ಪ್ರಧಾನಿ ಮೋದಿಗೆ ಅಡಕೆ ಹಾರ ಹಾಕಿ ಅಭಿನಂದಿಸಿದ ಕಾಗೇರಿ
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಭೇಟಿ ಮಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ.
ಶಿರಸಿ(ಫೆ.08): ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಭೇಟಿ ಮಾಡಿದರು. ಈ ವೇಳೆ ಅಡಕೆ ಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಕಿದ ಕಾಗೇರಿ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು.
ಬಳಿಕ ಕಾಗೇರಿಯವರ ಅಧ್ಯಕ್ಷತೆಯಲ್ಲಿ ರಚಿತವಾದ ಅತ್ಯುತ್ತಮ ವಿಧಾನಸಭೆ/ವಿಧಾನ ಪರಿಷತ್ತು ಪ್ರಶಸ್ತಿಗೆ ಮಾನದಂಡಗಳನ್ನು ಸೂಚಿಸುವ ಪೀಠಾಸೀನಾಧಿಕಾರಿಗಳ ಸಮಿತಿಯು ಇಂದು ನವದೆಹಲಿಯ ಸಂಸತ್ ಭವನದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಿತು.
ರಾಮಕೃಷ್ಣ ಹೆಗಡೆ ಮಾರ್ಗದಲ್ಲಿ ಸ್ಪೀಕರ್ ಕಾಗೇರಿ: ಪ್ರಹ್ಲಾದ್ ಜೋಶಿ
ಸಮಿತಿಯ ವರದಿಯನ್ನು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರಿಗೆ ನೀಡಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಸಮಿತಿಯ ಸದಸ್ಯರಾದ ಅಸ್ಸಾಂ ಸ್ಪೀಕರ್ ಭಿಶ್ವಜಿತ್ ದೈಮರಿ, ದೆಹಲಿ ಸ್ಪೀಕರ್ ರಾಮ್ ನಿವಾಸ ಗೋಯಲ…, ತಮಿಳುನಾಡು ಸ್ಪೀಕರ್ ಎಂ.ಅಪ್ಪವು ಹಾಗೂ ವಿಧಾನಸಭೆಗಳ ಹಿರಿಯ ಅಧಿಕಾರಿಗಳು, ಲೋಕಸಭೆ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ನಂತರ ಲೋಕಸಭಾಧ್ಯಕ್ಷರನ್ನು ಭೇಟಿ ಮಾಡಿದ ಸ್ಪೀಕರ್ ಕಾಗೇರಿ ಸಮಿತಿಯ ವರದಿ ಸಲ್ಲಿಸಿದರು.