ಟಿಬೆಟ್ ಧರ್ಮಗುರು ದಲೈ ಲಾಮಾಗೆ ಭಾರತ ರತ್ನ ನೀಡಲು ಶೇ.62 ಭಾರತೀಯರ ಬೆಂಬಲ!
ಪ್ರತಿ ಬಾರಿ ಭಾರತದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಗೆ ನಾಮ ನಿರ್ದೇಶ, ಹೆಸರು ಘೋಷಣೆಗಳ ವೇಳೆ ಸಾಕಷ್ಟು ಚರ್ಚೆಯಾಗುತ್ತವೆ. ಇದೀಗ ಟಿಬೆಟ್ ಧರ್ಮಗುರು ದಲೈ ಲಾಮಾಗೆ ಭಾರತ ರತ್ನ ಪ್ರಶಸ್ತಿ ನೀಡಲು ಭಾರತೀಯರು ಆಗ್ರಹಿಸಿದ್ದಾರೆ. ಶೇಕಡಾ 62ರಷ್ಟು ಮಂದಿ ದಲೈ ಲಾಮಾಗೆ ಭಾರತ ರತ್ನ ನೀಡಲು ಬೆಂಬಲ ಸೂಚಿಸಿದ್ದಾರೆ.
ನವದೆಹಲಿ(ಜ.22): ಗಣನೀಯ ಸಾಧನೆ ಪರಿಗಣಿಸಿ ನೀಡಲಾಗುವ ಭಾರತದ ಪರಮೋಚ್ಚ ಭಾರತ ರತ್ನ ಪ್ರಶಸ್ತಿಗೆ ಇದೀಗ ಟಿಬೆಟ್ ಧರ್ಮಗುರು ದಲೈ ಲಾಮಾ ಹೆಸರು ಕೇಳಿ ಬಂದಿದೆ. ಹೌದು. IANS C-ವೋಟರ್ ಸಮೀಕ್ಷೆಯೊಂದು ಈ ಮಾಹಿತಿ ಬಹಿರಂಗ ಪಡಿಸಿದೆ. ಭಾರತದ ಶೇಕಡಾ 62ರಷ್ಟು ಮಂದಿ ಆಧ್ಯಾತ್ಮಿಕ ನಾಯಕ ದಲೈ ಲಾಮಾಗೆ ಭಾರತ ರತ್ನ ನೀಡಲು ಬೆಂಬಲ ಸೂಚಿಸಿದ್ದಾರೆ.
ದಲೈ ಉತ್ತರಾಧಿಕಾರಿ ಆಯ್ಕೆಯಲ್ಲಿ ಚೀನಾ ಆಟಕ್ಕೆ ಅಮೆರಿಕ ಲಗಾಮು!..
2011ರ ತಿದ್ದುಪಡಿ ಬಳಿ ಎಲ್ಲಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಅರ್ಹರನ್ನು ಭಾರತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಭಾರತೀಯರು ದಲೈ ಲಾಮಾಗೆ ಭಾರತ ರತ್ನ ನೀಡವು ಕುರಿತು ಒಲವು ತೋರಿದ್ದಾರೆ. IANS C-ವೋಟರ್ ಭಾರತದ ವಿವಿಧ ಭಾಗದ 3,000 ಮಂದಿಯನ್ನು ಆಯ್ಕೆ ಮಾಡಿ ಸಮೀಕ್ಷೆ ಮಾಡಲಾಗಿತ್ತು. ಈ ಸಮೀಕ್ಷೆಯಲ್ಲಿ ಶೇಕಡಾ 62.40 ರಷ್ಟು ಮಂದಿ ದಲೈ ಲಾಮಾಗೆ ಭಾರತ ನೀಡಲು ಆಗ್ರಹಿಸಿದ್ದಾರೆ.
ಚೀನಿ ಜನತಗೆ ಸ್ವಾತಂತ್ರ್ಯ ಅಗತ್ಯವಿದೆ; ಕೊರೋನಾದಿಂದ ಬದಲಾಗಲಿದೆ ಡ್ರ್ಯಾಗನ್ ದೇಶ ಎಂದ ದಲೈ ಲಾಮಾ
ದಲೈ ಲಾಮಾಗೆ ಭಾರತ ರತ್ನ ನೀಡಲು ಬೆಂಬಲಿಸಿದ ಭಾರತದ ಪುರುಷ ಹಾಗೂ ಮಹಿಳೆಯ ಶೇಕಡಾವಾರು ಅಂಕಿ ಅಂಶವನ್ನೂ ಸಮೀಕ್ಷೆ ಪ್ರಕಟಿಸಿದೆ. ಶೇಕಡಾ 63.1 ರಷ್ಟು ಪುರುಷರು ಮತ್ತು 61.8 ರಷ್ಟು ಮಹಿಳೆಯರು ದಲೈ ಲಾಮಾಗೆ ಭಾರತ ರತ್ನ ನೀಡಿ ಗೌರವಿಸಲು ಬಯಸಿದ್ದಾರೆ. ಅಭಿಪ್ರಾಯ ವ್ಯಕ್ತಪಡಿಸಿದ ಬಹುತೇಕರು ನಗರದ ನಿವಾಸಿಗಳಾಗಿದ್ದಾರೆ. ಅದರಲ್ಲೂ ಬಹುತೇಕರು ಮಧ್ಯಮ ವರ್ಗದ ಜನರಾಗಿದ್ದಾರೆ. ಪ್ರಾಥಮಿಕ, ಪ್ರೌಡ ಶಿಕ್ಷಣ ಪೂರೈಸಿದ ಮಂದಿ, ಒಬಿಸಿ ವರ್ಗಕ್ಕೆ ಸೇರಿದವರು, 55 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಉತ್ತರ ಮತ್ತು ಈಶಾನ್ಯ ಪ್ರದೇಶಗಳಿಂದ ಬಂದವರು ದಲೈ ಲಾಮಾಗೆ ಭಾರತ ರತ್ನ ನೀಡಲು ಬೆಂಬಲ ಸೂಚಿಸಿದ್ದಾರೆ.
ಸತ್ಯದ ತಾಕತ್ತು ಬಂದೂಕಿನ ತಾಕತ್ತಿಗಿಂತ ಹೆಚ್ಚು ಪ್ರಬಲ: ದಲೈ ಲಾಮಾ!
ಧಾರ್ಮಿಕ, ಸಾಮಾಜಿಕ ಹಾಗೂ ಮಾನವೀಯತೆ ಸೇವೆಗಳ ನೀಡಿದ ದಲೈ ಲಾಮಾ ಅವರಿಗೆ ಭಾರತ ರತ್ನ ನೀಡುವಂತೆ ಹಲವು ವರ್ಷಗಳಿಂದ ಭಾರತೀಯ ಸಂಸದರು ಸೇರಿದಂತೆ ಪ್ರಮುಖ ರಾಜಕಾರಣಿಗಳು ಆಗ್ರಹಿಸಿದ್ದಾರೆ. 1959ರಿಂದ ಚೀನಾ ವಿರುದ್ಧ ಬಹಿರಂಗ ಸಮರ ಸಾರಿರುವ ದಲೈ ಲಾಮಾ ಹಲವು ಚಳುವಳಿಗೆ ನೇತೃತ್ವ ವಹಿಸಿದ್ದಾರೆ. 1959ರಲ್ಲಿ ಚೀನಾ ಸೇನೆ ಟಿಬೆಟ್ ಆಕ್ರಮಿಸಿಕೊಂಡ ವೇಳೆ, ದಲೈ ಲಾಮಾ ಸೇನೆಯಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಆಗಮಿಸಿದರು. ಅಂದಿನಿಂದ ದಲೈ ಲಾಮಾ ಚೀನಾ ಕಪಿಮುಷ್ಠಿಯಿಂದ ಟಿಬೆಟ್ ಸ್ವತಂತ್ರಗೊಳಿಸಲು ಹೋರಾಡುತ್ತಿದ್ದಾರೆ. ಭಾರತದಲ್ಲಿ ದಲೈ ಲಾಮಾ ಅವರಿಗೆ ವಿಶೇಷ ಗೌರವವಿದೆ. ದಲೈ ಲಾಮಾಗೆ ಭಾರತ ನೀಡುತ್ತಿರುವ ಸಹಕಾರಕ್ಕೆ ಚೀನಾ ಹಲವು ಬಾರಿ ಕೆಂಡಕಾರಿದೆ.
ಕಳೆದ ಭಾರಿ ಭಾರತ ರತ್ನ ಪ್ರಶಸ್ತಿಗೆ ಹಲವು ಗಣ್ಯರ ಹೆಸರು ಕೇಳಿ ಬಂದಿತ್ತು. ಇದರಲ್ಲಿ ತುಮಕೂರು ಸಿದ್ದಗಂಗ ಮಠದ ಸ್ವಾಮೀಜಿ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಇನ್ನು ಪ್ರತಿ ಭಾರಿ ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಪ್ರಕ್ರಿಯೆ ಆರಂಭವಾದಾಗ, ಭಾರತದ ಹಾಕಿ ದಿಗ್ಗಜ ಧ್ಯಾನಚಂದ್‌ಗೆ ಭಾರತ ರತ್ನ ನೀಡಿ ಅನ್ನೋ ಕೂಗು ಪದೇ ಪದೇ ಕೇಳಿ ಬರುತ್ತಲೇ ಇದೆ.
ಗೃಹ ಇಲಾಖೆ ಶಿಫಾರಸು ಮಾಡಿದ ಹೆಸರುಗಳನ್ನು ಪ್ರಧಾನ ಮಂತ್ರಿ ಆಯ್ಕೆ ಮಾಡಿ ರಾಷ್ಟ್ರಪತಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿಗಳು ಅಂತಿಮ ತೀರ್ಮಾ ತೆಗೆದುಕೊಳ್ಳುತ್ತಾರೆ. ಒಂದು ವರ್ಷ ಗರಿಷ್ಠ ಮೂವರಿಗೆ ಭಾರತ ರತ್ನ ನೀಡುವ ಅವಕಾಶವಿದೆ.