Asianet Suvarna News Asianet Suvarna News

ಮಗುವಿನ ತಲೆ ಬಗೆದ ಪೆನ್: ಹೋಮ್‌ವರ್ಕ್ ಮಾಡ್ತಿದ್ದ 5 ವರ್ಷದ ಯುಕೆಜಿ ಮಗು ಸಾವು

ಮಂಚದ ಮೇಲೆ ಕುಳಿತು ಬರೆಯುತ್ತಿದ್ದ 5 ವರ್ಷದ ಯುಕೆಜಿ ವಿದ್ಯಾರ್ಥಿನಿಯೋರ್ವಳ ತಲೆಗೆ ಪೆನ್ ಚುಚ್ಚಿದ ಪರಿಣಾಮ ಆಕೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ,

5 year old UKG child dies after Pen pierce her head while she sudden fell down while doing homework in Telangana's Bhadrachalam akb
Author
First Published Jul 4, 2024, 12:58 PM IST

ಹೈದರಾಬಾದ್‌: ಮಂಚದ ಮೇಲೆ ಕುಳಿತು ಬರೆಯುತ್ತಿದ್ದ 5 ವರ್ಷದ ಯುಕೆಜಿ ವಿದ್ಯಾರ್ಥಿನಿಯೋರ್ವಳ ತಲೆಗೆ ಪೆನ್ ಚುಚ್ಚಿದ ಪರಿಣಾಮ ಆಕೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ,

ಮೃತ ಬಾಲಕಿಯನ್ನು ರಿಯಂಶಿಕಾ ಎಂದು ಗುರುತಿಸಲಾಗಿದೆ. ತೆಲಂಗಾಣದ ಭದ್ರಾದ್ರಿ ಕೊತ್ತಗುಡ್ಡಂ ಜಿಲ್ಲೆಯ ಭದ್ರಾಚಲಂ ನಗರದಲ್ಲಿ ಘಟನೆ ನಡೆದಿದೆ. ಯುಕೆಜಿ ಓದುತ್ತಿದ್ದ ರಿಯಂಶಿಕಾ ಮನೆಯಲ್ಲಿ ಮಂಚದ ಮೇಲೆ ಕುಳಿತುಕೊಂಡು ಹೋಮ್‌ವರ್ಕ್ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.  ಸೋಮವಾರ ಸಂಜೆ ಶಾಲೆಯಿಂದ ಬಂದು ಮನೆಯಲ್ಲಿ ಮಂಚದ ಮೇಲೆ ಕುಳಿತು ಹೋಮ್ ವರ್ಕ್ ಮಾಡುತ್ತಿದ್ದ ರಿಯಂಶಿಕಾ ಮಂಚದ ಮೇಲಿಂದ ಹಠಾತ್ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಆಕೆಯ ಕೈಯಲ್ಲಿದ್ದ ಪೆನ್ ಆಕೆಯ ತಲೆಗೆ ಚುಚ್ಚಿದೆ ಎಂದು ವರದಿ ಆಗಿದೆ. 

ಕೂಡಲೇ ಬಾಲಕಿಯ ಕುಟುಂಬದವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಮಂಗಳವಾರ ಸರ್ಜರಿ ಮಾಡಿದರಾದರೂ ಬಾಲಕಿ ಬದುಕುಳಿದಿಲ್ಲ, 
 

Latest Videos
Follow Us:
Download App:
  • android
  • ios