ಮುಂಬೈ(ಡಿ26): ಕಳೆದ 9 ತಿಂಗಳಿನಿಂದ ಹಲವು ಆರೋಗ್ಯ ಸಮಸ್ಯೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 176 ಕೆಜಿ ತೂಕದ ಜತಿನ್ ಸಾಂಗ್ವಿಗೆ ಈ ಬಾರಿಯ ಕ್ರಿಸ್ಮಸ್ ವಿಶೇಷವಾಗಿತ್ತು. ಕಾರಣ ಅಧಿಕ ರಕ್ತದೊತ್ತಡ, ಅಸ್ತಾಮಾ ತೀವ್ರವಾಹಿ ಬಾಧಿಸಿದ್ದ ಜತಿನ್‌ಗೆ ಕೊರೋನಾ ವೈರಸ್ ಕೂಡ ಅಂಟಿಕೊಂಡು, ತುರ್ತು ನಿಘಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಸಮಸ್ಯೆಗಳಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೊರೋನಾ ಸೋಂಕಿತ ಕೆಲಸಕ್ಕೆ ಹಾಜರ್; 300 ನೌಕರರು ಕ್ವಾರಂಟೈನ್, 7 ಸಾವು !...

ಮುಂಬೈನ 46 ವರ್ಷದ ಜತಿನ್ ಸಾಂಗ್ವಿ ಕಳೆದ 9 ತಿಂಗಳಿನಿಂದ ಅಸ್ತಾಮಾ, ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 176ಕೆಜಿ ತೂಕದಿಂದ ಇತರ ಆರೋಗ್ಯ ಸಮಸ್ಯೆಗಳು ಜತಿನ್ ಭಾದಿಸುತ್ತಿತ್ತು. ಎರಡು ತಿಂಗಳ ಹಿಂದೆ ಜತಿನ್‌ಗೆ ಕೊರೋನಾ ವೈರಸ್ ಕೂಡ ತಗುಲಿತ್ತು. ಆರೋಗ್ಯ ಕ್ಷೀಣಿಸುತ್ತಾ ಹೋದ ಕಾರಣ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಒಂದೂವರೆ ತಿಂಗಳಲ್ಲಿ ಹೊಸ ಕೊರೋನಾ ವೈರಸ್‌ಗೂ ಲಸಿಕೆ ಸಿದ್ಧ; ಬಯೋNಟೆಕ್!

ಸತತ 55 ದಿನಗಳಿಂದ ತೀವ್ರ ನಿಘಾ ಘಟಕದಲ್ಲಿ ಕೊರೋನಾ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದ ಜತಿನ್ ಇದೀಗ ಗುಣಮುಖರಾಗಿದ್ದಾರೆ. ಇಷ್ಟೇ ಅಲ್ಲ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕ್ರಿಸ್ಮಸ್ ಹಬ್ಬದ ದಿನ ಜತಿನ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದಾರೆ.