Asianet Suvarna News Asianet Suvarna News

ವಿಡಿಯೋ ಕಾಲ್‌ನಲ್ಲೇ ಆಕಳುಗಳ ಫಾರ್ಮ್‌ ನೋಡುತ್ತಿದ್ದೇನೆ: ವಿನಯ್‌ ಕುಲಕರ್ಣಿ

ಜಿ.ಪಂ. ಸದಸ್ಯ ಯೋಗೇಶ್‌ ಗೌಡರ್‌ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರು ಧಾರವಾಡಕ್ಕೆ ಭೇಟಿ ನೀಡಲು ತಮಗೆ ವಿಧಿಸಿರುವ ನಿರ್ಬಂಧದ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

vinay kulkarni react about gets emotional remembering the cows in the farm gvd
Author
First Published Oct 9, 2022, 10:46 AM IST

ಬೆಳಗಾವಿ (ಅ.09): ಜಿ.ಪಂ. ಸದಸ್ಯ ಯೋಗೇಶ್‌ ಗೌಡರ್‌ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರು ಧಾರವಾಡಕ್ಕೆ ಭೇಟಿ ನೀಡಲು ತಮಗೆ ವಿಧಿಸಿರುವ ನಿರ್ಬಂಧದ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಾನೇನು ಭಯೋತ್ಪಾದಕನಾ? ನಾನು ಸಾವಿರಾರು ಆಕಳುಗಳನ್ನು ಮಕ್ಕಳಿಗಿಂತ ಜಾಸ್ತಿ ನೋಡಿಕೊಳ್ಳುತ್ತಿದ್ದೆ. ಈಗ ವಿಡಿಯೋ ಕಾಲ್‌ನಲ್ಲಿ ನನ್ನ ಫಾರ್ಮ್‌ ನೋಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ನೋವು ತೋಡಿಕೊಂಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು, ಎರಡು ಆಕಳು ಇದ್ದರೆ ಸಾಕುವುದೇ ಕಷ್ಟ. 

ಆದರೆ ನಾನು ಹೊರಗಿದ್ದು ಸಾವಿರಾರು ಆಕಳುಗಳನ್ನು ಹೇಗೆ ಸಾಕಬೇಕು? ನನ್ನ ಮಕ್ಕಳಿಗಿಂತ ಜಾಸ್ತಿ ನಾನು ಅವುಗಳನ್ನು ಸಾಕುತ್ತಿದ್ದೆ. ನನಗೆ ಎಷ್ಟುನೋವಾಗಬಹುದು ಎಂದು ಹೇಳಿದರು. ನಾನು ಮಂತ್ರಿ ಆದಾಗೂ ಬೆಂಗಳೂರಿನಲ್ಲಿದ್ದಾಗ ಹೊರತುಪಡಿಸಿ ಒಂದು ದಿನವೂ ಡೈರಿಗೆ ಹೋಗದ ದಿನವೇ ಇಲ್ಲ. ನನ್ನನ್ನು ರಾಜ್ಯದಿಂದ, ಜಿಲ್ಲೆಯಿಂದ ಹೊರಗಿಡಲು ನಾನೇನು ದೊಡ್ಡ ಭಯೋತ್ಪಾದಕನಾ? ಇದರಿಂದ ನನಗೆ ಬಹಳಷ್ಟು ನೋವಾಗಿದೆ. ಇವತ್ತಿಗೂ ಹೊಲ ಹಾಗೂ ಡೈರಿಯನ್ನು ನಾನೇ ನಿರ್ವಹಣೆ ಮಾಡುತ್ತಿದ್ದೇನೆ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರೋದು ಬೇಡ ಎಂದು ಬೇಸರ ತೋಡಿಕೊಂಡರು. ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ತಿಳಿಸಿದರು.

ಶೀಘ್ರ ಗೆಜೆಟ್‌ ಅಧಿಸೂಚನೆ ಹೊರಡಿಸಲು ಸಂಪುಟದಲ್ಲಿ ತೀರ್ಮಾನ: ಸಿಎಂ ಬೊಮ್ಮಾಯಿ

ಜಿಲ್ಲೆಯಿಂದ ಹೊರಗಿಡಲು ನಾನೇನು ಟೆರರಿಸ್ಟಾ?: ಯಾವುದೇ ಪಕ್ಷದ ಶಾಸಕ ಹಾಗೂ ಸಮುದಾಯ ಎಂದು ಭೇದ- ಭಾವ ಮಾಡದೇ ಎಲ್ಲರಿಗೂ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಟ್ಟಿರುವ ನನ್ನನ್ನು ಜಿಲ್ಲೆಯಿಂದ ಹೊರಗಿಡಲು ನಾನೇನು ದೊಡ್ಡ ಟೆರರಿಸ್ಟಾ? ಇದರಿಂದ ನನಗೆ ಬಹಳಷ್ಟು ನೋವಾಗಿದೆ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರೋದು ಬೇಡ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಭಾವುಕರಾಗಿ ತಮ್ಮ ನೋವನ್ನು ಹೊರ ಹಾಕಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹಿತೈಸಿಗಳು, ವಿರೋಧ ಪಕ್ಷದವರು ಕೂಡ ಇಂತಹವರನ್ನು ಹೋಗಿ ಅಲ್ಲಿ ಇಟ್ಟರಲ್ಲ ಎನ್ನುತ್ತಿದ್ದಾರೆ. ಬಿಜೆಪಿಯ ಶೇ.80 ಅಲ್ಲ, ಶೇ.90ರಷ್ಟುಜನರು ಅದನ್ನೇ ಬಯಸುತ್ತಿದ್ದಾರೆ. ನಾನು ಶಾಸಕನಾಗಿದ್ದಾಗ ಯಾವುದೇ ರೀತಿ ಪಾರ್ಟಿ ನೋಡದೇ ನಮ್ಮ ಮನೆ ಬಾಗಿಲಿಗೆ ಬಂದ ಎಲ್ಲರ ಕೆಲಸ ಮಾಡಿಕೊಟ್ಟಿದ್ದೇನೆ ಎಂದು ಭಾವುಕರಾಗಿ ಮಾತನಾಡಿದರು. ಎಲ್ಲದಕಿಂತ ಹೆಚ್ಚು ನೋವು ಇರೋದು ನಾನು ಸಾಕಿದ ಜಾನುವಾರುಗಳನ್ನು ನೋಡದೇ ಇರೋದು. ರಾಜಕಾರಣದಲ್ಲಿ ಈ ರೀತಿ ಷಢ್ಯಂತ್ರ ಮಾಡೋದು ಏನಿದೆ..? ಯಾರಿಗೂ ನನಗೆ ಬಂದ ಪರಿಸ್ಥಿತಿ ಬರೋದು ಬೇಡ. ನನ್ನ 25 ವರ್ಷದ ರಾಜಕೀಯದಲ್ಲಿ ಒಮ್ಮೆಯೂ ಈ ರೀತಿಯ ರಾಜಕಾರಣ ಮಾಡಿಲ್ಲ ಎಂದರು.

ಈಶ ಕೇಂದ್ರದಲ್ಲಿ ನಾಗಮಂಟಪ ಉದ್ಘಾಟನೆ ಮಾಡಿದ ಸಿಎಂ ಬೊಮ್ಮಾಯಿ

ಧಾರವಾಡ ಗ್ರಾಮೀಣ ಕ್ಷೇತ್ರದಿಂದಲ್ಲೇ ಸ್ಪರ್ಧೆ: ನಾನು ಸುಮ್ಮನೆ ಕೂರುವ ವ್ಯಕ್ತಿಯಲ್ಲ. ನಾನು ಎಲ್ಲಿಯೇ ಕುಳಿತರೂ ಆಕ್ಟಿವ್‌ ಆಗಿರುತ್ತೇನೆ. ಇಲ್ಲೆ ಕುಳಿತು ವಿಡಿಯೋ ಕಾಲ… ಮೂಲಕ ಡೈರಿಯನ್ನು ನೋಡುತ್ತಿದ್ದೇನೆ. ಗಾಲಿ ಜನಾರ್ಧನ ರೆಡ್ಡಿಯವರ ಗಣಿಗಾರಿಕೆ ಬಂದ ಆದರೆ ನಡೆಯುತ್ತದೆ. ವಿಜಯ ಮಲ್ಯ ಸೇರಿ ಬೇರೆ ಅದೇಷ್ಟೋ ಉದ್ಯಮಿಗಳು ಹೊರಗೆ ಇದ್ದಾರೆ. ಆದರೆ ಐದು ಸಾವಿರ ಜೀವಂತ ಪ್ರಾಣಿಗಳು ನನ್ನು ಇವೆ. ಪ್ರತಿದಿನ ಅವಕ್ಕೆ ಊಟ ಹಾಕಬೇಕು. ಇನ್ನು 100 ಪರ್ಸೆಂಟ್‌ ಕಾನೂನು ಹೋರಾಟ ಮಾಡಿಯೇ ಮಾಡುತ್ತೇನೆ. ನ್ಯಾಯಾಂಗಕ್ಕೆ ನಾವು ಗೌರವ ಕೊಡಬೇಕಾಗುತ್ತೆ. ನ್ಯಾಯಾಂಗ ಏನು ಆದೇಶ ನೀಡುತ್ತದೆ ಅದರ ಮೇಲೆ ಮತ್ತು ಮುಂದಿನ ಅವಕಾಶಗಳಿಗೆ ನಾವು ಅರ್ಜಿ ಸಲ್ಲಿಸುತ್ತೇವೆ. ಈಗಾಗಲೇ ನನಗೆ ಜಾಮೀನು ಸಿಕ್ಕು ಒಂದು ವರ್ಷ ಆಗಿದೆ. ಅದಕ್ಕೆ ಕೆಲ ವಿನಾಯಿತಿ ಕೊಡಬೇಕಾಗುತ್ತದೆ. ಹೀಗಾಗಿ ಅದರ ಮೇಲೆ ಕೇಳಿಕೊಳ್ಳುತ್ತೇನೆ. ಇನ್ನು ನೂರಕ್ಕೆ ನೂರು ನಾನು 2023ರ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಮತಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios