ನಂದಿಗ್ರಾಮದಲ್ಲಿ ಗೆದ್ದ ಸುವೆಂದು / ಮಾಜಿ ಶಿಷ್ಯನ ವಿರುದ್ಧ ಮಮತಾಗೆ ಸೋಲು / ಕೊನೆಯವರೆಗೂ ಕುತೂಹಲ ಕಾಯ್ದುಕೊಂಡಿದ್ದ  ಹೋರಾಟ/ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಗದ್ದುಗೆ

ಕೋಲ್ಕತ್ತಾ(ಮೇ 2) ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದ್ದ ನಂದಿಗ್ರಾಮದ ಫಲಿತಾಂಶ ಹೊರಕ್ಕೆ ಬಂದಿದೆ. ಪೋಟೋ ಫಿನಿಶ್, ನೆಕ್ ಟು ನೆಕ್, ರೋಚಕ ಏನು ಬೇಕಾದರೂ ಕರೆದುಕೊಳ್ಳಬಹುದು. 

ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ 1600 ಮತಗಳಿಂದ ಸೋಲು ಕಂಡಿದ್ದಾರೆ. ಟಿಎಂಸಿಯಿಂದ ಹೊರ ಬಂದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ ಮಧ್ಯೆ ಜಿದ್ಧಾಜಿದ್ದಿನ ಸ್ಪರ್ಧೆ ನಡೆದಿತ್ತು. 

YouTube video player

ಮತ ಎಣಿಕೆಯ ಆರಂಭದಿಂದ ಕೊನೆಯವರೆಗೂ ಈ ಕ್ಷೇತ್ರ ಬಾರಿ ಕುತೂಹಲ ಮೂಡಿಸಿತ್ತು. ಒಮ್ಮೆ ಮಮತಾ ಮುನ್ನಡೆ ಪಡೆದರೆ ಮತ್ತೊಂದು ಸುತ್ತಿನಲ್ಲಿ ಸುವೇಂದು ಅಧಿಕಾರಿ ಮುನ್ನಡೆ ಪಡೆಯುತ್ತಿದ್ದರು. ಅಧಿಕಾರಿ ನನ್ನ ಕ್ಷೇತ್ರದಲ್ಲಿ ಬಂದು ನಿಲ್ಲಿ ಎಂದು ಮಮತಾಗೆ ಸವಾಲು ಹಾಕಿದ್ದು ಅದನ್ನು ಸ್ವೀಕಾರ ಮಾಡಿದ್ದರು.

ಬಂಗಾಳದಲ್ಲಿ ಮಮತಾ ಮ್ಯಾಜಿಕ್, ಕೇರಳದಲ್ಲಿ ಪಿಣರಾಯಿ

ಪಂಚರಾಜ್ಯ ಫಲಿತಾಂಶ ನಿಧಾನಕ್ಕೆ ಹೊರಹೊಮ್ಮಿದ್ದು ಪಶ್ಚಿಮ ಬಂಗಾಳದಲ್ಲಿ ಮಮತಾರ ತೃಣಮೂಲ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ. ನಿಚ್ಚಳ ಬಹುಮತ ಪಡೆದುಕೊಂಡು ಮತ್ತೊಮ್ಮೆ ಮಮತಾ ಸಿಎಂ ಆಗುತ್ತಿದ್ದಾರೆ. 

ನಂದಿಗ್ರಾಮ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡಿದ್ದರು. ಆರಂಭದಿಂದಲೂ ಸುವೇಂದು ಅಧಿಕಾರಿಯೇ ಮುನ್ನಡೆ ಕಾಯ್ದುಕೊಂಡಿದ್ದರು. ಮಮತಾಗೆ ಈ ಸೋಲು ರಾಷ್ಟ್ರೀಯ ಮಟ್ಟದಲ್ಲಿ ಒಂದು ಹಿನ್ನಡೆಯನ್ನು ಕೊಟ್ಟಿದೆ. ಆದರೆ ಅವರ ಪಕ್ಷ ಗೆದ್ದು ಬೀಗಿದೆ. ಕರ್ನಾಟದ ಸಿಎಂ ಆಗಿದ್ದ ಸಿದ್ದರಾಮಯ್ಯ ಸಹ ತವರಿನಲ್ಲಿಯೇ ಸೋಲು ಕಂಡಿದ್ದರು. 

"