Asianet Suvarna News Asianet Suvarna News

ಮೀನಿನ ಬಲೆಯಲ್ಲಿ ಸಿಲುಕಿದ ಡಾಲ್ಫಿನ್: ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ಮೀನುಗಾರಿಕಾ ಬಲೆಗೆ ಸಿಲುಕಿ ಪರದಾಡುತ್ತಿದ್ದ ಎರಡು ಡಾಲ್ಫಿನ್ ಮೀನುಗಳನ್ನು ತಮಿಳುನಾಡಿನ ಮೀನುಗಾರರು ರಕ್ಷಿಸಿ ಮತ್ತೆ ಸಮುದ್ರಕ್ಕೆ ಬಿಟ್ಟಿದ್ದಾರೆ. ತಮಿಳುನಾಡಿನ ರಾಮನಾಥಪುರಂನಲ್ಲಿ ಈ ಘಟನೆ ನಡೆದಿದೆ.

A dolphin caught in a fisher net Tamilnadu fishermen released it back to the sea akb
Author
First Published Dec 1, 2022, 9:35 PM IST

ಮೀನುಗಾರಿಕಾ ಬಲೆಗೆ ಸಿಲುಕಿ ಪರದಾಡುತ್ತಿದ್ದ ಎರಡು ಡಾಲ್ಫಿನ್ ಮೀನುಗಳನ್ನು ತಮಿಳುನಾಡಿನ ಮೀನುಗಾರರು ರಕ್ಷಿಸಿ ಮತ್ತೆ ಸಮುದ್ರಕ್ಕೆ ಬಿಟ್ಟಿದ್ದಾರೆ. ತಮಿಳುನಾಡಿನ ರಾಮನಾಥಪುರಂನಲ್ಲಿ ಈ ಘಟನೆ ನಡೆದಿದೆ. ಮೀನುಗಾರರ ಗುಂಪು ಹಾಗೂ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ಜೊತೆಯಾಗಿ ಡಾಲ್ಫಿನ್ ಅನ್ನು ಮತ್ತೆ ತನ್ನ ಆವಾಸಸ್ಥಾನ ಸೇರುವಂತೆ ಮಾಡಿದ್ದಾರೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 

ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮೀನುಗಾರರು ಯಶಸ್ವಿಯಾಗಿ ಎರಡು ಡಾಲ್ಪಿನ್(dolphins) ಮೀನುಗಳನ್ನು ರಕ್ಷಿಸಿ ಸಮುದ್ರಕ್ಕೆ ಬಿಟ್ಟಿದ್ದಾರೆ. ಇವುಗಳು ರಾಮನಾಥಪುರ ಜಿಲ್ಲೆಯ ಕೀಲಕರನಿ ವ್ಯಾಪ್ತಿಯಲ್ಲಿ ಮೀನುಗಾರರ ಬಲೆಗೆ ಸಿಲುಕಿದ್ದವು. ಯಶಸ್ವಿ ಸಮುದಾಯದ ದೊಡ್ಡ ಶಕ್ತಿ ಇದು. ನಾವು ಈ ಹೀರೋಗಳನ್ನು ಗೌರವಿಸುತ್ತೇವೆ. ಜಗದೀಶ್ ಹಾಗೂ ಡಿಎಫ್‌ಒ(DFO) ರಾಮನದ್ ಅವರಿಗೆ ನನ್ನ ಅಭಿನಂದನೆಗಳು ಎಂದು ಬರೆದುಕೊಂಡು ಸುಪ್ರಿಯಾ ಸಾಹು ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಪೋಸ್ಟ್ ಮಾಡಿದ್ದಾರೆ. 

ವಿಡಿಯೋದಲ್ಲಿ ಕಾಣಿಸುವಂತೆ ಸಮುದ್ರ ತೀರದಲ್ಲಿ(Beach) ಮೀನುಗಾರರು ಡಾಲ್ಪಿನ್‌ಗಳನ್ನು ಮೀನಿನ ಬಲೆಯಿಂದ ಬಿಡಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಬಲೆಯಿಂದ ಬಿಡಿಸಿದ ನಂತರ ಮೀನುಗಾರರು ಡಾಲ್ಪಿನ್‌ ಅನ್ನು ಸಮುದ್ರ ತೀರದಿಂದ ಎಳೆದುಕೊಂಡು ಹೋಗಿ ನೀರಿಗೆ ಬಿಡುತ್ತಾರೆ. ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಡಾಲ್ಪಿನ್ ರಕ್ಷಿಸಿದ ಮೀನುಗಾರರು ಹಾಗೂ ಅರಣ್ಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ತಮಿಳುನಾಡಿನ (Tamilnadu) ಅರಣ್ಯ ಸಿಬ್ಬಂದಿ ಹಾಗೂ ಮೀನುಗಾರರಿಗೆ ಧನ್ಯವಾದಗಳು. ಇದೊಂದು ಅದ್ಭುತವಾದ ಕೆಲಸ, ಇದಕ್ಕಾಗಿ ಮೀನುಗಾರರಿಗೆ ಬಹುಮಾನ ನೀಡಬೇಕು ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. 

 

ಡಾಲ್ಪಿನ್ ಮರಿಯ ರಕ್ಷಣೆ
ಕಳೆದ ಎಪ್ರಿಲ್‌ನಲ್ಲಿ ಬ್ರೆಜಿಲ್‌ನಲ್ಲಿ ಸಮುದ್ರದಲ್ಲಿ ಮೀನಿನ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಡಾಲ್ಪಿನ್ ಮರಿಯೊಂದನ್ನು ವ್ಯಕ್ತಿಯೊಬ್ಬರು ಬಲೆಯಿಂದ ಬಿಡಿಸಿ ರಕ್ಷಣೆ ಮಾಡಿ ಮತ್ತೆ ಸಮುದ್ರಕ್ಕೆ ಬಿಟ್ಟ ವಿಡಿಯೋ ವೈರಲ್ ಆಗಿತ್ತು. ಘಟನೆಯ ಬಗ್ಗೆ ವಿವರಿಸಿದ ಅವರು, ನಾನು ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗಿದ್ದೆ. ಮೀನುಗಾರಿಕೆಯಿಂದ ಹಿಂದಿರುಗಿದ ನಂತರ, ನೀರಿನ ಮಧ್ಯದಲ್ಲಿ ಏನೋ ಚಲಿಸುತ್ತಿರುವುದನ್ನು ನಾನು ನೋಡಿದೆ ಮತ್ತು ನಾನು ನನ್ನ ದೋಣಿಯನ್ನು ಅದು ಇರುವ ದಿಕ್ಕಿನತ್ತ ತಿರುಗಿಸಿದೆ. ನಂತರ ಅದರ ಹತ್ತಿರ ಹೋಗಿ ನೋಡಿದಾಗ ಮೀನು ಹಿಡಿಯುವ ಬಲೆಯಲ್ಲಿ ಸಿಕ್ಕಿಬಿದ್ದಿದ್ದು ಡಾಲ್ಫಿನ್ ಮರಿ ಎಂಬುದು ಗೊತ್ತಾಯಿತು. ನಂತರ ಅದು ದೋಣಿಯನ್ನು ನೋಡಿ ನನ್ನ ಹತ್ತಿರ ಬಂತು ಎಂದರು. ನಾನು ಡಾಲ್ಫಿನ್ ಅನ್ನು ಹಿಡಿದಾಗ ಅದು ಶಾಂತವಾಗಿತ್ತು. ನಂತರ ನಾನು ಅದನ್ನು ಮೀನುಗಾರಿಕಾ ಬಲೆಯಿಂದ ಬಿಡಿಸಿ ಮತ್ತೆ ಸಮುದ್ರಕ್ಕೆ ಎಸೆದಿದ್ದೇನೆ ಎಂದು ಆ ವ್ಯಕ್ತಿ  ಹೇಳಿದರು.

ಎಷ್ಟು ಚೆಂದ.. ಮೀನುಗಾರನ ಬಲೆಗೆ ಬಿದ್ದ ಭಾರಿ ಗಾತ್ರದ ಗೋಲ್ಡ್ ಫಿಶ್

ಸಮುದ್ರದಲ್ಲಿರುವ ಅನೇಕ ಜೀವ ಸಂಕುಲಗಳು ಮಾಲಿನ್ಯ ಸಮಸ್ಯೆಯಿಂದಾಗಿ ಬದುಕಲು ಕಷ್ಟ ಪಡುತ್ತಿವೆ. ಪ್ಲಾಸ್ಟಿಕ್ ತ್ಯಾಜ್ಯ ಅಥವಾ ಮೀನುಗಾರಿಕೆ ಬಲೆಗಳಲ್ಲಿ ಸಿಲುಕಿ ಹೊರಳಾಡುವ ಸಮುದ್ರದ ಜೀವ ವೈವಿಧ್ಯಗಳ ವಿಡಿಯೋವನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿರಬಹುದು. ಈ ಹಿಂದೆಯೂ ಸುಪ್ರಿಯಾ ಸಾಹು ಅವರು ವಿಡಿಯೋವೊಂದನ್ನು  ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದರು. ಈ ವಿಡಿಯೋದಲ್ಲಿ ಸಮುದ್ರದ ಅಲೆಗಳ ನಡುವೆ ಬಲೆಯಲ್ಲಿ ಸಿಲುಕಿದ ಆಮೆ ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವ ದೃಶ್ಯವಿದೆ. ಈ ಆಮೆಯನ್ನು ಯಾರೋ ಕೋಲನ್ನು ಬಳಸಿ, ಗಸ್ತು ತಿರುಗುವ ದೋಣಿಯ ಮೇಲೆಳೆದು ತರುತ್ತಾರೆ. ನಂತರ, ವ್ಯಕ್ತಿಯೊಬ್ಬ ಆಮೆಗೆ ಸಿಕ್ಕಿ ಹಾಕಿಕೊಂಡಿರುವ ಮೀನುಗಾರಿಕಾ ಬಲೆಯನ್ನು ಕತ್ತರಿಸಿ ಬಳಿಕ ಆಮೆಯನ್ನು ಸಮುದ್ರಕ್ಕೆ ಬಿಡುತ್ತಾನೆ.

Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಲಕ್ ನಿಮ್ಮದೇ!

Follow Us:
Download App:
  • android
  • ios