ಪರೀಕ್ಷಾ ಸಾಮರ್ಥ್ಯವನ್ನು 45 ಲಕ್ಷಕ್ಕೆ ಹೆಚ್ಚಿಸುವ ಮಹತ್ವದ ನಿರ್ಣಯ ಹೆಚ್ಚು ಪರೀಕ್ಷೆ ಮಾಡಿದಷ್ಟೂಸೋಂಕು ನಿಯಂತ್ರಣ ಸಾಧ್ಯ  ಟೆಸ್ಟಿಂಗ್‌ ಕಿಟ್‌ಗಳಿಗೆ ರಾಜ್ಯಗಳಿಂದ ಭಾರಿ ಬೇಡಿಕೆ

ನವದೆಹಲಿ (ಮೇ.21): ಗುರುವಾರ ದಾಖಲೆಯ 20.55 ಲಕ್ಷ ಕೊರೋನಾ ಟೆಸ್ಟ್‌ ನಡೆಸಿದ್ದ ಕೇಂದ್ರ ಸರ್ಕಾರ, ಈಗ ನಿತ್ಯದ ಪರೀಕ್ಷಾ ಸಾಮರ್ಥ್ಯವನ್ನು 45 ಲಕ್ಷಕ್ಕೆ ಹೆಚ್ಚಿಸುವ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಹೆಚ್ಚು ಪರೀಕ್ಷೆ ಮಾಡಿದಷ್ಟೂಸೋಂಕು ನಿಯಂತ್ರಣ ಸಾಧ್ಯ ಧ್ಯೇಯದೊಂದಿಗೆ ಈ ಕ್ರಮಕ್ಕೆ ಮುಂದಾಗಿದೆ.

ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಂಆರ್‌ ನಿರ್ದೇಶಕ ಬಲರಾಂ ಭಾರ್ಗವ, ‘ಈಗ ನಿತ್ಯ 16ರಿಂದ 20 ಲಕ್ಷ ಟೆಸ್ಟ್‌ ನಡೆಸುತ್ತಿದ್ದೇವೆ. ಈ ಮಾಸಾಂತ್ಯಕ್ಕೆ ನಿತ್ಯ 20 ಲಕ್ಷ ಟೆಸ್ಟ್‌ ನಡೆಸಲಿದ್ದೇವೆ. ಮುಂದಿನ ತಿಂಗಳು ಈ ಸಾಮರ್ಥ್ಯವನ್ನು 45 ಲಕ್ಷಕ್ಕೆ ಹೆಚ್ಚಿಸಲಿದ್ದೇವೆ’ ಎಂದರು.

ಕೊರೋನಾ ಅಟ್ಟಹಾಸ : ಒಂದೇ ತಿಂಗಳಲ್ಲಿ ವರ್ಷದಷ್ಟು ಕೇಸ್‌! ..

ಈ 45 ಲಕ್ಷ ಟೆಸ್ಟ್‌ಗಳಲ್ಲಿ 18 ಲಕ್ಷ ಆರ್‌ಟಿ-ಪಿಸಿಆರ್‌ ಟೆಸ್ಟ್‌ಗಳಾಗಲಿದ್ದು, ಇನ್ನುಳಿದ 27 ಲಕ್ಷ ಟೆಸ್ಟ್‌ಗಳು ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ಗಳಾಗಲಿವೆ ಎಂದರು.

ಟೆಸ್ಟಿಂಗ್‌ ಕಿಟ್‌ಗಳಿಗೆ ರಾಜ್ಯಗಳಿಂದ ಭಾರಿ ಬೇಡಿಕೆ ಇದೆ. 105 ಆ್ಯಂಟಿಜೆನ್‌ ಟೆಸ್ಟ್‌ ಕಿಟ್‌ ಉತ್ಪಾದಕ ಕಂಪನಿಗಳು ಅರ್ಜಿ ಸಲ್ಲಿಸಿದ್ದು, 41ಕ್ಕೆ ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ 31 ಸ್ವದೇಶೀ ನಿರ್ಮಿತ ಕಿಟ್‌ಗಳಾಗಲಿವೆ ಎಂದು ಹೇಳಿದರು. ಈಗಾಗಲೇ ಕೇವಲ 15 ನಿಮಿಷದಲ್ಲಿ ಫಲಿತಾಂಶ ನೀಡುವ ಆ್ಯಂಟಿಜೆನ್‌ ಕಿಟ್‌ಗೆ ಅನುಮತಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona