ಪ್ರಸಕ್ತ ವರ್ಷ 9 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರ ದೇಶವ್ಯಾಪಿ ಪ್ರವಾಸವೂ ಚುರುಕು ಪಡೆದಿದ್ದು, ಕಳೆದ ಶುಕ್ರವಾರದಿಂದ ಹಿಡಿದು 4 ದಿನಗಳ ಅವಧಿಯಲ್ಲಿ ಮೋದಿ 90 ಗಂಟೆಗಳ ಅವಧಿಯಲ್ಲಿ 10800 ಕಿ.ಮೀ ದೂರ ಪ್ರಯಾಣಿಸಿದ್ದಾರೆ.

ನವದೆಹಲಿ: ಪ್ರಸಕ್ತ ವರ್ಷ 9 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರ ದೇಶವ್ಯಾಪಿ ಪ್ರವಾಸವೂ ಚುರುಕು ಪಡೆದಿದ್ದು, ಕಳೆದ ಶುಕ್ರವಾರದಿಂದ ಹಿಡಿದು 4 ದಿನಗಳ ಅವಧಿಯಲ್ಲಿ ಮೋದಿ 90 ಗಂಟೆಗಳ ಅವಧಿಯಲ್ಲಿ 10800 ಕಿ.ಮೀ ದೂರವನ್ನು ಕ್ರಮಿಸುವ ಮೂಲಕ 10 ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಮೋದಿ ಅವರ ಈ ಎಡೆಬಿಡದ ಪ್ರಯಾಣ ಆರಂಭವಾಗಿದ್ದು ಫೆ.10ರಂದು. ಅಂದು ಪ್ರಧಾನಿ ದೆಹಲಿಯಿಂದ (Delhi) ಉತ್ತರಪ್ರದೇಶದ ಲಖನೌಗೆ (Lucknow) ಪ್ರಯಣಿಸಿ ಅಲ್ಲಿ ಜಾಗತಿಕ ಹೂಡಿಕೆದಾರರ ಸಮ್ಮೇಳನ ಉದ್ಘಾಟಿಸಿದರು. ಬಳಿಕ ಮುಂಬೈಗೆ ಭೇಟಿ ನೀಡಿ 2 ವಂದೇಭಾರತ್‌ ರೈಲು ಮತ್ತು ರಸ್ತೆ ಯೋಜನೆಗಳಿಗೆ ಚಾಲನೆ ನೀಡಿದರು. ನಂತರ ಮುಂಬೈನಲ್ಲಿ ಅಲ್‌ಜಮಿಯಾ ತುಸ್‌ ಸೈಫಿಯಾಹ್‌ನ (Aljamia Tus Saifiyah) ನೂತನ ಕ್ಯಾಂಪಸ್‌ ಉದ್ಘಾಟಿಸಿ ದೆಹಲಿಗೆ ಮರಳಿದರು. ಹೀಗೆ ಮೊದಲ ದಿನ 2700 ಕಿ.ಮೀ ಕ್ರಮಿಸಿದರು. ಮಾರನೇ ದಿನ ಮೋದಿ ತ್ರಿಪುರಾಕ್ಕೆ ಭೇಟಿ ನೀಡಿ ಅಂಬಸ್ಸಾ (Ambassa) ಮತ್ತು ರಾಧಾಕಿಶೋರ್‌ಪುರದಲ್ಲಿ (Radhakishorpur) ರಾರ‍ಯಲಿಯಲ್ಲಿ ಭಾಗಿಯಾಗಿ ದೆಹಲಿಗೆ ಮರಳಿದರು. ಈ ವೇಳೆ 3000 ಕಿ.ಮೀ ಕ್ರಮಿಸಿದರು.

ಪ್ಲಾಸ್ಟಿಕ್‌ ಬಾಟಲಿ ತ್ಯಾಜ್ಯದಿಂದ ತಯಾರಿಸಿದ ಜಾಕೆಟ್‌ ಧರಿಸಿ ಸಂಸತ್ತಿಗೆ ಬಂದ ಪ್ರಧಾನಿ ಮೋದಿ!

ಫೆ.12ರ ಭಾನುವಾರ ದೆಹಲಿಯ ಮಹರ್ಷಿ ದಯಾನಂದ ಸರಸ್ವತಿ(Maharshi Dayananda Saraswati) ಅವರ 200ನೇ ಜನ್ಮ ದಿನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ರಾಜಸ್ಥಾನದ ದೌಸಾಕ್ಕೆ (Dausa in Rajasthan) ತೆರಳಿ ಹಲವು ಹೆದ್ದಾರಿಗಳನ್ನು ಜನಸೇವೆಗೆ ಮುಕ್ತಗೊಳಿಸಿದರು. ದೌಸಾದಲ್ಲಿ 2 ಸಾರ್ವಜನಿಕ ರಾರ‍ಯಲಿ ಉದ್ದೇಶಿಸಿ ಮಾತನಾಡಿ, ಭಾನುವಾರ ಸಂಜೆ ಬೆಂಗಳೂರಿಗೆ ಆಗಮಿಸಿದರು. ಈ ಮೂಲಕ ಮತ್ತೆ 1750 ಕಿ.ಮೀ ದೂರ ಕ್ರಮಿಸಿದರು. ಫೆ.13ರ ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ಏರೋ ಇಂಡಿಯಾಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ಬಳಿಕ ಸೀದಾ ತ್ರಿಪುರಕ್ಕೆ ತೆರಳಿ ಅಗರ್ತಲಾದಲ್ಲಿ ರಾರ‍ಯಲಿ ಉದ್ದೇಶಿಸಿ ಮಾತನಾಡಿ ದೆಹಲಿಗೆ ಮರಳಲಿದ್ದಾರೆ. ಈ ಮೂಲಕ ಮತ್ತೆ 3350 ಕಿ.ಮೀ ದೂರ ಪ್ರಯಾಣಿಸಲಿದ್ದಾರೆ.

ಹೀಗೆ 90 ಗಂಟೆಗಳ ಅವಧಿಯಲ್ಲಿ ಉತ್ತರದ ಲಖನೌದಿಂದ ದಕ್ಷಿಣದ ಬೆಂಗಳೂರಿಗೆ, ಪಶ್ಚಿಮದ ಮುಂಬೈನಿಂದ ಪೂರ್ವ ತ್ರಿಪುರಾವರೆಗೂ ದೇಶದ ನಾಲ್ಕೂ ದಿಕ್ಕುಗಳಲ್ಲಿ 10800 ಕಿ.ಮೀ ಪ್ರಯಾಣ ಕೈಗೊಂಡು ಜನರಿಗೆ ಹಲವು ಸೇವೆಗಳನ್ನು ಸಮರ್ಪಿಸುವುದರ ಜೊತೆಗೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕೆಲಸ ಮಾಡಿದ್ದಾರೆ.

ಪ್ರಧಾನಿ ಮೋದಿಗೆ ಅಡಕೆ ಹಾರ ಹಾಕಿ ಅಭಿನಂದಿಸಿದ ಕಾಗೇರಿ