ಅಂತಾರಾಷ್ಟ್ರೀಯ ಯೋಗ ದಿನ: ಸಿಕ್ಕಿಂ, ಲಡಾಖ್, ಅರುಣಾಚಲದ ರಮಣೀಯ ಪರಿಸರದಲ್ಲಿ ಭಾರತೀಯ ಸೇನೆ ಯೋಗಾಭ್ಯಾಸ
9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಸಹ ಯೋಗ ಮಾಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ನವದೆಹಲಿ (ಜೂನ್ 21, 2023): ಜೂನ್ 21 ರಂದು, ಪ್ರಪಂಚದಾದ್ಯಂತದ ರಾಷ್ಟ್ರಗಳು ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಈ ಪೈಕಿ ಪ್ರಧಾನಿ ಮೋದಿ ಅಮರಿಕದಲ್ಲಿದ್ದು, 180 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳೊಂದಿಗೆ ವಿಶ್ವಸಂಸ್ಥೆಯ (UN) ಪ್ರಧಾನ ಕಛೇರಿಯಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಗಳನ್ನು ಮುನ್ನಡೆಸಲಿದ್ದಾರೆ. ಇದಲ್ಲದೆ, 9ನೇ ವಿಶ್ವಾದ್ಯಂತ 250 ಮಿಲಿಯನ್ ಅಂದರೆ 25 ಕೋಟಿ ಜನರು ಈವೆಂಟ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. 'ವಸುಧೈವ ಕುಟುಂಬಕಂ' ಯೋಗ ದಿನದ ಥೀಮ್ ಆಗಿದೆ.
ಇನ್ನು, 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಸಹ ಯೋಗ ಮಾಡಿದ್ದಾರೆ. ಈ ಪೈಕಿ ಲಡಾಖ್‌ನ ಪಾಂಗಾಂಗ್ ಸೋ ಸರೋವರದ ಅದ್ಭುತ ಹಾಗೂ ರಮಣೀಯ ಪರಿಸರದಲ್ಲೂ ಯೋಗಾಬ್ಯಾಸ ಮಾಡಿದ್ದಾರೆ. ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ದೆಹಲಿಯ ಕಂಟೋನ್‌ಮೆಂಟ್‌ನಲ್ಲಿ ಯೋಗ ಮಾಡಿದ್ದಾರೆ ಎಂದು ವರದಿಯಾಗಿದೆ. ಅದೇ ರೀತಿ, ಅರುಣಾಚಲ ಪ್ರದೇಶದಲ್ಲೂ ಯೋಗ ದಿನಾಚರಣೆ ಆಚರಿಸಲಾಗಿದೆ.
ಇದನ್ನು ಓದಿ: ಇಂದು 9ನೇ ಯೋಗ ದಿನಾಚರಣೆ: 25 ಕೋಟಿ ಜನ ಭಾಗಿ ನಿರೀಕ್ಷೆ
ಇದೇ ರೀತಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ನೌಕಾ ಸೇನಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್, ಕೇರಳದ ಕೊಚ್ಚಿಯಲ್ಲಿ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಯೋಗ ಮಾಡಿದ್ದಾರೆ. ಇದೇ ರೀತಿ, ಸಿಕ್ಕಿಂನಲ್ಲಿ ಹಾಗೂ ಜಮ್ಮು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಭಾರತೀಯ ಸೇನಾ ಸಿಬ್ಬಂದಿ ಯೋಗ ಮಾಡಿದ್ದಾರೆ. ಕೇರಳದ ತಿರುವನಂತಪುರಂನಲ್ಲಿ ನೀರಿನೊಳಗೂ ಯೋಗ ಮಾಡಿ ಗಮನ ಸೆಳೆದಿದ್ದಾರೆ.
ಇನ್ನೊಂದೆಡೆ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಮತ್ತು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅವರು ಸಹ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ರಕ್ಷಣಾ ಸಿಬ್ಬಂದಿಯೊಂದಿಗೆ ನವದೆಹಲಿಯ ವಾಯುಪಡೆ ನಿಲ್ದಾಣದಲ್ಲಿ ಇವರು ಯೋಗಾಭ್ಯಾಸ ಮಾಡಿದ್ದಾರೆ. ಹಾಗೆ, ಸಿಲಿಗುರಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ಸಹ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
International Yoga Day: ಯೋಗ ದಿನದಂದು ಮೋದಿ ವಿಡಿಯೋ ಸಂದೇಶ: ಇದರ ಅರ್ಥ ವಸುದೇವ ಕುಟುಂಬಕಂ ಎಂದ ನಮೋ
ಈ ಮಧ್ಯೆ, ಪ್ರಧಾನಿ ಮೋದಿ ಇಂದು ಸಂಜೆ 5: 30ರ ವೇಳೆಗೆ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ 180 ದೇಶಗಳ ಪ್ರತಿನಿಧಿಗಳೊಮದಿಗೆ ಯೋಗ ಮಾಡಲಿದ್ದಾರೆ. ಪ್ರತಿ ವರ್ಷ ಯೋಗ ದಿನಾಚರಣೆಯನ್ನು ಜೂನ್ 21 ರಂದು ಆಚರಿಸಲಾಗುತ್ತದೆ. 2014 ರಲ್ಲಿ ವಿಶ್ವಸಂಸ್ಥೆಗೆ ಪ್ರಧಾನಿ ಮೋದಿ ಮನವಿ ಮಾಡಿದ ಬಳಿಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಾರಂಭಿಸಲಾಯಿತು.
ಇದನ್ನೂ ಓದಿ: 9ನೇ ವಿಶ್ವ ಯೋಗ ದಿನಾಚರಣೆ: ವಿಧಾನಸೌಧ ಮುಂಭಾಗ ಯೋಗಾಸನ ಮಾಡಿ ಗಮನಸೆಳೆದ ಗಣ್ಯರು