Asianet Suvarna News Asianet Suvarna News

ದೇಶದ ಇನ್ನೂ ಐವರಲ್ಲಿ ಬ್ರಿಟನ್ ಹೈಸ್ಪೀಡ್‌ ವೈರಸ್ ಪತ್ತೆ..!

ಜಗತ್ತಿನಾದ್ಯಂತ ಆತಂಕ ಸೃಷ್ಟಿಸುತ್ತಿರುವ ರೂಪಾಂತರಿ ಕೊರೋನಾ ವೈರಸ್‌ ಗುರುವಾರ ಮತ್ತೆ ಐವರು ಭಾರತೀಯರಲ್ಲಿ ಕಾಣಿಸಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

5 more new high speed Britain virus found in India on December 31 kvn
Author
New Delhi, First Published Jan 1, 2021, 8:29 AM IST

ನವದೆಹಲಿ(ಜ.01): ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿರುವ ಪ್ರಯಾಣಿಕರ ಪೈಕಿ ಮತ್ತೆ ಐವರಿಗೆ ಗುರುವಾರ ರೂಪಾಂತರಿ ಕೊರೋನಾ ವೈರಸ್‌ ದೃಢಪಟ್ಟಿದೆ. ಈ ಮೂಲಕ ಮಂಗಳವಾರ ಮತ್ತು ಬುಧವಾರ ಹೊಸ ತಳಿಯ ಸೋಂಕು ಪತ್ತೆಯಾಗಿದ್ದ 20 ಮಂದಿಯೂ ಸೇರಿದಂತೆ ದೇಶದಲ್ಲಿ ಬ್ರಿಟನ್‌ ರೂಪಾಂತರಿ ಕೊರೋನಾ ಸೋಂಕು ತಗುಲಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಈ ಎಲ್ಲಾ 25 ಮಂದಿಯನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಇವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪುಣೆಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ (ಎನ್‌ಐವಿ)ಯಲ್ಲಿ 4 ಮತ್ತು ದೆಹಲಿಯ ಇನ್‌ಸ್ಟಿಟ್ಯೂಟ್‌ ಆಫ್‌ ಜೀನಾಮಿಕ್ಸ್‌ ಅಂಡ್‌ ಇಂಟಿಗ್ರೇಟಿವ್‌ ಬಯಾಲಜಿ (ಐಜಿಐಬಿ)ಯಲ್ಲಿ ಒಂದು ಬ್ರಿಟನ್‌ನ ರೂಪಾಂತರಿ ವೈರಸ್‌ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಡಿ.23ರವರೆಗೆ ಅದರ ಹಿಂದಿನ 14 ದಿನಗಳ ಕಾಲ ಬ್ರಿಟನ್‌ನಿಂದ ಬಂದ ಸುಮಾರು 30 ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ಮೇಲೆ ರಾಜ್ಯ ಸರ್ಕಾರಗಳು ತೀವ್ರ ನಿಗಾ ಇರಿಸಿವೆ.

ನಮ್ಮಲ್ಲಿ ಔಷಧಿಯೂ ಇದೆ, ಎಚ್ಚರಿಕೆಯೂ ಇದೆ: ಪ್ರಧಾನಿ ಮೋದಿ

ಬ್ರಿಟನ್‌ನ ಹೈಸ್ಪೀಡ್‌ ಕೊರೋನಾ ವೈರಸ್‌ ಈಗಾಗಲೇ ಭಾರತ, ಡೆನ್ಮಾರ್ಕ್, ನೆದರ್ಲೆಂಡ್‌, ಆಸ್ಪ್ರೇಲಿಯಾ, ಸ್ವೀಡನ್‌, ಸ್ಪೇನ್‌, ಜರ್ಮನಿ, ಕೆನಡಾ, ಜಪಾನ್‌, ಸಿಂಗಾಪುರ ಮತ್ತಿತರ ದೇಶಗಳಲ್ಲಿ ಪತ್ತೆಯಾಗಿದೆ.
 

Follow Us:
Download App:
  • android
  • ios