ಬಂದ ನಂತರವೇ ನಿಖರ ಅಂಕಿ ಅಂಶವನ್ನು ಖಚಿತಪಡಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ. 

ಸಿಕೆಸಿಎಲ್‌ನ ಕೆಲಸ ಹೇಗೆ?
ಸಿಕೆಸಿಎಲ್‌ನ ಕಂಪನಿಯು 'ಹರಿತ ಕರ್ಮ ಸೇನೆ'(HKS) ಎಂಬ ಹೆಸರಿನಲ್ಲಿ ಸ್ವಯಂಸೇವಕರನ್ನು ನೇಮಿಸಿಕೊಂಡು ಅವರ ಮೂಲಕ ಕೇರಳದಾದ್ಯಂತ ಘನ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ಈ ಹರಿತ ಕರ್ಮ ಸೇನೆಯ ಸ್ವಯಂ ಸೇವಕರು (volunteers), ತ್ಯಾಜ್ಯವನ್ನು ಪ್ರತ್ಯೇಕಿಸಲು ಮತ್ತು ಸಂಗ್ರಹಿಸಲು ಮನೆ ಮನೆಗೆ ಭೇಟಿ ನೀಡುತ್ತಾರೆ. ಅವರು ಸಂಗ್ರಹಿಸಿದ ವಸ್ತುಗಳಲ್ಲಿ ಪ್ಲಾಸ್ಟಿಕ್, ಗಾಜು ಮತ್ತು ಇ-ತ್ಯಾಜ್ಯವೂ (e-waste) ಸೇರಿತ್ತು. ಮರು ಬಳಕೆಯಾಗುವ ತ್ಯಾಜ್ಯ ಉತ್ಪನ್ನಗಳನ್ನು ಮೊದಲಿಗೆ ಸ್ವಚ್ಛಗೊಳಿಸಲಾಗುತ್ತದೆ ಮತ್ತು ರಾಜ್ಯದೊಳಗಿನ ಮತ್ತು ಹೊರಗಿನ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ.

ಬೆಂಗ್ಳೂರಲ್ಲಿ ಇನ್ನೂ ಇವೆ 1478 ಕಸ ಸುರಿವ ಬ್ಲಾಕ್‌ ಸ್ಪಾಟ್‌ಗಳು..!

ಸಿಕೆಸಿಎಲ್ ಇದುವರೆಗೆ ಸಂಸ್ಕರಿಸಿದ ತ್ಯಾಜ್ಯವೆಷ್ಟು?

ಕಂಪನಿಯು ಜನವರಿ 2021 ಮತ್ತು ಆಗಸ್ಟ್ 2022 ರ ನಡುವೆ 7,382 ಟನ್ ಒಣ ಹಾಗೂ ಮರು ಬಳಕೆ (recyclable waste) ಮಾಡಬಹುದಾದ ತ್ಯಾಜ್ಯವನ್ನು ಮಾರಾಟ ಮಾಡಿದೆ. ಇದೇ ವೇಳೆ ಕಂಪನಿಯು ಈ ಅವಧಿಯಲ್ಲಿ ಮರು ಬಳಕೆ ಮಾಡಲಾಗದ  49,672 ಟನ್ ಜಡ ವಸ್ತುಗಳನ್ನು ಸಂಗ್ರಹಿಸಿದೆ. ಅಲ್ಲದೇ ಈ ಸಂಗ್ರಹಿಸಿದ ತ್ಯಾಜ್ಯವನ್ನು ಭಾರತದಾದ್ಯಂತ 5,142.92 ಕಿಮೀ ರಸ್ತೆಗಳನ್ನು ನಿರ್ಮಿಸಲು ಬಳಸಲಾಗಿದೆ.  2,872 ಟನ್ ಚೂರು ಚೂರಾದ ಪಾಲಿಮರೀಕರಿಸಿದ ಪ್ಲಾಸ್ಟಿಕ್ (polymerised plastic)ಅನ್ನು ಸಂಸ್ಕರಿಸಿ ಮಾರಾಟ ಮಾಡಿದ್ದು ಇದನ್ನು ರಸ್ತೆ ನಿರ್ಮಾಣಕ್ಕೆ ಬಳಸುವ ಮೂಲಕ ಸಂಸ್ಥೆ  ಶ್ಲಾಘನೀಯ ಕೆಲಸ ಮಾಡಿದೆ ಎಂದು ವರದಿಯಾಗಿದೆ. ಇದರೊಂದಿಗೆ 1,972 ಟನ್ ಇ-ತ್ಯಾಜ್ಯವನ್ನು ಸಂಗ್ರಹಿಸಿ ಮಾರಾಟ ಮಾಡುವಲ್ಲಿಯೂ ಸಂಸ್ಥೆ ಯಶಸ್ವಿಯಾಗಿದೆ. ಇದಲ್ಲದೇ ಸುಮಾರು 583.05 ಟನ್ ಗಾಜಿನ ತ್ಯಾಜ್ಯ ಮತ್ತು 42 ಟನ್  ಬಟ್ಟೆ ತ್ಯಾಜ್ಯವನ್ನು ಕೂಡ ಸಿಕೆಸಿಎಲ್ ಸಂಸ್ಕರಿಸಿದೆ.

CKCL ರೂಪುಗೊಂಡಿದ್ದು ಹೇಗೆ?

2012-13ನೇ ಹಣಕಾಸು ವರ್ಷದಲ್ಲಿ 10 ಕೋಟಿ ರೂ.ಗಳ ಅಧಿಕೃತ ಷೇರು ಬಂಡವಾಳದೊಂದಿಗೆ ಈ ಸಂಸ್ಥೆ ರೂಪುಗೊಂಡಿತ್ತು. ಆದರೆ ಕಾರ್ಯಾಚರಣೆ ಆರಂಭಿಸಿದ್ದು ಮಾತ್ರ 2021ರಲ್ಲಿ. ಕೇರಳ ಸರ್ಕಾರವು ಸಂಸ್ಥೆಯಲ್ಲಿ 26% ಪಾಲನ್ನು ಹೊಂದಿದ್ದರೆ, ಉಳಿದ 74% ಅನ್ನು ರಾಜ್ಯಾದ್ಯಂತ ಇರುವ ಸ್ಥಳೀಯ ಆಡಳಿತ ಸಂಸ್ಥೆಗಳ ನಡುವೆ ವಿಂಗಡಿಸಲಾಗಿದೆ. 2018 ರ ಕೇರಳ ಪ್ರವಾಹದ ನಂತರ ಮೂಲಸೌಕರ್ಯ ಮತ್ತು ರಸ್ತೆಗಳನ್ನು ಮರು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದ ಸರ್ಕಾರ 'ರಿಬಿಲ್ಡ್ ಕೇರಳ'(Rebuild Kerala) ಯೋಜನೆ ಜಾರಿಗೆ ತಂದಿತ್ತು. ಅದರಡಿ ರಾಜ್ಯವು ಈ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ನಿರ್ಧರಿಸಿದಾಗ ಕಂಪನಿಗೆ 53.5 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. 

ಒಟ್ಟಿನಲ್ಲಿ  ಮನೆಯ ಕಸವನ್ನ ಛೀ ಎಂದು ದೂರ ಎಸೆಯೋ ಮುನ್ನ ಸ್ವಲ್ಪ ಯೋಚ್ನೆ ಮಾಡೋದೊಳಿತು ಏನಂತೀರಾ?


 

Follow Us:
Download App:
  • android
  • ios