ಒಂದೂವರೆ ತಿಂಗಳಲ್ಲಿ ಹೊಸ ಕೊರೋನಾ ವೈರಸ್‌ಗೂ ಲಸಿಕೆ ಸಿದ್ಧ; ಬಯೋNಟೆಕ್!
First Published Dec 22, 2020, 6:39 PM IST
ಇಂಗ್ಲೆಂಡ್‌ನಲ್ಲಿ ಹೊಸ ರೂಪಾಂತರಗೊಡ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಹೊಸ ಕೊರೋನಾ ಹರಡುವಿಕೆ ವೇಗ ಅತ್ಯಂತ ಹೆಚ್ಚಾಗಿದೆ. ಹೀಗಾಗಿ ಇದೀಗ ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಭಾರತದಲ್ಲಿ ಹೊಸ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ. ಸದ್ಯ ಭಾರತದಲ್ಲಿ ಕೊರೋನಾ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದರ ನಡುವೆ ಹೊಸ ರೂಪಾಂತರದ ಕೊರೋನಾ ಕಾಟ ಮತ್ತಷ್ಟು ಆತಂಕ ತಂದಿದೆ. ಆದರೆ ಬಯೋNಟೆಕ್ ಕೇವಲ 6 ವಾರದಲ್ಲಿ ಹೊಸ ಕೊರೋನಾ ಹೊಡೆದೋಡಿಸುವ ಭರವಸೆ ನೀಡಿದೆ.

ಕೊರೋನಾ ವೈರಸ್ ನಿಯಂತ್ರಣಕ್ಕೆ ವಿಶ್ವವೇ ಸತತ ಪ್ರಯತ್ನ ಮಾಡುತ್ತಿದೆ. ಈಗಷ್ಟೇ ಲಸಿಕೆ ನೀಡವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ನಡುವೆ ಹೊಸ ಕೊರೋನಾ ವೈರಸ್ ಪತ್ತೆಯಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಕಳೆದ ವರ್ಷ ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ 2020 ಅಂತ್ಯವಾಗುತ್ತಿದ್ದರೂ, ಕೊರೋನಾ ಆರ್ಭಟ ನಿಂತಿಲ್ಲ. ಇಷ್ಟೇ ಅಲ್ಲ ಒಂದು ವರ್ಷದ ಸತತ ಪ್ರಯತ್ನದಿಂದ ಇದೀಗ ಲಸಿಕೆ ಅಂತಿಮ ಹಂತಕ್ಕೆ ತಲುಪಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?