Asianet Suvarna News Asianet Suvarna News

ನೇಪಾಳದಲ್ಲಿ ಕೇರಳದ 8 ಪ್ರವಾಸಿಗರು ಸಾವು

ಕೇರಳದ 8 ಮಂದಿ ಪ್ರವಾಸಿಗರು ನೇಪಾಳದ ಹೋಟೆಲ್ ಲ್ಲಿ ಮೃತಪಟ್ಟಿದ್ದಾರೆ. ಗ್ಯಾಸ್ ಲೀಕ್ ಆಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. 

8 tourists from Kerala found dead in Nepal hotel
Author
Bengaluru, First Published Jan 22, 2020, 10:50 AM IST

ಕಾಠ್ಮಂಡು[ಜ.22]: ನೇಪಾಳ ಪ್ರವಾಸಕ್ಕೆ ತೆರಳಿದ್ದ ಕೇರಳದ ಇಬ್ಬರು ದಂಪತಿಗಳು ಹಾಗೂ ನಾಲ್ಕು ಮಕ್ಕಳು ರೆಸಾರ್ಟ್‌ ಒಂದರಲ್ಲಿ ಸಾವನ್ನಪ್ಪಿದ್ದು, ಗ್ಯಾಸ್‌ ಸೋರಿಕೆಯಿಂದಾಗಿ ಉಸಿರುಗಟ್ಟಿಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. 

ನೇಪಾಳದ ಪ್ರಸಿದ್ದ ಪೋಖ್ರಾ ಹಿಮಾಲಯ ಬೆಟ್ಟಕ್ಕೆ ಪ್ರವಾಸ ತೆರಳಿದ್ದ ಹದಿನೈದು ಮಂದಿಯ ಗುಂಪಿನಲ್ಲಿ ಈ ಎಂಟು ಮಂದಿ ಇದ್ದರು. 

ಪ್ರವಾಸ ಮುಗಿಸಿ ಮರಳುವುದಕ್ಕೂ ಮುನ್ನ ಸೋಮವಾರ ರಾತ್ರಿ ಮಖವಾನ್‌ಪುರ ಜಿಲ್ಲೆಯ ದಮಾನ್‌ನ ಎವರೆಸ್ಟ್‌ ಪನೋರಮ ರೆಸಾರ್ಟ್‌ನ ಒಂದೇ ಈ ರೂಮ್‌ನಲ್ಲಿ ಎಂಟು ಮಂದಿ ತಂಗಿದ್ದರು.

ವಿಶ್ವದ ಅತ್ಯಂತ ಕುಬ್ಜ ಮನುಷ್ಯ ಖಗೇಂದ್ರ ಥಾಪಾ ಇನ್ನಿಲ್ಲ!...

ಈ ವೇಳೆ ಚಳಿಯಿಂದ ರಕ್ಷಣೆ ಪಡೆಯಲು ಗ್ಯಾಸ್‌ ಹೀಟರ್‌ ಚಾಲೂ ಮಾಡಿ ನಿದ್ದೆಗೆ ಜಾರಿದ್ದರು. ಕೋಣೆಯ ಬಾಗಿಲು, ಕಿಟಕಿಗಳನ್ನು ಒಳಗಿನಿಂದ ಬಂದ್‌ ಮಾಡಿದ್ದರಿಂದ ಉಸಿರು ಗಟ್ಟಿಮೃತ ಪಟ್ಟಿರಬಹುದು ಎಂದು ಹೊಟೇಲ್‌ ಮ್ಯಾನೇಜರ್‌ ಹೇಳಿದ್ದಾರೆ.

Follow Us:
Download App:
  • android
  • ios