old man last cigarette viral video: 96 ವರ್ಷದ ವೃದ್ಧರೊಬ್ಬರು, ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ತಾನು ಬದುಕುಳಿಯುವುದಿಲ್ಲ ಎಂಬ ಭಯದಿಂದ ಕೊನೆಯ ಸಿಗರೇಟ್ ಸೇದಿದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಅವರು ಧೂಮಪಾನ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಯುವ ಮೊದಲು ಕೊನೆಯಾಸೆ ತೀರಿಸಿಕೊಂಡ ವೃದ್ಧ

ಅನೇಕರಿಗೆ ಸಾಯುವ ಮೊದಲು ಏನೇನೋ ಆಸೆಗಳಿರುತ್ತವೆ. ವಿದೇಶ ಪ್ರಯಾಣ ಮಾಡ್ಬೇಕು ವಿಮಾನದಲ್ಲಿ ಹೋಗ್ಬೇಕು. ಜೀವದ ಗೆಳೆಯ/ಗೆಳತಿ ಜೊತೆ ಮಾತನಾಡ್ಬೇಕು, ಕಂಠಪೂರ್ತಿ ಕುಡಿಬೇಕು, ಚಿಕನ್ ಮಟನ್ ಸ್ವೀಟ್ ತಿನ್ಬೇಕು ಸ್ಮೋಕ್ ಮಾಡ್ಬೇಕು ಹೀಗೆ ಏನೇನೋ ಆಸೆಗಳಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ 96 ವರ್ಷದ ವೃದ್ಧರೊಬ್ಬರು ಹೃದಯದ ಶಸ್ತ್ರಚಿಕಿತ್ಸೆಗೂ ಮೊದಲು, ಶಸ್ತ್ರಚಿಕಿತ್ಸೆಯ ಬಳಿಕ ತಾನು ಬದುಕ್ತಿನೋ ಇಲ್ವೋ ಯಾರಿಗೆ ಗೊತ್ತು ಎಂದು ಹೇಳಿ ಕೊನೆಯದಾಗಿ ಸಿಗರೇಟ್ ಎಳೆದಿದ್ದಾರೆ. ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೃದ್ಧ ಕಳೆದ 80 ವರ್ಷಗಳಿಂದಲೂ ಸಿಗರೇಟ್ ಎಳೆಯುತ್ತಾ ಬದುಕಿದವರು ಅವರು ಅವರಿಗೆ ಅದು ಎಂದಿಗೂ ಬಿಡಲಾಗದ ಮಿತ್ರನಂತೆ ಚಟವಾಗಿತ್ತು. ಹೀಗಾಗಿ ಅವರು ಇನ್ನೇನು ಹೃದಯದ ಶಸ್ತ್ರಚಿಕಿತ್ಸೆಗೆ ಆಪರೇಷನ್‌ ಥಿಯೇಟರ್‌ಗೆ ಹೋಗುವುದಕ್ಕೆ ಮೊದಲು ತಾನು ಬಹುಶಃ ಇನ್ನೂ ಬದುಕದೇ ಹೋದರೆ ಎಂದು ಸಿಗರೇಟ್ ಎಳೆದಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಆದರೆ ಅವರು ಹಾಸಿಗೆಯ ಬೆಡ್ ಮೇಲೆ ಮಲಗಿಕೊಂಡೆ ಕೊನೆಯ ಸಿಗರೇಟ್ ಎಳೆಯುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರ ಒಂದು ಕೈಗೆ ಡ್ರಿಪ್ ಹಾಕುವುದಕ್ಕಾಗಿ ಸಿರಿಂಜ್ ಕುತ್ತಿರುವುದನ್ನು ಕಾಣಬಹುದು. ಹಾಗೂ ಇನ್ನೊಂದು ಕೈನಲ್ಲಿ ಅವರು ಆಸ್ಪತ್ರೆಯ ಬೆಡ ಮೇಲಿಂದಲೇ ಬಿಂದಾಸ್ ಆಗಿ ಸ್ಮೋಕ್ ಮಾಡ್ತಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ವಿಡಿಯೋ ನೋಡಿದ ಅನೇಕರು ಆ ಅಜ್ಜನಿಗೆ ಶುಭಾ ಹಾರೈಸಿದ್ದಾರೆ. ಅವರ ಭಾವನೆ ನನಗೆ ಅರ್ಥವಾಗ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಅವರೊಬ್ಬ ನಿಜವಾದ ಲೆಜೆಂಡ್ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು 96ನೇ ವರ್ಷದ ಅವರಿಗೆ ಹೃದಯ ಸರ್ಜರಿಯ ಎಂದು ಅಚ್ಚರಿ ಪಟ್ಟಿದ್ದಾರೆ. ಬಿಂದಾಸ್ ತಾತ ನಿಮ್ಮನ್ನು ನೋಡಿ ಮಜಾ ಬಂತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಸ್ಟೈಲ್ ಕ್ರೇಜ್ ನೋಡಿದ್ರೆ ನೀವು ಸಾಯ್ತೀರಾ ಎಂದು ಅನ್ಸಲ್ಲ ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತನೇಕರು ಆಪರೇಷನ್‌ನ ನಂತರ ಅವರು ಬದುಕಿದ್ದಾರಾ ಎಂದು ಕುತೂಹಲದಿಂದ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಡಿವೋರ್ಸ್ ಬಳಿಕ ಮರು ಮದುವೆಯಾಗಿದ್ದ ಗರ್ಭಿಣಿ ಪತ್ನಿಯನ್ನು ಕೊಂದ ಮಾಜಿ ಪತಿ

ಸತ್ತರೂ ನೆಮ್ಮದಿಯಿಂದ ಸಾಯಬೇಕು, ಬದುಕಿದರೂ ನೆಮ್ಮದಿಯಿಂದ ಬದುಕಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಇಷ್ಟು ಸುದೀರ್ಘ ಕಾಲ ಬದುಕ್ತೇನೋ ಇಲ್ಲವೋ ಗೊತ್ತಿಲ್ಲ, ಒಂದು ವೇಳೆ ನಾನು ಬದುಕಿದ್ದರೆ ನನ್ನ ಕೊನೆಯಾಸೆಯೂ ಇದೆ ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಸಿಗರೇಟ್ ಪ್ಯಾಕೇಟ್ ಮೇಲೆಯೂ ಬರೆದಿರುತ್ತಾರೆ. ಆದರೂ ಜನ ಸಿಗರೇಟ್ ಎಳೆಯುವುದನ್ನು ಕಡಿಮೆ ಮಾಡುವುದಿಲ್ಲ.

ಇದನ್ನೂ ಓದಿ: ಸೇವ್ ಬಾಕ್ಸ್ ಹಗರಣ: ನಟ ಜಯಸೂರ್ಯ 39 ಲಕ್ಷ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

View post on Instagram