ಇಂದು 9ನೇ ಯೋಗ ದಿನಾಚರಣೆ: 25 ಕೋಟಿ ಜನ ಭಾಗಿ ನಿರೀಕ್ಷೆ

9ನೇ ಅಂತಾ​ರಾ​ಷ್ಟ್ರೀಯ ಯೋಗ ದಿನಾ​ಚ​ರಣೆ ವಿಶ್ವಾ​ದ್ಯಂತ ಇಂದು ನಡೆ​ಯ​ಲಿ​ದೆ. ದಿನಾಚರಣೆಯಲ್ಲಿ ವಿಶ್ವಾದ್ಯಂತ 25 ಕೋಟಿಗೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

9th International Yoga Day today 25 crore people are expected to participate in worldwide akb

ನವದೆಹಲಿ: 9ನೇ ಅಂತಾ​ರಾ​ಷ್ಟ್ರೀಯ ಯೋಗ ದಿನಾ​ಚ​ರಣೆ ವಿಶ್ವಾ​ದ್ಯಂತ ಇಂದು ನಡೆ​ಯ​ಲಿ​ದೆ. ದಿನಾಚರಣೆಯಲ್ಲಿ ವಿಶ್ವಾದ್ಯಂತ 25 ಕೋಟಿಗೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.  ವಿಶ್ವದ ಪ್ರಮುಖ ಕಾರ್ಯಕ್ರಮ ವಿಶ್ವಸಂಸ್ಥೆಯಲ್ಲಿ ಆಯೋಜನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ. ಈ ಸಮಾರಂಭದಲ್ಲಿ ಮೋದಿ ಅವರ ಜೊತೆಗೆ 180 ದೇಶಗಳ ಗಣ್ಯರು ಭಾಗಿಯಾಗಲಿದ್ದಾರೆ. ಅಮೆ​ರಿಕ ಕಾಲಮಾನ ಬೆಳಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ.

ಇನ್ನು ಭಾರತದಲ್ಲಿ ಮುಖ್ಯ ಸಮಾರಂಭವನ್ನು ಮಧ್ಯಪ್ರದೇಶದ (Madhya Pradesh) ಜಬಲ್ಪುರದಲ್ಲಿ (Jabalpur) ಆಯೋಜಿಸಲಾಗಿದ್ದು, ಇದರಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ (Vice President Jagdeep Dhankar) ಅವರು ಖುದ್ದು ಹಾಜರಿದ್ದು, ಯೋಗ ಪ್ರದರ್ಶನ ಮಾಡಲಿದ್ದಾರೆ. ವ​ಸು​ಧೈವ ಕುಟುಂಬ​ಕಂ (The world is one family) ಎಂಬುದೇ ಯೋಗ ದಿನಾ​ಚ​ರಣೆಯ ಮೂಲ ಧ್ಯೇಯ​ವಾ​ಗಿದೆ. 

ಯೋಗ ಕಲಿತು ಆರೋಗ್ಯವಾಗಿರ್ಬೇಕಾ? ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ್ರೆ ಸಾಕು

ಈ ಸಲ ವಿ​ಶ್ವದ ವಿವಿಧ ಬಂದ​ರು​ಗ​ಳಲ್ಲಿ ಲಂಗರು ಹಾಕಿ​ರುವ 9 ನೌಕಾ​ಪಡೆ ಹಡ​ಗಿ​ನಲ್ಲಿ ‘ಓ​ಷ್ಯ​ನ್‌ ರಿಂಗ್‌ ಆಫ್‌ ಯೋಗ’ ಎಂಬ ವಿಶೇಷ ಪ್ರದ​ರ್ಶನ ನಡೆ​ಯ​ಲಿದೆ. ‘ಯೋಗ ಭಾರ​ತ​ಮಾ​ಲಾ’ ಪ್ರದ​ರ್ಶ​ನ​ದಲ್ಲಿ ಭಾರ​ತದ ಮೂರೂ ಸೇನಾ​ಪಡೆ ಪಾಲ್ಗೊ​ಳ್ಳ​ಲಿವೆ. ‘ಯೋಗ ಸಾಗ​ರ​ಮಾ​ಲಾ’ ಅಡಿ ಐಎ​ನ್‌​ಎಸ್‌ ವಿಕ್ರಾಂತ್‌ ಯುದ್ಧ​ನೌ​ಕೆ​ಯಲ್ಲಿ ಯೋಗ ಏರ್ಪಾ​ಟಾ​ಗಿ​ದೆ. ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ​ದಲ್ಲೂ ಯೋಗ ದಿನ ನಡೆ​ಯ​ಲಿದೆ. ಎಲ್ಲಾ ಗ್ರಾಮ​ಗ​ಳ ಶಾಲೆ, ಆಸ್ಪತ್ರೆ, ಅಂಗ​ನ​ವಾಡಿ ಕೇಂದ್ರ​ಗ​ಳಲ್ಲಿ ಈ ಬಾರಿ ಯೋಗ ಪ್ರದರ್ಶನ ನಡೆಯಲಿದೆ.

International Yoga Day 2023: ಇವರೇ ನೋಡಿ ಮೊದಲ ಯೋಗ ಗುರು

Latest Videos
Follow Us:
Download App:
  • android
  • ios