ಸತ್ಯದ ತಾಕತ್ತು ಬಂದೂಕಿನ ತಾಕತ್ತಿಗಿಂತ ಹೆಚ್ಚು ಪ್ರಬಲ: ದಲೈ ಲಾಮಾ!
'ಸತ್ಯದ ತಾಕತ್ತು ಬಂದೂಕಿನ ತಾಕತ್ತಿಗಿಂತ ಹೆಚ್ಚು ಪ್ರಬಲ'| ಟಿಬೆಟ್ ಧರ್ಮಗುರು ದಲೈ ಲಾಮಾ ಅಭಿಮತ| 'ಟಿಬೆಟಿಯನ್ನರು ಸತ್ಯದ ತಾಕತ್ತಿನ ಮೇಲೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ'| 'ಚೀನಿ ಕಮ್ಯೂನಿಸ್ಟ್ ಸರ್ಕಾರ ಬಂದೂಕಿನ ಆಧಾರದ ಮೇಲೆ ಆಡಳಿತ ನಡೆಸುತ್ತಿದೆ'| 'ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ಮಾನವ ಜನಾಂಗವನ್ನು ಮುನ್ನಡೆಸಬೇಕಿದೆ'|
ಗಯಾ(ಡಿ.25): ಸತ್ಯದ ತಾಕತ್ತು ಬಂದೂಕಿನ ತಾಕತ್ತಿಗಿಂತ ಹೆಚ್ಚು ಪ್ರಬಲವಾಗಿದ್ದು, ಟಿಬೆಟಿಯನ್ನರು ಸತ್ಯದ ತಾಕತ್ತಿನ ಮೇಲೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಧರ್ಮಗುರು ದಲೈ ಲಾಮಾ ಹೇಳಿದ್ದಾರೆ.
ಚೀನಿ ಕಮ್ಯೂನಿಸ್ಟ್ ಸರ್ಕಾರ ಬಂದೂಕಿನ ತಾಕತ್ತಿನ ಮೇಲೆ ಟಿಬೆಟಿಯನ್ನರನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಆದರೆ ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂಬುದನ್ನು ಇತಿಹಾಸದಿಂದ ಗೊತ್ತಾಗುತ್ತದೆ ಎಂದು ದಲೈ ಲಾಮಾ ಹೇಳಿದರು.
ಚೀನಾ ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಬೌದ್ಧ ಧರ್ಮ ಅನುಯಾಯಿಗಳನ್ನು ಹೊಂದಿರುವ ದೇಶ. ಆದರೆ ಚೀನಿಯರು ತಮ್ಮ ಬೌದ್ಧ ಧರ್ಮ ಅತ್ಯಂತ ವೈಜ್ಞಾನಿಕ ಎಂದು ಭಾವಿಸುತ್ತಾರೆ. ಆದರೆ ಟೆಬೆಟಿಯನ್ನರ ಧರ್ಮ ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ನಿಂತಿದೆ ಎಂದು ಧಲೈ ಲಾಮಾ ಹೇಳಿದರು.
ಭಾರತೀಯ ಉತ್ತರಾಧಿಕಾರಿ ನೇಮಿಸುವೆ: ದಲೈಲಾಮಾ ಪ್ರಸ್ತಾವ ತಿರಸ್ಕರಿಸಿದ ಚೀನಾ
ಇಂದು ಧರ್ಮದ ಹೆಸರಲ್ಲಿ ವಿಶ್ವದಾದ್ಯಂತ ಹಿಂಸೆ ತಾಂಡವವಾಡುತ್ತಿದ್ದು, ಮನುಷ್ಯ ಮನುಷ್ಯನನ್ನು ಕೊಲ್ಲುತ್ತಿದ್ದಾನೆ. ಈ ವಾತಾವರಣ ಹೋಗಲಾಡಿಸಿ ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ಮಾನವ ಜನಾಂಗವನ್ನು ಮುನ್ನಡೆಸಬೇಕಿದೆ ಎಂದು ದಲೈ ಲಾಮಾ ಅಭಿಪ್ರಾಯಪಟ್ಟರು.