ಜನರ ಜತೆಗಿರಲು 50 ವರ್ಷ ಹಿಂದೆ ಮನೆ ಬಿಟ್ಟಿದ್ದೆ; ಪ್ರಧಾನಿ ಆದ ಬಳಿಕ ‘ಮನ್‌ ಕೀ ಬಾತ್‌’ ಮೂಲಕ ಜನ ಸಂಪರ್ಕ: ಮೋದಿ

2014ರಲ್ಲಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಅವರು ಆರಂಭಿಸಿದ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌’ 100ನೇ ಸಂಚಿಕೆ ಭಾನುವಾರ ಪ್ರಸಾರವಾಯಿತು. ಈ ವೇಳೆ ಕಾರ್ಯಕ್ರಮ ಆರಂಭಿಸಿದ್ದಕ್ಕೆ ಕಾರಣ, ಅದು ಬೆಳೆದು ಬಂದ ಬಗೆ, ಜನರ ಬಗೆಗಿನ ತಮ್ಮ ಒಡನಾಟ, ಕಾರ್ಯಕ್ರಮ ತಮ್ಮ ಪಾಲಿಗೆ ಹೇಗೆ ವಿನೂತನ ಅನುಭವವಾಗಿ ಹರಿದುಬಂದಿದೆ ಎಂಬುದರ ಬಗ್ಗೆ ಪ್ರಧಾನಿ ಮೋದಿ ವಿವರವಾಗಿ ಬಣ್ಣಿಸಿದ್ದಾರೆ.

i left home 50 years ago to be with people after becoming the prime minister he connected with people through mann ki baat ash

ನವದೆಹಲಿ (ಮೇ 1, 2023): 50 ವರ್ಷಗಳ ಹಿಂದೆ ನಾನು ಮನೆಯನ್ನು ತೊರೆದು ಹೋಗಿದ್ದು, ದೇಶದ ಜನರಿಂದ ದೂರವಾಗಿ ಇರುವಂತಹ ದಿನಕ್ಕಾಗಿ ಅಲ್ಲ. ಜನರೇ ನನ್ನ ಸರ್ವಸ್ವ. ಅವರಿಂದ ನಾನು ದೂರವಿರಲು ಆಗುತ್ತಿರಲಿಲ್ಲ. 2014ರಲ್ಲಿ ಪ್ರಧಾನಿಯಾಗಿ ದೆಹಲಿಗೆ ಬಂದ ಬಳಿಕ ನನಗೆ ಜನರಿಂದ ದೂರವಾದ ಕೊರತೆ ಕಾಡುತ್ತಿತ್ತು. ಆ ಶೂನ್ಯವನ್ನು ನೀಗಿಸಿದ್ದು ‘ಮನ್‌ ಕೀ ಬಾತ್‌’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಜತೆಗೆ ‘ಮನ್‌ ಕೀ ಬಾತ್‌’ ಎಂಬುದು ಕೇವಲ ಕಾರ್ಯಕ್ರಮವಲ್ಲ. ನಂಬಿಕೆಯ ವಿಷಯ ಹಾಗೂ ವ್ರತ. ಅಧ್ಯಾತ್ಮದ ಪ್ರಯಾಣ. ಜನರು ದೇವರ ಪೂಜೆಗೆ ಹೋದಾಗ ಪ್ರಸಾದವನ್ನು ತರುತ್ತಾರೆ. ನನಗೆ ಮನ್‌ ಕೀ ಬಾತ್‌ ಎಂಬುದು ಜನಸಮೂಹದ ರೂಪದಲ್ಲಿರುವ ದೇವರ ಪಾದದಡಿಯಿಂದ ಸಿಗುವ ಪ್ರಸಾದ. ಮನ್‌ ಕೀ ಬಾತ್‌ ಎಂಬುದು ಕೋಟ್ಯಂತರ ಭಾರತೀಯರು ಹಾಗೂ ಅವರ ಭಾವನೆಗಳ ಮನ್‌ ಕೀ ಬಾತ್‌ ಆಗಿದೆ ಎಂದರು.

ಇದನ್ನು ಓದಿ: ಮನ್‌ ಕೀ ಬಾತ್‌ಗೆ 100ರ ಸಂಭ್ರಮ: ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ; ಪ್ರತಿ ಸಂಚಿಕೆಯೂ ವಿಶೇಷ ಎಂದ ನಮೋ

2014ರಲ್ಲಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಅವರು ಆರಂಭಿಸಿದ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌’ 100ನೇ ಸಂಚಿಕೆ ಭಾನುವಾರ ಪ್ರಸಾರವಾಯಿತು. ಈ ವೇಳೆ ಕಾರ್ಯಕ್ರಮ ಆರಂಭಿಸಿದ್ದಕ್ಕೆ ಕಾರಣ, ಅದು ಬೆಳೆದು ಬಂದ ಬಗೆ, ಜನರ ಬಗೆಗಿನ ತಮ್ಮ ಒಡನಾಟ, ಕಾರ್ಯಕ್ರಮ ತಮ್ಮ ಪಾಲಿಗೆ ಹೇಗೆ ವಿನೂತನ ಅನುಭವವಾಗಿ ಹರಿದುಬಂದಿದೆ ಎಂಬುದರ ಬಗ್ಗೆ ಪ್ರಧಾನಿ ಮೋದಿ ವಿವರವಾಗಿ ಬಣ್ಣಿಸಿದ್ದಾರೆ.

‘ಮನ್‌ ಕೀ ಬಾತ್‌’ 100ನೇ ಕಂತನ್ನು ಸ್ಮರಣೀಯವಾಗಿಸಲು ಬಿಜೆಪಿ ದೇಶದ ವಿವಿಧೆಡೆ 4 ಲಕ್ಷ ಸ್ಥಳಗಳಲ್ಲಿ ಕೇಳುವ ವ್ಯವಸ್ಥೆ ಮಾಡಿತ್ತು. ಮುಂಬೈನಲ್ಲಿ ಗೃಹ ಸಚಿವ ಅಮಿತ್‌ ಶಾ, ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕರ್ನಾಟಕದಲ್ಲಿ ಜೆ.ಪಿ.ನಡ್ಡಾ, ಬಿಜೆಪಿ ಆಳ್ವಿಕೆಯ ಮುಖ್ಯಮಂತ್ರಿಗಳು ಕಾರ್ಯಕ್ರಮವನ್ನು ಆಲಿಸಿದರು. ಉಳಿದಂತೆ ಬಿಜೆಪಿ ಮತ್ತು ಎನ್‌ಡಿಎ ಆಡಳಿದ ರಾಜ್ಯಗಳ ಮುಖ್ಯಮಂತ್ರಿಗಳ ನಿವಾಸದಲ್ಲಿ, ಆಯಾ ರಾಜ್ಯಗಳ ರಾಜಭವನದಲ್ಲಿ, ದೇಶ, ವಿದೇಶಗಳಲ್ಲಿ ಕಾರ್ಯಕ್ರಮ ಆಲಿಕೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ:  Mann Ki Baat: ಪ್ರಧಾನಿ ಭಾಷಣದಿಂದ ಕ್ರೀಡೆಗೆ ದೊರಕಿದ ಪ್ರೋತ್ಸಾಹ, ಸ್ಫೂರ್ತಿ ಬಹಳ ದೊಡ್ಡದು: ಸಾನಿಯಾ ಮಿರ್ಜಾ

ಮೋದಿ ಮನದ ಮಾತು:
100ನೇ ಕಂತಿನ ಕಾರ್ಯಕ್ರಮದಲ್ಲಿ ‘ಮನ್‌ ಕೀ ಬಾತ್‌’ಗೆ ಸಂಬಂಧಿಸಿದ ನೆನಪಿನ ಸುರುಳಿಯನ್ನು ಮೋದಿ ಅವರು ಬಿಚ್ಚಿಟ್ಟರು. ‘2014ರ ಅ.3ರ ವಿಜಯದಶಮಿಯಂದು ಈ ಕಾರ್ಯಕ್ರಮ ಆರಂಭವಾಯಿತು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಶ್ರೀಸಾಮಾನ್ಯರ ಜತೆ ಒಡನಾಟ ಇಟ್ಟುಕೊಳ್ಳುವುದು ಸ್ವಾಭಾವಿಕವಾಗಿತ್ತು. 2014ರಲ್ಲಿ ದೆಹಲಿಗೆ ಆಗಮಿಸಿದ ಬಳಿಕ ಜೀವನವೇ ಭಿನ್ನವಾಗಿದೆ ಎಂಬುದನ್ನು ಕಂಡುಕೊಂಡೆ. ಮಾಡುವ ಕೆಲಸ, ಹೊಣೆಗಾರಿಕೆಗಳು ಭಿನ್ನವಾಗಿದ್ದವು. ಸಂದರ್ಭಗಳು, ಭದ್ರತೆ ಹಾಗೂ ಸಮಯದ ಮಿತಿಗಳಿಗೆ ಬದ್ಧವಾಗಿರಬೇಕಾಗುತ್ತಿತ್ತು. ಆರಂಭಿಕ ದಿನಗಳಲ್ಲಿ ನನಗೆ ಶೂನ್ಯ ಭಾವ ಕಾಡಿತು. 50 ವರ್ಷಗಳ ಹಿಂದೆ ನಾನು ಮನೆಯನ್ನು ತೊರೆದು ಹೋಗಿದ್ದು, ದೇಶದ ಜನರಿಂದ ದೂರವಾಗಿ ಇರುವಂತಹ ದಿನಕ್ಕಾಗಿ ಅಲ್ಲ. ಜನರೇ ನನ್ನ ಸರ್ವಸ್ವ. ಅವರಿಂದ ನಾನು ದೂರವಿರಲು ಆಗುತ್ತಿರಲಿಲ್ಲ. ಈ ಸವಾಲಿಗೆ ‘ಮನ್‌ ಕೀ ಬಾತ್‌’ ಪರಿಹಾರವಾಯಿತು’ ಎಂದು ಮೋದಿ ವಿವರಿಸಿದರು.

‘ಮನ್‌ ಕೀ ಬಾತ್‌’ ಎಂಬುದು ಹಬ್ಬದಂತಾಗಿದೆ. ಭಾರತ ಹಾಗೂ ಇಲ್ಲಿನ ಜನರ ಧನಾತ್ಮಕತೆಯನ್ನು ಆಚರಿಸುತ್ತದೆ. ಕೇಳುಗರಿಂದ ಸ್ವೀಕರಿಸಲಾದ ಪತ್ರಗಳಿಂದ ಭಾವನೆ ತುಂಬಿ ಬಂದಿದೆ ಎಂದರು. ಇದೇ ವೇಳೆ, ಈ ಹಿಂದಿನ ಕಂತುಗಳಲ್ಲಿ ತಾವು ಪ್ರಸ್ತಾಪ ಮಾಡಿದ್ದ ಕೆಲವು ವ್ಯಕ್ತಿಗಳ ಜತೆ ಮೋದಿ ಅವರು ದೂರವಾಣಿ ಸಂಭಾಷಣೆಯನ್ನು ನಡೆಸಿದರು.

ಇದನ್ನೂ ಓದಿ: ಮೋದಿ ‘ಮನ್‌ ಕೀ ಬಾತ್‌’ಗೆ ಇಂದು ಶತಕ: ದೇಶದ 4 ಲಕ್ಷ ಕಡೆ ಕೇಳಲು ಬಿಜೆಪಿ ವ್ಯವಸ್ಥೆ

‘ಮನ್‌ ಕೀ ಬಾತ್‌ ಕಾರ್ಯಕ್ರಮವು ಕೋಟ್ಯಂತರ ಭಾರತೀಯರ ಪ್ರತಿಬಿಂಬ ಮತ್ತು ಅವರ ಭಾವನೆಗಳ ಅಭಿವ್ಯಕ್ತಿಯ ಪ್ರತೀಕವಾಗಿದೆ. ಅದು ಸ್ವಚ್ಛ ಭಾರತವಾಗಿರಬಹುದು, ಆಜಾದಿ ಕಾ ಅಮೃತ್‌ ಮಹೋತ್ಸವ್‌ ಇರಬಹುದು ಮನ್‌ ಕೀ ಬಾತ್‌ನಲ್ಲಿ ಪ್ರಸ್ತಾಪಿಸಿದ ಅಂಶಗಳು ಆಂದೋಲನದ ರೂಪ ಪಡೆದುಕೊಂಡವು. ರಾಜಕೀಯೇತರವಾಗಿ ಮೂಡಿಬರುತ್ತಿರುವ ಮಾಸಿಕ ರೇಡಿಯೋ ಕಾರ್ಯಕ್ರಮವು ಇತರರಿಂದ ಕಲಿಯುವ ಮಹತ್ವದ ಮಾಧ್ಯಮವಾಗಿ ಹೊರಹೊಮ್ಮಿದೆ. ಕಾರ್ಯಕ್ರಮವು ನಾನು ಎಂದಿಗೂ ನಿಮ್ಮಿಂದ ದೂರವಾಗದಂತೆ ನೋಡಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ನಾನು ಯಾರ್ಯಾರ ಹೆಸರು ಪ್ರಸ್ತಾಪ ಮಾಡಿದ್ದೇನೋ ಅವರೆಲ್ಲಾ ನಮ್ಮ ಹೀರೋಗಳಾಗಿದ್ದು, ಈ ಕಾರ್ಯಕ್ರಮಕ್ಕೆ ಜೀವ ತುಂಬಿದ್ದಾರೆ’ ಎಂದು ಮೋದಿ ಬಣ್ಣಿಸಿದರು.

ಮನದ ಮಾತು!
1. ಗುಜರಾತ್‌ ಸಿಎಂ ಆಗಿದ್ದಾಗ ಶ್ರೀಸಾಮಾನ್ಯರ ಜತೆ ಒಡನಾಟ ಇತ್ತು
2. ದಿಲ್ಲಿಗೆ ಬಂದ ಬಳಿಕ ಜೀವನ ಭಿನ್ನವಾಯಿತು. ಶೂನ್ಯಭಾವ ಕಾಡಿತು
3. ಜನರೇ ನನ್ನ ಸರ್ವಸ್ವ. ಅವರಿಂದ ದೂರ ಇರಲು ನನಗೆ ಆಗುತ್ತಿರಲಿಲ್ಲ
4. 2014 ಅಕ್ಟೋಬರ್ 3 ರ ವಿಜಯದಶಮಿಯಂದು ಮನ್‌ ಕೀ ಬಾತ್‌ ಆರಂಭಿಸಿದೆ
5. ಇದೀಗ ನನಗೆ ಕಾರ‍್ಯಕ್ರಮ ಅಲ್ಲ. ನಂಬಿಕೆ, ವ್ರತದ ಜತೆ ಅಧ್ಯಾತ್ಮ ಯಾನ

ಇದನ್ನೂ ಓದಿ: 'ಮನ್‌ ಕೀ ಬಾತ್‌' ಮೋದಿ ಮತ್ತು ದೇಶದ ನಾಗರಿಕರ ನಡುವೆ ಸಂಪರ್ಕ ಬೆಸೆಯುವ ಮುಖ್ಯ ಸಾಧನ: ಆಮೀರ್‌ ಖಾನ್‌ ಪ್ರಶಂಸೆಯ ಮಳೆ

ಸ್ಫೂರ್ತಿದಾಯಕ, ಐತಿಹಾಸಿಕ: ಬಿಜೆಪಿ
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮ ಮನ್‌ ಕೀ ಬಾತ್‌ನ 100ನೇ ಸಂಚಿಕೆ ಐತಿಹಾಸಿಕವಾದ ಸಂಚಿಕೆಯಾಗಿದೆ. ಇದು ಸ್ಪೂರ್ತಿದಾಯಕವಾಗಿದ್ದು, ಹೆಚ್ಚಿನ ಜನರೊಂದಿಗೆ ಸಂಪರ್ಕ ಸಾಧಿಸಲಿದೆ ಎಂದು ಬಿಜೆಪಿ ಸಚಿವರು, ಶಾಸಕರು, ನಾಯಕರು ಹೊಗಳಿದ್ದಾರೆ.

ಮನ್‌ ಅಲ್ಲ, ಮೌನ್‌ ಕೀ ಬಾತ್‌: ಕಾಂಗ್ರೆಸ್‌
ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುತ್ತಿರುವ ಈ ಕಾರ್ಯಕ್ರಮ ‘ಮೌನ್‌ ಕೀ ಬಾತ್‌’ ಆಗಿದೆ. ಈ ಕಾರ್ಯದಲ್ಲಿ ಪ್ರಧಾನಿ ಚೀನಾ, ಅದಾನಿ, ಆರ್ಥಿಕ ಅಸಮಾನತೆ, ಕುಸ್ತಿಪಟುಗಳ ಪ್ರತಿಭಟನೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್‌ ಟೀಕೆ ಮಾಡಿದೆ.

ಇದನ್ನೂ ಓದಿ: ಅಂಗಾಂಗ ದಾನ ಮಾಡಿ: 99ನೇ ಮನ್‌ ಕೀ ಬಾತ್‌ ಭಾಷಣದಲ್ಲಿ ಜನತೆಗೆ ಮೋದಿ ಕರೆ

Latest Videos
Follow Us:
Download App:
  • android
  • ios