ಜೈಲಿನಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಉತ್ತರಾಖಂಡದ ಹಲ್ದ್ವಾನಿ ಜೈಲಿನ ಆಡಳಿತದಲ್ಲಿ ಸಂಚಲನ ಮೂಡಿಸಿದೆ. 

ಡೆಹ್ರಾಡೂನ್ (ಏ.10): ಎಚ್‌ಐವಿ ಪೀಡಿತ ಒಂದೇ ಒಂದು ಮಹಿಳಾ ಖೈದಿಯಿಂದ ಉತ್ತರಾಖಂಡದ ಹಲ್ದ್ವಾನಿ ಜೈಲಿನಲ್ಲಿ ಬರೋಬ್ಬರಿ 54 ಜೈಲು ಖೈದಿಗಳಿಗೆ ಏಡ್ಸ್‌ ಸೋಂಕು ಅಂಟಿರುವ ಬಗ್ಗೆ ವರದಿಯಾಗಿದೆ. ಜೈಲಿನಲ್ಲಿ ನಿರಂತರವಾಗಿ ಎಚ್‌ಐವಿ ಪೀಡಿತರ ಸಂಖ್ಯೆ ಏರಿಕೆಯಾಗಿತ್ತಿರುವುದು ಹಲ್ದ್ವಾನಿ ಜೈಲಿನಲ್ಲಿ ಆತಂಕ ಮೂಡಿಸಿದೆ. ಈವರೆಗೂ ಮಾಡಿಸಿರುವ ಪರೀಕ್ಷೆಯ ಪ್ರಕಾರ ಹಲ್ದ್ವಾನಿಯ ಜೈಲಿನಲ್ಲಿ 54 ಖೈದಿಗಳಿಗೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (ಎಚ್‌ಐವಿ) ಇರುವುದು ಪತ್ತೆಯಾಗಿದ್ದು, ಒಬ್ಬ ಮಹಿಳಾ ಖೈದಿ ಕೂಡ ಎಚ್‌ಐವಿ-ಪಾಸಿಟಿವ್ ಎಂದು ಪತ್ತೆಯಾಗಿದ್ದಾರೆ ಎಂದು ಸುಶೀಲಾ ತಿವಾರಿ ಆಸ್ಪತ್ರೆಯ ಎಆರ್‌ಟಿ ಸೆಂಟರ್ ಪ್ರಭಾರಿ ಡಾ.ಪರಮ್‌ಜಿತ್ ಸಿಂಗ್ ತಿಳಿಸಿದ್ದಾರೆ. ಕೈದಿಗಳ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಡಾ.ಸಿಂಗ್, "ಎಚ್‌ಐವಿ ರೋಗಿಗಳಿಗೆ ಎಆರ್‌ಟಿ (ಆಂಟಿರೆಟ್ರೋವೈರಲ್ ಥೆರಪಿ) ಕೇಂದ್ರವನ್ನು ಸ್ಥಾಪಿಸಲಾಗಿದೆ, ಅಲ್ಲಿ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ, ನನ್ನ ತಂಡವು ಜೈಲಿನಲ್ಲಿರುವ ಕೈದಿಗಳನ್ನು ನಿರಂತರವಾಗಿ ಪರೀಕ್ಷಿಸುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ. 'ಯಾವ ಖೈದಿ ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೋ ಅವರಿಗೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್‌ಎಸಿಒ) ಮಾರ್ಗಸೂಚಿಗಳ ಆಧಾರದ ಮೇಲೆ ಉಚಿತ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.

ಪ್ರಸ್ತುತ ಈ ಜೈಲಿನಲ್ಲಿ 1629 ಪುರುಷ ಮತ್ತು 70 ಮಹಿಳಾ ಕೈದಿಗಳಿದ್ದಾರೆ ಎಂದು ಸಿಂಗ್‌ ತಿಳಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಕೈದಿಗಳು ಎಚ್‌ಐವಿ ಪಾಸಿಟಿವ್‌ ಎಂದು ಪತ್ತೆಯಾದ ಬಳಿಕ ಜೈಲು ಆಡಳಿತವು ಕೈದಿಗಳ ದಿನನಿತ್ಯದ ತಪಾಸಣೆ ನಡೆಸುತ್ತಿದೆ, ಇದರಿಂದ ಎಚ್‌ಐವಿ ಸೋಂಕಿತ ಕೈದಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ದೈಹಿಕ ಸಂಬಂಧಗಳಿಂದ ಮಾತ್ರವಲ್ಲ, STI ಹೀಗೂ ಸಂಭವಿಸುತ್ತೆ!

ಜೈಲು ಅಧೀಕ್ಷಕ ಪ್ರಮೋದ್ ಪಾಂಡೆ ನೀಡಿರುವ ಹೇಳಿಕೆಯಲ್ಲಿ, 'ಹಲ್ದ್ವಾನಿ ಉಪ ಕಾರಾಗೃಹದಲ್ಲಿ 54 ಕೈದಿಗಳು ಎಚ್‌ಐವಿ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 2019ರಿಂದ 2023ರಲ್ಲಿ ಈ ಜೈಲಿನಲ್ಲಿ ಇರುವ ಕೈದಿಗಳನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್, (ಎನ್‌ಡಿಪಿಸಿ) ಅಡಿಯಲ್ಲಿ ಬಂಧಿಸಲಾಗಿದೆ. ಈ ಜೈಲಿಗೆ ಬರುವ ಕೈದಿಗಳಿಗೆ ಮೊಟ್ಟಮೊದಲು ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ. ಇದರಲ್ಲಿ ಎಚ್‌ಐವಿ ಟೆಸ್ಟ್‌ ಕೂಡ ಸೇರಿದೆ' ಎಂದಿದ್ದಾರೆ.

Fight with HIV: ಎಚ್ ಐವಿ ಸೋಂಕಿತರ ಹೆಲ್ದಿ ಆಹಾರ ಹೀಗಿರ್ಬೇಕು

ಎನ್‌ಡಿಪಿಸಿ ಕಾಯ್ದೆಯಡಿ ಬಂಧಿತರಾಗಿರುವ ಬಹುತೇಕ ಕೈದಿಗಳಿಗೆ ಈಗಾಗಲೇ ಸಿರೀಂಜ್‌ಗಳನ್ನು ಬಳಸಿಕೊಂಡು ಡಗ್ಸ್‌ ತೆಗೆದುಕೊಳ್ಳುವ ಚಟ ಹೊಂದಿದ್ದರು ಎಂದು ಪ್ರಮೋದ್‌ ಪಾಂಡೆ ತಿಳಿಸಿದ್ದು, ಜೈಲಿಗೆ ಬರುವ ಮುನ್ನವೇ ಅವರು ಎಚ್‌ಐವಿ ಸೋಂಕಿತರಾಗಿರಬಹುದು ಎಂದಿದ್ದಾರೆ.

ಹಲ್ದ್ವಾನಿ ಜೈಲಿನಲ್ಲಿರುವ 54 ಖೈದಿಗಳು ಏಕಕಾಲದಲ್ಲಿ ಎಚ್‌ಐವಿ ಸೋಂಕಿಗೆ ಒಳಗಾಗಿಲ್ಲ, ಬದಲಿಗೆ ಈ ಖೈದಿಗಳ ಸಂಖ್ಯೆಯು ವಿವಿಧ ಸಮಯಗಳಲ್ಲಿ ಎಚ್‌ಐವಿ ಪರೀಕ್ಷೆಗೆ ಒಳಗಾದ ಒಟ್ಟು ಕೈದಿಗಳ ಸಂಖ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಕೈದಿಗಳನ್ನು ಸುಶೀಲಾ ತಿವಾರಿ ಸರ್ಕಾರಿ ಆಸ್ಪತ್ರೆ ಹಲ್ದ್ವಾನಿಯ ಎಆರ್‌ಟಿ ಕೇಂದ್ರದಲ್ಲಿ ನೋಂದಾಯಿಸಲಾಗಿದ್ದು, ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಹೇಳಿದರು. ಈ ಕೆಲವು ಕೈದಿಗಳು ಕಾರಾಗೃಹಕ್ಕೆ ಬರುವ ಮುನ್ನವೇ ಎಆರ್‌ಟಿ ಕೇಂದ್ರದಲ್ಲಿ ನೋಂದಾಯಿಸಿಕೊಂಡಿದ್ದರು. ಆಗಲೇ ಎಆರ್ ಟಿ ಕೇಂದ್ರದಿಂದ ಇವರ ಚಿಕಿತ್ಸೆ ನಡೆಯುತ್ತಿತ್ತು