9 ಲಕ್ಷ ಟ್ವೀಟ್, 11 ಲಕ್ಷ ಫೋಟೋ ಪೋಸ್ಟ್, ದಾಖಲೆ ಬರೆದ ಮನ್ ಕಿ ಬಾತ್ 100ನೇ ಕಂತು!
ಪ್ರಧಾನಿ ಮೋದಿ ಮನ್ ಕಿ ಬಾತ್ 100ನೇ ಕಂತು ಅತ್ಯಂತ ಯಶಸ್ವಿಯಾಗಿದೆ. ದೇಶದಲ್ಲಿ ಬಹುತೇಕ ಮುಖ್ಯಮಂತ್ರಿಗಳು ಈ ಕಾರ್ಯಕ್ರಮ ವೀಕ್ಷಿಸಿದ್ದಾರೆ. ಇಷ್ಟೇ ಅಲ್ಲ 9 ಲಕ್ಷ ಟ್ವೀಟ್ ಹರಿದಾಡಿದೆ. 12 ಲಕ್ಷಕ್ಕೂ ಹೆಚ್ಚು ಮಂದಿ ಫೋಟೋ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಇನ್ನೂ ಹಲವು ದಾಖಲೆ ನಿರ್ಮಾಣವಾಗಿದೆ.
ನವದೆಹಲಿ(ಮೇ.01): ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್ ದೇಶ ವಿದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿದೆ. ಎಪ್ರಿಲ್ 30 ಭಾನುವಾರ ಪ್ರಸಾರವಾದ ಮನ್ ಕಿ ಬಾತ್ 100ನೇ ಕಂತು ಹಲವು ದಾಖಲೆ ನಿರ್ಮಿಸಿದೆ. 100ನೇ ವಿಶೇಷ ಕಂತನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಹುತೇಕ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ವೀಕ್ಷಿಸಿದ್ದಾರೆ. ಎಲ್ಲಾ ರಾಜಭವನದಲ್ಲಿ 100ನೇ ಕಂತಿನ ಪ್ರಸಾರಕ್ಕೆ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು. ರೈಲು ನಿಲ್ದಾಣ, ಸಮುದಾಯ ಸೇರಿದಂತೆ ಹಲುವ ಪ್ರದೇಶಗಳಲ್ಲಿ ಮನ್ ಕಿ ಬಾತ್ ವಿಶೇಷ ಕಾರ್ಯಕ್ರಮ ಪ್ರಸಾರವಾಗಿದೆ. ಇಷ್ಟೇ ಅಲ್ಲ ಮನ್ ಕಿ ಬಾತ್ 100ನೇ ಕಂತಿನ ಕುರಿತು 12 ಲಕ್ಷಕ್ಕೂ ಅಧಿಕ ಪೋಟೋ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದೆ. ಇನ್ನು 9 ಲಕ್ಷ ಟ್ವೀಟರ್‌ಗಳು ಹರಿದಾಡಿದೆ.
ಮನ್ ಕಿ ಬಾತ್ 100ನೇ ವಿಶೇಷ ಕಂತು ಆಲಿಸುತ್ತಿರುವ ಕುರಿತು 12 ಲಕ್ಷಕ್ಕೂ ಅಧಿಕ ಮಂದಿ ಸಾಮಾಜಿಕ ಜಾಲತಾಣಧಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ದೇಶ ವಿದೇಶಗಳಲ್ಲಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ 100ನೇ ವಿಶೇಷ ಕಂತಿನ ಕುರಿತು 9 ಲಕ್ಷಕ್ಕೂ ಅಧಿಕ ಟ್ವೀಟ್‌ಗಳು ಹಾಗೂ ಇದಕ್ಕೆ ಮಿಲಿಯನ್‌ಗಟ್ಟಲೇ ಲೈಕ್ಸ್ ಹಾಗೂ ಪ್ರತಿಕ್ರಿಯೆಗಳು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಮನ್ ಕಿ ಬಾತ್ ಭರ್ಜರಿ ಟ್ರೆಂಡಿಂಗ್ ಆಗಿದೆ.#MannKiBaat100Episode ಹಾಗೂ #MannKiBaat100 ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.
ಜನರ ಜತೆಗಿರಲು 50 ವರ್ಷ ಹಿಂದೆ ಮನೆ ಬಿಟ್ಟಿದ್ದೆ; ಪ್ರಧಾನಿ ಆದ ಬಳಿಕ ‘ಮನ್ ಕೀ ಬಾತ್’ ಮೂಲಕ ಜನ ಸಂಪರ್ಕ: ಮೋದಿ
ವಿದೇಶದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಅಧಿಕಾರಿಗಳು ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಿಸಿದ್ದಾರೆ. ಇನ್ನು ವಿದೇಶದಲ್ಲಿರುವ ಭಾರತೀಯ ಸಮುದಾಯಗಳು ಮನ್ ಕಿ ಬಾತ್ 100ನೇ ಕಂತು ಪ್ರಸಾರಕ್ಕೆ ವ್ಯವಸ್ಥೆ ಮಾಡಿಕೊಂಡಿತ್ತು. ರೈಲು ನಿಲ್ದಾಣದಲ್ಲಿ ಕೂಲಿ, ಜನಸಾಮಾನ್ಯರು, ಕಾರ್ಮಿಕರು, ಪೊಲೀಸರು ಸೇರಿದಂತೆ ಎಲ್ಲಾ ವರ್ಗದ ಜನರು 100ನೇ ಕಂತು ಆಲಿಸಿದ್ದಾರೆ.
ಮುಂಬೈ ರಾಜಭವನದಲ್ಲಿ ಬಾಲಿವುಡ್ ಸೆಲೆಬ್ರೆಟಿಗಳಾದ ಮಾಧುರಿ ದೀಕ್ಷಿತ್, ಶಾಹೀದ್ ಕಪೂರ್, ರೋಹಿತ್ ಶೆಟ್ಟಿ ಸೇರಿದಂತೆ ಹಲವು ಸೆಲೆಬ್ರೆಟಿಗಳು ಮನ್ ಕಿ ಬಾತ್ 100ನೇ ಕಂತು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿವಿಧ ಧಾರ್ಮಿಕ ಸ್ಥಳಗಳಲ್ಲೂ ಮನ್ ಕಿ ಬಾತ್ ಚಾಪು ಮೂಡಿಸಿದೆ. ಜಾಮಿಯಾ ಮಸೀದಿ, ಲಖನೌದ ಇರ್ಫಾನಿ ಮದರಸಾ ಸೇರಿದಂತ ಹಲವೆಡೆ ಮನ್ ಕಿ ಬಾತ್ 100ನೇ ಕಂತು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Mann Ki Baat: ಖುಷಿ, ಜ್ಞಾನ ಹಂಚಿದ ಬೆಳಕಿನಂತಹ ಮಾತಿನ ಸರಣಿ
ಸಿಎಂ ಬಸವರಾಜ್ ಬೊಮ್ಮಮಾಯಿ ಶಿಗ್ಗಾಂವಿ ಪಟ್ಟಣದಲ್ಲಿ ಮನ್ ಕಿ ಬಾತ್ 100ನೇ ಎಪಿಸೋಡ್ ಕಾರ್ಯಕ್ರಮ ವೀಕ್ಷಿಸಿದ್ದಾರೆ. ದೇಶದ ಪ್ರತಿ ಮನೆಯಲ್ಲಿ ಮನ್ ಕಿ ಬಾತ್ ಕೇಳುತ್ತಾರೆ. ಮನ್ ಕಿ ಬಾತ್ ದೇಶದ ಜನರ ಭಾವನೆಯಾಗಿದೆ. ಇದರಲ್ಲಿ ಜನರ ಸಮಸ್ಯೆ ಕೇಳಿ ಪರಿಹಾರ ಸೂಚಿಸುವ ವೇದಿಕೆಯಾಗಿದೆ. ಹಳ್ಳಿಗಳಲ್ಲಿ, ಸಣ್ಣ ಸಣ್ಣ ಉದ್ಯೋಗ ಮಾಡುವವರನ್ನು ದೇಶಕ್ಕೆ ಪರಿಚಯ ಮಾಡುವ ಕೆಲಸವಾಗುತ್ತಿದೆ. ಇದರಿಂದ ಅನೇಕರು ತಮ್ಮ ಉದ್ಯೋಗ ಬದಲಾಯಿಸಿ ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಇಷ್ಟುದೊಡ್ಡ ವೇದಿಕೆ ಸಿಕ್ಕಾಗ ಇಡೀ ದೇಶಕ್ಕೆ ಸ್ಫೂರ್ತಿಯಾಗುತ್ತದೆ ಎಂದರು.