ಮಂಗಗಳ ಕಿತಾಪತಿಗಳಿಂದ ಮನುಷ್ಯರಿಗೆ ಉಪದ್ರವ, ಮನರಂಜನೆ ಎರಡೂ ಇದೆ. ಯುವತಿಯ ಉಡುಪಿನೊಳಗೆ ಮರಿಕೋತಿ ನುಗ್ಗಿ ತಾಯಿಕೋತಿ ರಕ್ಷಿಸಿದ ವಿಡಿಯೋ ವೈರಲ್. ಶ್ರೀಲಂಕಾದಲ್ಲಿ ಕೋತಿಯೊಂದು ವಿದ್ಯುತ್ ಗ್ರಿಡ್‌ಗೆ ಸಿಲುಕಿ ಇಡೀ ದೇಶದಲ್ಲಿ ವಿದ್ಯುತ್ ವ್ಯತ್ಯಯ. ಮಲೆನಾಡಿನಲ್ಲಿ ಬೆಳೆಗಳಿಗೆ ಮಂಗಗಳ ಉಪಟಳ.

ಮನುಷ್ಯರ ಪೂರ್ವಜರು ಎಂದೇ ಖ್ಯಾತಿ ಪಡೆದಿರುವ ಮಂಗಗಳು ಮಾಡುವ ಕಿತಾಪತಿಗಳು ಒಂದೆರಡಲ್ಲ ಬಿಡಿ. ಅವುಗಳ ಆಟ ನೋಡುವುದಕ್ಕೆ ಎಷ್ಟು ಚೆಂದವೋ, ಅತಿಯಾಗಿ ಪ್ರಾಣಕ್ಕೆ ಸಂಚಕಾರ ತರುವುದೂ ಉಂಟು. ದೇವಸ್ಥಾನ, ಪ್ರವಾಸಿ ತಾಣಗಳಲ್ಲಿ ಮಂಗಗಳು ಕೊಡುವ ಉಪದ್ರವಗಳ ಬಗ್ಗೆ ತಿಳಿದದ್ದೇ. ಬ್ಯಾಗ್​ ಕಳ್ಳತನ ಮಾಡುವುದು, ಮೈಮೇಲೆ ಬಿದ್ದು ಪ್ರಾಣಕ್ಕೂ ಕುತ್ತು ತರುವುದು, ಕೈಯಲ್ಲಿ ಏನಾದರೂ ಆಹಾರ ಪೊಟ್ಟಣ ಹಿಡಿದುಕೊಂಡಿದ್ದರೆ ಅದನ್ನು ಕಸಿಯಲು ಬಂದು ಕಚ್ಚುವುದೂ ಇದೆ. ಇವೆಲ್ಲವುಗಳ ಹೊರತಾಗಿಯೂ ಮಂಗಗಳು ಸುಮ್ಮನೇ ಇದ್ದಾಗ ಅವುಗಳ ಆಟವನ್ನು ನೋಡುವುದೇ ಬಲು ಸೊಗಸು.

ಇದೀಗ ಅಂಥದ್ದೇ ಒಂದು ನಕ್ಕು ನಗಿಸುವಂಥ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಫ್ರಾಕ್​ ಧರಿಸಿ ನಿಂತಿರುವ ಯುವತಿಯನ್ನು ನೋಡಬಹುದಾಗಿದೆ. ಒಂದು ಮರಿಕೋತಿಯು ಆಕೆಯ ಡ್ರೆಸ್​ ಒಳಗೆ ಹೊಕ್ಕಿದೆ. ಅಲ್ಲಿ ಕಿತಾಪತಿ ಶುರುವಿಟ್ಟುಕೊಂಡಿದೆ. ಅದನ್ನು ಅಲ್ಲಿಯೇ ಇದ್ದ ಆ ಮರಿಯ ಅಮ್ಮ ನೋಡಿದೆ. ಪುಸಕ್ಕನೆ ಯುವತಿಯ ಡ್ರೆಸ್​ ಒಳಗೆ ಹೊಕ್ಕ ಮರಿಯನ್ನು ಹೊರಕ್ಕೆ ಎಳೆದು ನಂತರ ಆಕೆಯ ಡ್ರೆಸ್​ ಸರಿ ಮಾಡಿದೆ. ಇಷ್ಟು ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ನೆಟ್ಟಿಗರು ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಗಿಸಿಕೊಂಡಿದ್ದಾರೆ. ಸೋ ಕ್ಯೂಟ್​ ಎನ್ನುತ್ತಿದ್ದಾರೆ. 

ಮಂಗನಾಟಕ್ಕೆ ಶ್ರೀಲಂಕಾ ಸುಸ್ತು: ಅಂದು ಲಂಕಾ ದಹನ- ಇಂದು ದೇಶಾದ್ಯಂತ ಕತ್ತಲೋ ಕತ್ತಲು! ಆಗಿದ್ದೇನು?

ಈಚೆಗಷ್ಟೇ ಮಂಗವೊಂದರಿಂದಾಗಿ ಇಡೀ ಶ್ರೀಲಂಕಾ ದೇಶದಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಿ ಕಾರ್ಗತ್ತಲು ಕವಿದಿದ್ದು ಸುದ್ದಿಯಾಗಿತ್ತು. ಶ್ರೀಲಂಕಾದ ಪಣದುರದಲ್ಲಿರುವ ವಿದ್ಯುತ್ ಗ್ರಿಡ್‌ನ ಸಬ್‌ಸ್ಟೇಷನ್‌ನಲ್ಲಿ ಕೋತಿಯೊಂದು ತಂತಿಯ ಮೇಲೆ ಹೋಗು ಸಂದರ್ಭದಲ್ಲಿ ಗ್ರಿಡ್​ಗೆ ಸಿಲುಕಿಬಿಟ್ಟಿತ್ತು. ಇದು ಇಡೀ ದೇಶಕ್ಕೆ ವಿದ್ಯುತ್​ ಪೂರೈಕೆ ಮಾಡುವ ಮುಖ್ಯ ಗ್ರಿಡ್​. ಆದ್ದರಿಂದ ವಿದ್ಯುತ್ ಸರಬರಾಜು ಸ್ಥಗಿತವಾಗಿತ್ತು. ಇದರಿಂದ ಮುಖ್ಯವಾಗಿ ಆಸ್ಪತ್ರೆಗಳಲ್ಲಿ ಕೋಲಾಹ ಉಂಟಾಗಿತ್ತು. ಒಂದು ಗಂಟೆಯ ಬಳಿಕ ಆಸ್ಪತ್ರೆ ಮತ್ತು ಇತರ ಪ್ರಮುಖ ಸ್ಥಾಪನೆಗಳಲ್ಲಿ ಬೇರೆ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗಿತ್ತು. ಆದರೆ ಇಡೀ ದೇಶಕ್ಕೆ ವಿದ್ಯುತ್ ನೀಡಲು ಹಲವಾರು ಗಂಟೆಗಳು ಹಿಡಿದವು. ಇಡೀ ದೇಶದಲ್ಲಿ ಏಕಾಏಕಿ ವಿದ್ಯುತ್​ ವ್ಯತ್ಯಯವಾಗಿ ಕೋಲಾಹಲ ಸೃಷ್ಟಿಯಾಗಿತ್ತು. ಬಳಿಕ ಇದಕ್ಕೆ ಕಾರಣ ಹುಡುಕಿದಾಗ, ಕೊಲಂಬೊ ಉಪನಗರದಲ್ಲಿ ಮಂಗವೊಂದು ವಿದ್ಯುತ್ ಗ್ರಿಡ್ ಗೆ ಸಿಲುಕಿದ ಪರಿಣಾಮ ಈ ಘಟನೆ ಸಂಭವಿಸಿರುವುದಾಗಿ ತಿಳಿದಿತ್ತು. ಅದಕ್ಕೆ ಕಾರಣ ತಿಳಿದು ಅದನ್ನು ಸರಿಪಡಿಸುವಷ್ಟರಲ್ಲಿ ರಾತ್ರಿಯಿಡೀ ಲಂಕೆಯ ಜನರು ಕತ್ತಲಿನಲ್ಲಿ ಕಳೆಯುವಂತಾಯಿತು. ವಿದ್ಯುತ್​ ಸಹಾಯದಿಂದ ಮಾಡುವ ಎಲ್ಲಾ ಕಾರ್ಯಗಳೂ ಸ್ಥಗಿತಗೊಂಡಿದ್ದವು! 

ಹೀಗೆ ನಿತ್ಯ ಜೀವನದಲ್ಲಿ ಮಂಗಗಳ ಮಾಡುವ ಕಿತಾಪತಿಗಳು ಒಂದೆರಡಲ್ಲ. ಇನ್ನು ಮಲೆನಾಡು ಪ್ರದೇಶಗಳಲ್ಲಂತೂ ಮಂಗನ ಕಾಟದಿಂದ ಜನಜೀವನ ದಿನನಿತ್ಯವೂ ನರಕವೇ ಆಗಿಬಿಟ್ಟಿದೆ. ಮನೆಯಂಗಳದಲ್ಲಿ ಒಂದೂ ಬೆಳೆಯನ್ನೂ ಬೆಳೆಯಲು ಬಿಡುವುದಿಲ್ಲ, ತೋಟಕ್ಕೆ ಗುಂಪು ಗುಂಪಾಗಿ ನುಗ್ಗಿತು ಎಂದರೆ ಕಥೆ ಮುಗಿದಂತೆಯೇ. ಅದೇನಿದ್ದರೂ ಮಂಗಗಳನ್ನು ಅಪರೂಪಕ್ಕೆ ನೋಡುವವರಿಗೆ ಅವುಗಳ ಆಟ ಮಾತ್ರ ಚೆಂದವೋ ಚಂದ. 

ಮಸಾಲೆ ದೋಸೆಯಲ್ಲಿ ಅಡಗಿದ್ದ ಯಮರಾಯ! 3 ವರ್ಷದ ಬಾಲಕಿ ಸಾವು...

View post on Instagram