Asianet Suvarna News Asianet Suvarna News

ಚೀನಾದ ಕೋವಿಡ್ ಸ್ಫೋಟಕ್ಕೆ ಕಾರಣವಾದ ಒಮಿಕ್ರಾನ್ ತಳಿ ಭಾರತದಲ್ಲೂ ಪತ್ತೆ!

ಚೀನಾದಲ್ಲಿ ಕೋವಿಡ್ ಸ್ಫೋಟಗೊಂಡು ಅತೀ ದೊಡ್ಡ ಅನಾಹುತ ಸೃಷ್ಟಿಸಿದೆ. ಸಾವಿನ ಸಂಖ್ಯೆ ಏರಿಕೆ, ಆಸ್ಪತ್ರೆಗಳು ತುಂಬಿ ತಳುಕುತ್ತಿದೆ. ವೈರಸ್ ನಿಯಂತ್ರಣಕ್ಕೆ ಸಿಗದೆ ಚೀನಿಯರನ್ನು ಹೈರಾಣಾಗಿಸಿದೆ. ಚೀನಾದಲ್ಲಿ ಕೋವಿಡ್ ಸ್ಫೋಟಕ್ಕೆ ಕಾರಣವಾಗಿರುವ ವೈರಸ್ ಭಾರತದಲ್ಲೂ ಪತ್ತೆಯಾಗಿದೆ. 

3 Omicron subvariant BF 7 found in India same virus cause china in danger ckm
Author
First Published Dec 21, 2022, 6:08 PM IST

ನವದೆಹಲಿ(ಡಿ.210:  ಚೀನಾದಲ್ಲಿ ಕೋವಿಡ್ ಮತ್ತೆ ಆತಂಕ ಸೃಷ್ಟಿಸಿದೆ. ಬಲಿಯಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆಸ್ಪತ್ರೆ ಭರ್ತಿಯಾಗಿದೆ. ತ್ವರಿತಗತಿಯಲ್ಲಿ ವೈರಸ್ ಹರಡುತ್ತಿದೆ. ಇದೀಗ ಭಾರತದಲ್ಲೂ ಮುಂಜಾಗ್ರತ ಕ್ರಮವಾಗಿ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಮಾರ್ಗಸೂಚಿ ಪಾಲನೆಗೆ ಸೂಚನೆ ನೀಡಲಾಗಿದೆ. ಚೀನಾದಿಂದ ಆಗಮಿಸುವವರ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಭಾರತದಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಆತಂಕ ಎದುರಾಗಿದೆ. ಚೀನಾದಲ್ಲಿ ಕೋವಿಡ್ ಸ್ಫೋಟಕ್ಕೆ ಕಾರಣವಾಗಿರುವ ಒಮಿಕ್ರಾನ್ BF.7 ತಳಿ ಈಗಾಗಲೇ ಭಾರತದಲ್ಲಿ ಪತ್ತೆಯಾಗಿದೆ. ಒಟ್ಟು 3 ಪ್ರಕರಣಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ 3 ತಿಂಗಳಲ್ಲಿ ಚೀನಾದ ಶೇಕಡಾ 60 ರಷ್ಟು ಮಂದಿ ಕೋವಿಡ್ ಸೋಂಕಿನಿಂದ ಬಳಲಿದ್ದಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಚೀನಾ ಜೊತೆಗೆ ಬ್ರೆಜಿಲ್, ಅಮೆರಿಕ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಗಣನೀಯ ಏರಿಕೆಯಾಗುತ್ತಿದೆ. ಹೀಗಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ದರಿಸುವಂತೆ ಭಾರತ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಈ ಬೆಳವಣಿಗೆಗಳ ನಡುವೆ ಇದೀಗ ಒಮಿಕ್ರಾನ್ BF.7 ತಳಿ  ಭಾರತದಲ್ಲಿ ಪತ್ತೆಯಾಗಿರುವ ವರದಿ ಬಂದಿದೆ.

ಭಾರತ ಜೋಡೋ ಯಾತ್ರೆ ಮುಂದೂಡಿ, ಇಲ್ಲ ಈ ನಿಯಮ ಪಾಲಿಸಿ; ಕೇಂದ್ರದ ಪತ್ರಕ್ಕೆ ರಾಹುಲ್ ಕಂಗಾಲು!

ಒಮಿಕ್ರಾನ್ BF.7 ತಳಿ ಚೀನಾದ ಕೋವಿಡ್ ಸ್ಫೋಟಕ್ಕೆ ಪ್ರಮುಖ ಕಾರಣವಾಗಿದೆ. ಇದೀಗ ಈ ತಳಿಯ 3 ಪ್ರಕರಣಗಳು ಈಗಾಗಲೇ ಭಾರತದಲ್ಲಿ ಪತ್ತೆಯಾಗಿದೆ. ಗುಜರಾತ್‌ನ ಬಯೋಟೆಕ್ನಾಲಜಿ ರೀಸರ್ಚ್ ಸೆಂಟರ್‌ಗೆ ಕಳುಹಿಸಿರುವ ಮಾದರಿಯಲ್ಲಿ 2 ಮಾದರಿಯಲ್ಲಿ ಒಮಿಕ್ರಾನ್ BF.7 ತಳಿ ವೈರಸ್ ಪತ್ತೆಯಾಗಿದೆ. ಇನ್ನೊಂದು ಒಮಿಕ್ರಾನ್ BF.7 ತಳಿ ಒಡಿಶಾದಲ್ಲಿ ಪತ್ತೆಯಾಗಿದೆ. ಆದರೆ ಆತಂಕ ಪಡುವ ಆಗತ್ಯವಿಲ್ಲ. ಒಮಿಕ್ರಾನ್ BF.7 ತಳಿ ಭಾರತದಲ್ಲಿ ಮೊದಲು ಪತ್ತೆಯಾಗಿರುವುದು ಅಕ್ಟೋಬರ್ ತಿಂಗಳಲ್ಲಿ. ಇದೀಗ ಒಟ್ಟು 3 ಪ್ರಕರಣಗಳು ವರದಿಯಾಗಿದೆ. ಆದರೆ ಚೀನಾದಲ್ಲಿ ಈ ತಳಿ ಸೃಷ್ಟಿಸಿದ ಅವಾಂತರ ಭಾರತದಲ್ಲಿ ಸೃಷ್ಟಿಸಿಲ್ಲ. 

ಭಾರತದಲ್ಲಿ ನೀಡಿರುವ ಲಸಿಕೆ ಹಾಗೂ ಭಾರತೀಯರ ರೋಗ ನಿರೋಧಕ ಶಕ್ತಿಗಳಿಂದ ಒಮಿಕ್ರಾನ್ BF.7 ತಳಿ ಭಾರತದಲ್ಲಿ ಆತಂಕ ಸೃಷ್ಟಿಸಿಲ್ಲ. ಇಷ್ಟು ದಿನ ಚೀನಾ ಕೋವಿಡ್ ಸಂಖ್ಯೆ, ಸಾವಿನ ಸಂಖ್ಯೆ, ಲಸಿಕೆ ಸೇರಿದಂತೆ ಎಲ್ಲಾ ವಿಚಾರಗಳನ್ನು ಗೌಪ್ಯವಾಗಿಟ್ಟಿತ್ತು. ಒಂದೊಂದು ಪ್ರಕರಣ ಪತ್ತೆಯಾದರೂ ಲಾಕ್‌ಡೌನ್ ವಿಧಿಸುತ್ತಿತ್ತು. ಆದರೆ ಹೊರಜಗತ್ತಿಗೆ ಬೆರಳೆಣಿಕೆ ಪ್ರಕರಣ ತೋರಿಸಿದ ಚೀನಾದ ಅಸಲಿ ಆಟ ಇದೀಗ ಬಹಿರಂಗವಾಗಿದೆ. 

 

Covid-19: ಚೀನಾದಲ್ಲಿ ಕೋವಿಡ್‌ ತೀವ್ರ ಉಲ್ಬಣ: ಬೆಂಗಳೂರಲ್ಲಿ ಮಾಸ್ಕ್‌ ಕಡ್ಡಾಯಕ್ಕೆ ಚಿಂತನೆ?

ಸದ್ಯ ಭಾರತ ಸೇಫ್ ಆಗಿದೆ. ಹಾಗಂತ ಮುಂಜಾಗ್ರತೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಕೊರೋನಾದ ಕೆಟ್ಟ ಸಮಯವನ್ನು ಭಾರತ ಎದುರಿಸಿದೆ. ಹೀಗಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಅತೀ ಅಗತ್ಯವಾಗಿದೆ.ಅಮೆರಿಕ, ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ಬ್ರೆಜಿಲ್‌ಗಳಲ್ಲಿ ಇದ್ದಕ್ಕಿದ್ದಂತೆ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆ ಪಾಸಿಟಿವ್‌ ಪ್ರಕರಣಗಳ ಜಿನೋಮ್‌ ಸೀಕ್ವೆನ್ಸಿಂಗ್‌ ಹೆಚ್ಚಿಸುವಂತೆ ಕೇಂದ್ರ ಸರ್ಕಾರ  ಸೂಚನೆ ನೀಡಿದೆ. ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಮಂಗಳವಾರ ಪತ್ರ ಬರೆದಿದ್ದಾರೆ.

Follow Us:
Download App:
  • android
  • ios