Asianet Suvarna News Asianet Suvarna News

ಜೈಲಿನಿಂದ ಬಿಡುಗಡೆಗೊಂಡ 98 ವರ್ಷದ ಅಜ್ಜ: ಸನ್ಮಾನಿಸಿ ಕಳಿಸಿಕೊಟ್ಟ ಜೈಲು ಸಿಬ್ಬಂದಿ

ಜೈಲಿನಿಂದ ಬಿಡುಗಡೆಯಾದ ಹಣ್ಣು ಹಣ್ಣು ವೃದ್ಧನಿಗೆ ಜೈಲು ಸಿಬ್ಬಂದಿಯೇ ಸನ್ಮಾನ ಮಾಡಿ ಕಳುಹಿಸಿದ್ದಾರೆ. ಉತ್ತರಪ್ರದೇಶದಲ್ಲಿ ಈ ವಿಶೇಷ ಘಟನೆ ನಡೆದಿದೆ.

98 year old prisoner released from jail Jail guards honored akb
Author
First Published Jan 9, 2023, 4:40 PM IST

ಲಕ್ನೋ:  ಜೈಲಿನಿಂದ ಹೊರಗೆ ಬಂದ ರಾಜಕಾರಣಿಗಳಿಗೆ ಮರಿ ಪುಢಾರಿಗಳಿಗೆ ಅವರ ಅಭಿಮಾನಿಗಳು ಸನ್ಮಾನ ಮಾಡಿ ಊರು ತುಂಬ ಮೆರವಣಿಗೆ ಮಾಡುವ ದೃಶ್ಯಗಳನ್ನು ನೀವು ಕಂಡಿರಬಹುದು. ಆದರೆ ಇಲ್ಲೊಂದು ಕಡೆ ಜೈಲಿನಿಂದ ಬಿಡುಗಡೆಯಾದ ಹಣ್ಣು ಹಣ್ಣು ವೃದ್ಧನಿಗೆ ಜೈಲು ಸಿಬ್ಬಂದಿಯೇ ಸನ್ಮಾನ ಮಾಡಿ ಕಳುಹಿಸಿದ್ದಾರೆ. ಉತ್ತರಪ್ರದೇಶದಲ್ಲಿ ಈ ವಿಶೇಷ ಘಟನೆ ನಡೆದಿದೆ. 98 ವರ್ಷ ವೃದ್ಧ ರಾಮ್ ಸುರತ್ (Ram Surat) ಅವರು ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.  ಅವರು ಪ್ರಕರಣವೊಂದರಲ್ಲಿ ಐದು ವರ್ಷ ಜೈಲು ಶಿಕ್ಷೆ ಪೂರೈಸಿದ್ದರು. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 452, 323 ಹಾಗೂ 352 ರ ಅಡಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಅವರ ಶಿಕ್ಷೆಯ ಅವಧಿ ಮುಗಿದಿದ್ದು, ಅವರನ್ನು ಬೀಳ್ಕೊಡುವ ವೇಳೆ ಜೈಲಿನ ಹಿರಿಯ ಸಿಬ್ಬಂದಿ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. 

ಜೈಲು ಸಿಬ್ಬಂದಿ ವಯೋವೃದ್ಧ ಕೈದಿಗೆ ಸನ್ಮಾನಿಸುತ್ತಿರುವ ವಿಡಿಯೋವನ್ನು  ಉತ್ತರಪ್ರದೇಶದ ಜೈಲು ಅಧಿಕ್ಷಕರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ಜೈಲಿನಲ್ಲಿ ಈ ಘಟನೆ ನಡೆದಿದೆ.  ಅಯೋಧ್ಯಾ ಜೈಲಿನ ಜಿಲ್ಲಾ ಸೂಪರಿಂಟೆಂಡೆಂಟ್  ಶಶಿಕಾಂತ್ ಮಿಶ್ರಾ ಪುತ್ರವಟ್ (Shashikant Mishra Putrawat) ಅವರು  ವಿಡಿಯೋದಲ್ಲಿ ವೃದ್ಧ ಕೈದಿ ರಾಮ್ ಸುರತ್ ಅವರನ್ನು ಪೊಲೀಸರು ಅವರ ನಿವಾಸಕ್ಕೆ ಕರೆದುಕೊಂಡು ಹೋಗಿ ಬಿಡಲಿದ್ದಾರೆ ಎಂದು ಹೇಳುತ್ತಿರುವುದು ಕೇಳಿಸುತ್ತಿದೆ. ಜೊತೆಗೆ ಮಿಶ್ರಾ ಅವರು ವೃದ್ಧ ಕೈದಿಯನ್ನು ಕಾರಿನ ಬಳಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆ ಆಗಿದೆ.

ಜೈಲಿನಿಂದ ಬಿಡುಗಡೆಗೊಂಡ 98 ವರ್ಷದ ಅಜ್ಜ: ಸನ್ಮಾನಿಸಿ ಕಳಿಸಿಕೊಟ್ಟ ಜೈಲು ಸಿಬ್ಬಂದಿ

ವಿಡಿಯೋದಲ್ಲಿ ಪೋಸ್ಟ್ ಮಾಡಿ ಡಿಜೆ ಹೀಗೆ ಹಿಂದಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.  ಪರಹಿತಕ್ಕಿಂತ ಧರ್ಮ ಬೇರೊಂದಿಲ್ಲ ಸಹೋದರ, 98 ವರ್ಷದ ವೃದ್ಧ ಶ್ರೀ ರಾಮ್ ಸುರತ್ ಅವರನ್ನು ಜೈಲಿನಿಂದ ಮನೆಗೆ ಕರೆದುಕೊಂಡು ಹೋಗಲು ಯಾರೂ ಬಂದಿರಲಿಲ್ಲ. ಅಯೋಧ್ಯಾ ಜಿಲ್ಲಾ (Ayodhya Jail) ಜೈಲಿನ ಸೂಪರಿಟೆಂಡೆಂಟ್  ಶಶಿಕಾಂತ್ ಮಿಶ್ರಾ ಪುತ್ರವಟ್‌ ಅವರು ವೃದ್ಧನನ್ನು ಮನೆಗೆ ಕಾರಿನಲ್ಲಿ ಕಳುಹಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಸುರತ್ ಅವರು 2022ರ ಆಗಸ್ಟ್ 8 ರಂದೇ ಜೈಲಿನಿಂದ ಬಿಡುಗಡೆಗೊಳ್ಳಬೇಕಿತ್ತು. ಆದರೆ 2022ರ ಮೇ.20 ರಂದು ಅವರಿಗೆ ಕೋವಿಡ್ 19 (Covid-19)ಬಂದಿದ್ದರಿಂದ ಅವರನ್ನು 90 ದಿನಗಳ ಕಾಲ ಪರೋಲ್ ಮೇಲೆ ಮನೆಗೆ ಕಳುಹಿಸಲಾಗಿತ್ತು. 

ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು,  ಟ್ವಿಟ್ಟರ್‌ನಲ್ಲಿ ನೂರಾರು ಜನ ಕಾಮೆಂಟ್ ಮಾಡಿದ್ದಾರೆ.  ಅನೇಕರು ಅವರನ್ನು ಈ ವಯಸ್ಸಿನಲ್ಲಿ ಏಕೆ ಜೈಲಿಗೆ ಕಳುಹಿಸಲಾಗಿತ್ತು ಎಂದು ಪ್ರಶ್ನಿಸಿದ್ದಾರೆ.  ಆದರೆ ಅದಕ್ಕೆ ಉತ್ತರ ಸಿಕ್ಕಿಲ್ಲ. ಮತ್ತೆ ಕೆಲವರು ಈ ವೃದ್ಧನನ್ನು ಜೈಲಿನಲ್ಲಿರಿಸಿದ್ದಕ್ಕೆ ನ್ಯಾಯಾಂಗ ಹಾಗೂ ಕಾನೂನಿಗೆ ನಾಚಿಕೆ ಆಗಬೇಕು ಇಷ್ಟು ವಯಸ್ಸಾದ ವೃದ್ಧನನ್ನು ಜೈಲಿನಲ್ಲಿರಿಸಿದ್ದು, ಮಾನವೀಯತೆಯೂ ಅಲ್ಲ ನ್ಯಾಯಸಮ್ಮತವೂ ಅಲ್ಲ ಎಂದು ಅನೇಕರು ಕಾಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕ್ಷಣವನ್ನು ವಿವರಿಸಲು ಪದಗಳೇ ಸಿಗುತ್ತಿಲ್ಲ. ಎಂಥಹಾ ಸುಂದರವಾದ ಕ್ಷಣ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ವಿಡಿಯೋ ಕಾಲ್‌ನಲ್ಲೇ ಆಕಳುಗಳ ಫಾರ್ಮ್‌ ನೋಡುತ್ತಿದ್ದೇನೆ: ವಿನಯ್‌ ಕುಲಕರ್ಣಿ

 

Follow Us:
Download App:
  • android
  • ios