ಕಠ್ಮಂಡು(ಜ.18): ವಿಶ್ವದ ಅತ್ಯಂತ ಕುಬ್ಜ ವ್ಯಕ್ತಿ ಎಂದು ಗಿನ್ನೀಸ್ ದಾಖಲೆ ಸೇರಿದ್ದ ನೇಪಾಳದ ಖಗೇಂದ್ರ ಥಾಪಾ ಮಗರ್ ನಿಧನರಾಗಿದ್ದಾರೆ.

ನಿಮೋನಿಯಾ ರೋಗದಿಂದ ಬಳಲುತ್ತಿದ್ದ ಖಗೇಂದ್ರ, ಇಲ್ಲಿನ ಪೋಖರಾದಲ್ಲಿರುವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಗಿ ಕುಟುಂಬಸ್ಥರು  ಮಾಹಿತಿ ನೀಡಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದ ಖಗೇಂದ್ರ, ನಿಮೋನಿಯಾ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಕೇವಲ 68.8 ಸೆ.ಮೀ(2.41 ಇಂಚು) ಉದ್ದವಿದ್ದ ಖಗೇಂದ್ರ, 2010ರಲ್ಲಿ ವಿಶ್ವದ ಅತ್ಯಂತ ಕುಬ್ಜ ವ್ಯಕ್ತಿ ಎಂದು ಗಿನ್ನೀಸ್ ದಾಖಲೆ ಪ್ರಶಸ್ತಿಗೆ ಭಾಜನಾರಿದ್ದರು.

ಇನ್ನು ಖಗೇಂದ್ರ ನಿಧನಕ್ಕೆ ಸಂತಾಪ ಸೂಚಿಸಿರುವ ಗಿನ್ನೀಸ್ ಬುಕ್ ಸಂಸ್ಥೆ, ಸದಾ ಲವಲವಿಕೆಯಿಂದ ಇರುತ್ತಿದ್ದ ಖಗೇಂದ್ರ ನಮ್ಮೆಲ್ಲರಿಗೂ ಸ್ಪೂರ್ತಿಯ ಚಿಲುಮೆ ಎಂದು ಹೇಳಿದೆ.