ಯೋಗ ಶಿಬಿರದಲ್ಲಿ ವ್ಯಕ್ತಿಗೆ ಹೃದಯಾಘಾತ, ಯೋಗಾಸನ ಮಾಡ್ತಿದ್ದಾರೆಂದು ತಪ್ಪು ತಿಳಿದುಕೊಂಡು ಸುಮ್ಮನಿದ್ದ ಮಂದಿ!
ಇತ್ತೀಚಿಗೆ ಹೃದಯಾಘಾತದಿಂದ ದಿಢೀರ್ ಸಾವನ್ನಪ್ಪುತ್ತಿರುವವರ ಪ್ರಕರಣಗಳು ಹೆಚ್ಚಾಗ್ತಿವೆ. ಯೋಗಾಸನ ಮಾಡ್ತಿರುವಾಗಲೇ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶ: ಯೋಗಾಸನ ಮಾಡ್ತಿರುವಾಗಲೇ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 73 ವರ್ಷದ ವ್ಯಕ್ತಿ. ಇಂದೋರ್ ಜಿಲ್ಲೆಯಲ್ಲಿ ಯೋಗ ಮಾಡ್ತಿರೋವಾಗ್ಲೇ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾನೆ. ಜನರು ವ್ಯಕ್ತಿ ಯೋಗ ಮಾಡುತ್ತಲೇ ಇದ್ದಾನೆ ಎಂದು ತಪ್ಪು ತಿಳಿದುಕೊಂಡ ಕಾರಣ ನೆರವಿಗೆ ಧಾವಿಸಲ್ಲಿಲ್ಲ. ನಗರದ ಫೂಟಿ ಖೋಟಿ ಪ್ರದೇಶದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯೋಗ ಶಿಬಿರದಲ್ಲಿ ಜನರ ಗುಂಪಿನೊಂದಿಗೆ ಯೋಗ ಮಾಡಿದ್ದ ಬಲ್ವೀರ್ ಸಿಂಗ್ ಛಾಬ್ರಾ ಕೈಯಲ್ಲಿ ರಾಷ್ಟ್ರಧ್ವಜದೊಂದಿಗೆ ದೇಶಭಕ್ತಿ ಗೀತೆಗೆ ನೃತ್ಯ ಮಾಡಿದರು. ನಂತರ ಯೋಗ ಮಾಡುತ್ತಿದ್ದಾಗಲೇ ಕುಸಿದು ಬಿದ್ದಿದ್ದಾರೆ. 'ಛಾಬ್ರಾ ಹಠಾತ್ತನೆ ಪ್ರಜ್ಞಾಹೀನರಾಗಿ ಕುಸಿದು ಬಿದ್ದರು. ಆರಂಭದಲ್ಲಿ ಇದು ಅವರ ಪ್ರದರ್ಶನದ ಭಾಗ ಎಂದು ನಾವು ಭಾವಿಸಿದ್ದೇವೆ, ಆದರೆ ಅವರು ನಿಮಿಷವೂ ಎದ್ದೇಳದಿದ್ದಾಗ ನಮಗೆ ಅನುಮಾನ ಬಂತು' ಎಂದು ಶಿಬಿರದಲ್ಲಿ ಭಾಗಿಯಾದ ಇತರ ಮಂದಿ ಹೇಳಿದ್ದಾರೆ.
ಸೊಸೆ ಸಾವಿನ ಸುದ್ದಿ ಕೇಳಿ ಶಾಕ್, ಹೃದಯಾಘಾತದಿಂದ ಅತ್ತೆ ಸಾವು
ಛಾಬ್ರಾ ಅವರಿಗೆ ಸಿಪಿಆರ್ ನೀಡಲಾಯಿತು ಮತ್ತು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಇಸಿಜಿ ಮತ್ತು ಇತರ ಪರೀಕ್ಷೆಗಳ ನಂತರ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಕುಟುಂಬವು ಛಾಬ್ರಾ ಕಣ್ಣು ಮತ್ತು ಚರ್ಮವನ್ನು ದಾನ ಮಾಡಿದೆ. ಛಾಬ್ರಾ ಮಗ ಜಗಜಿತ್ ಸಿಂಗ್, ತಂದೆ ವರ್ಷಗಳಿಂದ ದೇಶಭಕ್ತಿಯ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದರು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆದ ನಂತರ, ನೆಟ್ಟಿಗರು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು. 'ಅನೇಕ ಜನರು ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದ ಕಾರಣ ಅವರ ಆರೋಗ್ಯ ಸ್ಥಿತಿಯನ್ನು ಯಾರೂ ಗ್ರಹಿಸಲಿಲ್ಲ ಎಂದು ತೋರುತ್ತದೆ' ಎಂದಿದ್ದಾರೆ. ಮತ್ತೊಬ್ಬರು, ' ಸಮಯೋಚಿತ ಮಧ್ಯಸ್ಥಿಕೆ ಮತ್ತು ಸಿಪಿಆರ್‌ನಿಂದ ಅವರ ಜೀವನ ಉಳಿಸಬಹುದಿತ್ತು' ಎಂದು ಕಾಮೆಂಟಿಸಿದ್ದಾರೆ.
ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ವ್ಯಕ್ತಿ ಹಾರ್ಟ್‌ಅಟ್ಯಾಕ್‌ನಿಂದ ಸಾವು, ಹೃದಯ ವಿದ್ರಾವಕ ಕ್ಷಣ ಸಿಸಿಟಿವಿಯಲ್ಲಿ ಸೆರೆ