Asianet Suvarna News Asianet Suvarna News

ಚೀನಿ ಜನತಗೆ ಸ್ವಾತಂತ್ರ್ಯ ಅಗತ್ಯವಿದೆ; ಕೊರೋನಾದಿಂದ ಬದಲಾಗಲಿದೆ ಡ್ರ್ಯಾಗನ್ ದೇಶ ಎಂದ ದಲೈ ಲಾಮಾ

ಚೀನಾ ದೇಶದ ಕೆಂಗಣ್ಣಿಗೆ ಗುರಿಯಾಗಿರುವ ಟಿಬೇಟಿಯನ್ ಧರ್ಮಗುರು ದಲೈ ಲಾಮಾ ಇದೀಗ ಹೊಸ ಚೀನಾದ ಉದಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕೊರೋನಾ ವೈರಸ್ ಚೀನಾವನ್ನು ಬದಲಿಸಲಿದೆ ಎಂದಿದ್ದಾರೆ. ಕೊರೋನಾ ವೈರಸ್ ಹಾಗೂ ಚೀನಾ ಕುರಿತು ಧರ್ಮಗುರು ಹೇಳಿದ ಮಾತುಗಳೇನು? ಇಲ್ಲಿದೆ.

Chinese people need more freedom says Tibetan spiritual leader Dalai Lama
Author
Bengaluru, First Published May 30, 2020, 5:58 PM IST
  • Facebook
  • Twitter
  • Whatsapp

ನವದೆಹಲಿ(ಮೇ.30): ಕೊರೋನಾ ವೈರಸ್ ಪ್ರತಿ ದಿನ ಭೀಕರತೆ ಹೆಚ್ಚಿಸುತ್ತಲೇ ಇದೆ. ಸೋಂಕು ತಡೆಯಲು ಸಾಮಾಜಿಕ ಅಂತರ ಅಗತ್ಯ ಕಳೆದ ಕೆಲ ತಿಂಗಳುಗಳಿಂದ ಸ್ವಯಂ ಐಸೋಲೇಶನ್ ಆಗಿರುವ ಟಿಬೇಟಿಯನ ಧರ್ಮಗುರು ದಲೈ ಲಾಮಾ ಇದೀಗ ಕೊರೋನಾ ವೈರಸ್ ಹಾಗೂ ಚೀನಾ ಕುರಿತು ಮಾತನಾಡಿದ್ದಾರೆ. ಕೊರೋನಾ ವೈರಸ್ ಚೀನಾ ದೇಶವನ್ನು ಬದಲಿಸಲಿದೆ ಎಂದು ದಲೈ ಲಾಮಾ ಆಶಾವಾದ ವ್ಯಕ್ತಪಡಿಸಿದ್ದಾರೆ.

WHO ಬೇಕಿದೆ ಹೊಸ ರೂಪ; ಪ್ರಧಾನಿ ಮೋದಿ ಬೆಂಬಲಿಸಿದ ಇಟಲಿ!.

ಚೀನಾದ 1 ಬಿಲಿಯನ್ ಜನತೆಯನ್ನು ಯಾವಾಗ ನೋಡುವುದು ಎಂದು ನಾನು ಪ್ರತಿ ದಿನ ಪ್ರಾರ್ಥಿಸುತ್ತೇನೆ. ಚೀನಾ ಪ್ರಜೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಅಗತ್ಯವಿದೆ. ಅದರಲ್ಲೂ ಧರ್ಮದ ಆಚರಣೆಗಳು, ಅನುಸರಣೆಗೆ ಹೆಚ್ಚಿನ ಸ್ವಾತಂತ್ರ್ಯ ಆಗತ್ಯವಿದೆ. ಆದರೆ ಸರ್ಕಾರದ ನೀತಿಗಳು, ಧೋರಣೆ ಅದಕ್ಕೆ ಅವಕಾಶ ನೀಡಿಲ್ಲ. ಆದರೆ ಕೊರೋನಾ ವೈರಸ್ ಕಾರಣ ಚೀನಾ ದೇಶದಲ್ಲಿ ಬದಲಾವಣೆಯಾಗಲಿದೆ ಎಂದು ದಲೈ ಲಾಮಾ ಹೇಳಿದ್ದಾರೆ.

ಕೊರೋನಾ ತಗ್ಗದಿದ್ದರೆ ಬಡವರಿಗೆ ಕೇಂದ್ರದಿಂದ ನೇರ ನಗದು?

ಟಿಬೆಟ್ ಧರ್ಮಗುರು ದಲೈ ಲಾಮಾಗೆ ಚೀನಾ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ  ಭಾರತದಲ್ಲಿ ನೆಲೆ ಕಂಡುಕೊಂಡಿರುವ ದಲೈ ಲಾಮಾ, ಕೊರೋನಾ ವೈರಸ್ ಮುಕ್ತಿ ಬಳಿಕ ಚೀನಾಗೆ ತೆರಳಿ ಅಲ್ಲಿನ ಜನರನ್ನು ನೋಡುವ ಅವಕಾಶ ಸಿಗಲಿದೆ ಎಂದಿದ್ದಾರೆ. ಕೊರೋನಾ ವೈರಸ್‌ನಿಂದ ಚೀನಾ ಮಾತ್ರವಲ್ಲ, ಮನುಷ್ಯನ ಮೂಲ ಗುಣ ಕೂಡ ಬದಲಾಗಲಿದೆ ಎಂದಿದ್ದಾರೆ.

ಪ್ರತಿ ದಿನ ಉಪನ್ಯಾಸ, ಧರ್ಮಬೋದನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ದಲೈ ಲಾಮಾ ಕಳೆದ ಕೆಲ ತಿಂಗಳುಗಳಿಂದ ಸ್ವಯಂ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಪ್ರತಿನಿತ್ಯ ಧ್ಯಾನ ಸೇರಿದಂತೆ ಹಲವು ಚಟುವಟಿಕೆ ಮೂಲಕ ತಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೊರೋನಾ ವೈರಸ್ ಹರಡದಂತೆ ತಡೆಯಲು ಜನರು ಸಾಮಾಜಿಕ ಅಂತರ ಪಾಲಿಸುವುದು ಸೂಕ್ತ ಎಂದು ದಲೈ ಲಾಮಾ ಹೇಳಿದ್ದಾರೆ.

Follow Us:
Download App:
  • android
  • ios