25 ಕೇಜಿ ಚಿನ್ನಾಭರಣ ಧರಿಸಿ ತಿರುಪತಿ ಬಾಲಾಜಿ ದರ್ಶನ ಪಡೆದ ಗೋಲ್ಡ್‌ಮ್ಯಾನ್ ಕುಟುಂಬ
ಪುಣೆಯ ಕುಟುಂಬವೊಂದು 25 ಕೆಜಿ ಚಿನ್ನವನ್ನು ಧರಿಸಿ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಿರುಪತಿ: ಕಳ್ಳಕಾಕರ ಭಯದಿಂದಾಗಿ ಇಂದಿನ ಕಾಲದಲ್ಲಿ ಒಂದೆಳೆಯ ಸಣ್ಣ ಚಿನ್ನದ ಸರವನ್ನು ಹಾಕಿಕೊಂಡು ರಸ್ತೆಯಲ್ಲಿ ನಡೆಯುವುದು ಕಷ್ಟ. ಹೀಗಿರುವಾಗ ಸದಾಕಾಲ ಭಕ್ತರಿಂದ ಕಿಕ್ಕಿರಿದು ತುಂಬಿರುವ ಹಿಂದೂ ತೀರ್ಥಕ್ಷೇತ್ರ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿಮ್ಮಪ್ಪನ ದರ್ಶನಕ್ಕೆ ಪುಣೆಯ ಕುಟುಂಬವೊಂದು ಬರೋಬ್ಬರಿ 25 ಕೇಜಿ ಚಿನ್ನಭರಣವನ್ನು ಧರಿಸಿ ಆಗಮಿಸಿದ್ದು, ಅಲ್ಲಿದ್ದ ಭಕ್ತರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಒಂದು ಗ್ರಾಂ ಬಂಗಾರದ ಇಂದಿನ ದರ 7265 ರೂಪಾಯಿಗಳಿವೆ. ಹೀಗಿರುವಾಗ ಈ ಜೋಡಿ 25 ಕೇಜಿ ಬಂಗಾರ ಧರಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇವರು ದೇವಸ್ಥಾನದ ಆವರಣದಲ್ಲಿ ಫೋಟೋಗೆ ಫೋಸ್ ನೀಡ್ತಿರುವ, ಹಾಗೂ ಅಲ್ಲಿದ್ದ ಭಕ್ತರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದಿಸಂಸ್ಥೆ ಪಿಟಿಐ ಇವರ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗಿದೆ.
Top 10 Gold Mans: ಭಾರತದಲ್ಲಿ ಅತಿಹೆಚ್ಚು ಬಂಗಾರದ ಆಭರಣ ಧರಿಸುವ ವ್ಯಕ್ತಿಗಳು
ಪುಣೆ ಮೂಲದ ಈ ಕುಟುಂಬ ನಿನ್ನೆ ತಿರುಪತಿ ಬಾಲಾಜಿಯ ದರ್ಶನ ಪಡೆದಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಇಬ್ಬರು ಪುರುಷರು, ಒಬ್ಬ ಮಹಿಳೆ ಹಾಗೂ ಒಂದು ಮಗು ಜೊತೆಯಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದು, ಎಲ್ಲರೂ ಮೈತುಂಬಾ ಚಿನ್ನಾಭರಣ ಧರಿಸಿದ್ದಾರೆ. ಇಬ್ಬರು ಪುರುಷರು ಒಂದರ ಮೇಲೊಂದರಂತೆ ಕತ್ತು ಕಾಣದಷ್ಟು ಚಿನ್ನಾಭರಣವನ್ನು ಕತ್ತಿನ ಮೇಲೆ ಹೇರಿದ್ದಾರೆ. ಇತ್ತ ಮಹಿಳೆ ಚಿನ್ನದ ಬಣ್ಣದ ಸೀರೆಯನ್ನೇ ಉಟ್ಟಿದ್ದು, ದೊಡ್ಡದಾದ ಎರಡು ಚಿನ್ನದ ನೆಕ್ಲೇಸ್ ಜೊತೆಗೆ ಚಿನ್ನದೇ ಓಲೆ ಧರಿಸಿದ್ದಾರೆ. ಆದರೆ ಇವರ ಹೆಸರನ್ನು ಸುದ್ದಿಸಂಸ್ಥೆ ಎಲ್ಲೂ ಉಲ್ಲೇಖಿಸಿಲ್ಲ, ಇವರು ಪುಣೆ ಮೂಲದವರು ಎನ್ನಲಾಗಿದ್ದು, ದೇಶದ ಬಹುತೇಕ ಗೋಲ್ಡ್ ಮ್ಯಾನ್‌ಗಳು ಮಹಾರಾಷ್ಟ್ರದ ಪುಣೆಯವರಾಗಿದ್ದಾರೆ.
ಕೊರಳಲ್ಲಿ ಕೆಜಿ ಗಟ್ಟಲೆ ಚಿನ್ನ, ಕಾರು ಮೊಬೈಲ್ ಎಲ್ಲವೂ ಗೋಲ್ಡ್; ಇದು ಗೋಲ್ಡ್‌ಮ್ಯಾನ್ ಸನ್ನಿ ಕತೆ!
ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗಿರುವ ತಿರುಪತಿ ದೇಗುಲ ಪ್ರತಿದಿನವೂ ಭಕ್ತರಿಂದ ತುಂಬಿ ತುಳುಕುತ್ತದೆ. ಕಲಿಯುಗದಲ್ಲಿ ಜನರ ಪಾಪಗಳನ್ನು ಕಷ್ಟಗಳನ್ನು, ವಿಷ್ಣುವಿನ ಅವತಾರವಾಗಿರುವ ತಿರುಪತಿ ವೆಂಕಟೇಶ್ವರನ್ನು ಕಳೆಯುತ್ತಾನೆ ಎಂಬ ನಂಬಿಕೆ ಇರುವುದರಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಪ್ರತಿದಿನವೂ ಭೇಟಿ ನೀಡುತ್ತಾರೆ. ಅಲ್ಲದೇ ತಿರುಪತಿ ತಿಮ್ಮಪ್ಪನಿಗೆ ಭಕ್ತರು ನೀಡುವ ಕಾಣಿಕೆಯೂ ಯಾವುದೋ ರೂಪದಲ್ಲಿ ದ್ವಿಗುಣಗೊಂಡು ಮತ್ತೆ ಭಕ್ತರಿಗೆ ಸೇರುತ್ತದೆ, ತಿರುಪತಿ ತಿಮ್ಮಪ್ಪ ಭಕ್ತರನ್ನು ಆರ್ಥಿಕ ಸಂಕಷ್ಟದಿಂದ ಸದಾ ಪಾರು ಮಾಡುತ್ತಾನೆ ಎಂಬ ನಂಬಿಕೆ ಇರುವುದರಿಂದ ಇಲ್ಲಿಗೆ ಬರುವ ಭಕ್ತರು ಚಿನ್ನ ಹಣ ಸೇರಿದಂತೆ ತಿಮ್ಮಪ್ಪನಿಗೆ ಅದ್ದೂರಿ ಕಾಣಿಕೆಗಳನ್ನು ನೀಡುತ್ತಾರೆ. ಹೀಗಾಗಿ ಪ್ರತಿದಿನವೂ ಇಲ್ಲಿ ಲಕ್ಷ ಕೋಟಿಗಳಲ್ಲಿ ಕಾಣಿಕೆ ಹಣ ಬಂದು ಬೀಳುತ್ತದೆ.