ಚೀನಾ ಸರಣಿ ತಪ್ಪುಗಳಿಂದ ಕೋವಿಡ್ 4ನೇ ಅಲೆ ಭೀತಿ, ಭಾರತದಲ್ಲಿ 4 ಕೇಸ್ ಪತ್ತೆ!

ಚೀನಾ ಮಾಡಿದ ಎಡವಿಟ್ಟಿನಿಂದ ಇದೀಗ ಭಾರತ ಸೇರಿ ವಿಶ್ವಕ್ಕೆ 4ನೇ ಅಲೆ ಭೀತಿ ಎದುರಾಗಿದೆ. ಚೀನಾದಲ್ಲಿ ಸದ್ಯ ಉಲ್ಬಣಿಸಿರುವ ಕೋವಿಡ್‌ಗೆ ಒಮಿಕ್ರಾನ್ BF7 ತಳಿ ಕಾರಣವಾಗಿದೆ. ಇದೇ ತಳಿ ಭಾರತದಲ್ಲಿ 4 ಕೇಸ್ ಪತ್ತೆಯಾಗಿದೆ.
 

4th covid wave fear due to pandemic outbreak in China 4th Omicron subvariant BF7 found in India ckm

ನವದೆಹಲಿ(ಡಿ.21) ಚೀನಾದಿಂದ ಆರಂಭಗೊಂಡ ಕೋವಿಡ್ ಇಡೀ ವಿಶ್ವಕ್ಕೆ ಹರಡಿ ಸೀಲ್‌ಡೌನ್, ಲಾಕ್‌ಡೌನ್ ಸೇರಿದಂತೆ ಕಠಿಣ ನಿರ್ಬಂಧಗಳು ಜಾರಿಯಾಗಿತ್ತು. ಕೋವಿಡ್ ಇನ್ನೇನು ಮರೆಯಾಯ್ತು ಅನ್ನುವಷ್ಟರಲ್ಲೇ ಚೀನಾ ಮಾಡಿದ ಸರಣಿ ತಪ್ಪುಗಳಿಂದ ಇದೀಗ ಕೋವಿಡ್ ಮತ್ತೆ ಬಂದಿದೆ. ಚೀನಾದಲ್ಲಿ ಈಗಾಗಲೇ 4ನೇ ಅಲೆ ಅಬ್ಬರ ಆರಂಭಗೊಂಡಿದೆ. ಭಾರತ ಸೇರಿದಂತೆ ವಿಶ್ವಕ್ಕೆ ಇದೀಗ 4ನೇ ಅಲೆ ಭೀತಿ ಆರಂಭಗೊಂಡಿದೆ. ಇಷ್ಟೇ ಅಲ್ಲ ಭಾರತದಲ್ಲಿ ಚೀನಾ ಕೋವಿಡ್ ಸ್ಫೋಟಕ್ಕೆ ಕಾರಣವಾಗಿರುವ 4 ತಳಿಗಳು ಭಾರತದಲ್ಲಿ ಪತ್ತೆಯಾಗಿದೆ. ಇದು ಆತಂಕ ಹೆಚ್ಚಿಸಿದೆ. 

ಚೀನಾದಲ್ಲಿ ಸದ್ಯ ಎದ್ದಿರುವ ಕೊರೋನಾ ಅಲೆಗೆ ಒಮಿಕ್ರಾನ BF7 ತಳಿ ಪ್ರಮುಖ ಕಾರಣವಾಗಿದೆ. ತ್ವರಿತಗತಿಯಲ್ಲಿ ಈ ತಳಿ ಹರಡುತ್ತಿದೆ. ಜೊತೆಗೆ ಮಾರಣಾಂತಿಕವಾಗುತ್ತಿದೆ. ಇದೇ ತಳಿ ಗುಜರಾತ್‌ನಲ್ಲಿ 2 ಹಾಗೂ ಒಡಿಶಾದಲ್ಲಿ ಪ್ರಕರಣಗಳು ದಾಖಲಾಗಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ಮುಂಜಾಗ್ರತ ಕ್ರಮಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮ ಪಾಲನೆಗೆ ಮನವಿ ಮಾಡಲಾಗಿದೆ. ಚೀನಾದ ಆತಂಕದಿಂದ ಇದೀಗ ಭಾರತದಲ್ಲಿ ಒಂದೊಂದೆ ನಿರ್ಬಂಧಗಳು ಜಾರಿಯಾಗುತ್ತಿದೆ. 

ಚೀನಾದ ಕೋವಿಡ್ ಸ್ಫೋಟಕ್ಕೆ ಕಾರಣವಾದ ಒಮಿಕ್ರಾನ್ ತಳಿ ಭಾರತದಲ್ಲೂ ಪತ್ತೆ!

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿವು ವಿದೇಶಿಗರು ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಗಾಗಬೇಕು. ಇನ್ನು ದೇಶದಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಇದರ ಜೊತಗೆ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗೆ ಒಳಪಡಿಸಲು ಕೇಂದ್ರ ಸರ್ಕಾರ ಸೂಚಿಸಿದೆ.

ಒಮ್ರಿಕೋನ್‌ ರೂಪಾಂತರಿಯ ಬಿಎ.5 ತಳಿಯ ಉಪತಳಿಯಾದ ಬಿಎಫ್‌.7 ತೀವ್ರವಾಗಿ ಸೋಂಕನ್ನು ಹರಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಈಗಾಗಲೇ ಲಸಿಕೆ ಪಡೆದುಕೊಂಡವರಲ್ಲೂ ಸೋಂಕು ಹರಡುವ ಹಾಗೂ ಮರು ಸೋಂಕಿಗೂ ಇದು ಕಾರಣವಾಗುತ್ತದೆ. ಬಿಎಫ್‌.7 ಅಮೆರಿಕ, ಬ್ರಿಟನ್‌, ಯುರೋಪಿಯನ್‌ ರಾಷ್ಟ್ರಗಳಾದ ಜರ್ಮನಿ, ಫ್ರಾನ್ಸ್‌, ಬೆಲ್ಜಿಯಂ, ಡೆನ್ಮಾರ್ಕ್ಗಳಲ್ಲೂ ಪತ್ತೆಯಾಗಿತ್ತು.

ಚೀನಾದ ಒಂದೊಂದು ವಿಡಿಯೋಗಳು ಭಯಾನಕ ಸ್ಛಿತಿಯನ್ನು ವಿವರಿಸುತ್ತಿದೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ. ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ತಜ್ಞರ ಪ್ರಕಾರ ಇನ್ನೂ 3 ತಿಂಗಳಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಚೀನಿಯರು ಕೋವಿಡ್ ಸೋಂಕಿನಿಂದ ಬಳಲಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಭಾರತ ಜೋಡೋ ಯಾತ್ರೆ ಮುಂದೂಡಿ, ಇಲ್ಲ ಈ ನಿಯಮ ಪಾಲಿಸಿ; ಕೇಂದ್ರದ ಪತ್ರಕ್ಕೆ ರಾಹುಲ್ ಕಂಗಾಲು!

ಚೀನಾದಲ್ಲಿ ತೀವ್ರವಾಗಿ ಹರಡುವ ಒಮಿಕ್ರೋನ್‌ನ ಬಿಎ.5.2 ಹಾಗೂ ಬಿ.ಎಫ್‌.7 ತಳಿಯ ಸ್ಫೋಟವಾಗಿದ್ದು, ಭಾರೀ ಸಂಖ್ಯೆಯಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳು ಹಾಗೂ ಸಾವುಗಳು ವರದಿಯಾಗುತ್ತಿವೆ. ಆದರೆ ಸೋಂಕಿತರ ಸಾವಿನ ಪ್ರಮಾಣ ಕಡಿಮೆಯಿದ್ದಂತೆ ತೋರಿಸಲು ಚೀನಾ, ಕೋವಿಡ್‌ ಸೋಂಕಿತರು ಹೃದಯಾಘಾತ ಅಥವಾ ಇನ್ಯಾವುದೇ ಕಾರಣದಿಂದಾಗಿ ಮೃತಪಟ್ಟರೆ ಅದನ್ನು ಕೋವಿಡ್‌ ಸಾವು ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ಕೇವಲ ಉಸಿರಾಟ ವೈಫಲ್ಯದಿಂದ ಮೃತಪಟ್ಟವರನ್ನು ಮಾತ್ರ ಕೋವಿಡ್‌ ಸಾವು ಎಂದು ಪರಿಗಣಿಸಲಾಗುತ್ತದೆ ಎಂದು ಚೀನಾದ ಆರೋಗ್ಯಇಲಾಖೆ ಸ್ಪಷ್ಟಪಡಿಸಿದೆ.

Latest Videos
Follow Us:
Download App:
  • android
  • ios