Asianet Suvarna News Asianet Suvarna News

Fight with HIV: ಎಚ್ ಐವಿ ಸೋಂಕಿತರ ಹೆಲ್ದಿ ಆಹಾರ ಹೀಗಿರ್ಬೇಕು

ಏಡ್ಸ್ ರೋಗಿಗಳು ಹಾಗೂ ಎಚ್ ಐವಿ ಪೀಡಿತರು ಸದೃಢರಾಗಿ ಇರಬೇಕಾದಲ್ಲಿ ಅವರು ಉತ್ತಮ ಜೀವನಶೈಲಿ ಅನುಸರಿಸಬೇಕಾಗುತ್ತದೆ. ಇಲ್ಲಿ ಆಹಾರಕ್ಕೆ ಪ್ರಧಾನ ಸ್ಥಾನವಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆ ಮಾಡುವ ಮೂಲಕ ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. 
 

Healthy Food Habit For HIV and Aids Patients
Author
First Published Dec 1, 2022, 7:19 PM IST

ಎಚ್ ಐವಿ ವೈರಸ್ ಹಾಗೂ ಏಡ್ಸ್ ಮಾರಣಾಂತಿಕ ಕಾಯಿಲೆಯಾಗಿ ಪರಿಣಮಿಸುವ ಸಾಧ್ಯತೆ ಅಧಿಕ ಎನ್ನುವುದೇನೋ ನಿಜ. ಆದರೆ, ಆರಂಭದಲ್ಲೇ ಪತ್ತೆ ಮಾಡಿದರೆ ಹಾಗೂ ಸೂಕ್ತ ಚಿಕಿತ್ಸೆ ಪಡೆದರೆ ಎಲ್ಲರಂತೆ ಜೀವಿಸಬಹುದು. ತುಸು ಹೆಚ್ಚೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಇದರೊಂದಿಗೆ ಎಚ್ ಐವಿ ವೈರಸ್ ಹೊಂದಿರುವವರು ಆಹಾರದ ಬಗ್ಗೆ ಭಾರೀ ಕಾಳಜಿ ತೆಗೆದುಕೊಳ್ಳಬೇಕು. ಏಕೆಂದರೆ, ಎಚ್ ಐವಿ ರೋಗ ನಿರೋಧಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವುದರಿಂದ ರೋಗ ನಿರೋಧಕ ವ್ಯವಸ್ಥೆಗೆ ಬಲ ತುಂಬಲು ಸೂಕ್ತ ಆಹಾರ ಅತ್ಯಂತ ಅಗತ್ಯ. ಎಚ್ ಐವಿ ವೈರಸ್ ನ ತೀವ್ರತರನಾದ ಸ್ವರೂಪವೇ ಏಡ್ಸ್ (ಅಕ್ವೈರ್ಡ್ ಇಮ್ಯೂನೋ ಡೆಫಿಷಿಯನ್ಸಿ ಸಿಂಡ್ರೋಮ್). ಇದು ಕೀಟಾಣುಗಳ ವಿರುದ್ಧ ಹೋರಾಡುವ ಟಿ ಕೋಶಗಳ ಮೇಲೆ ದಾಳಿ ಮಾಡುವುದರಿಂದ ಬೇರೆ ಯಾವುದಾದರೂ ಸೋಂಕು ಬಾರದಂತೆ ರೋಗ ನಿರೋಧಕ ವ್ಯವಸ್ಥೆಯನ್ನು ಸದೃಢವಾಗಿಡುವುದು ಸವಾಲಾಗುತ್ತದೆ. ಹೀಗಾಗಿ, ಮೊದಲು ಯಾವುದೇ ರೀತಿಯ ಜೀವನಶೈಲಿ ಇದ್ದರೂ ಒಮ್ಮೆ ವೈರಸ್ ಕಾಣಿಸಿಕೊಂಡ ಬಳಿಕ ಬದಲಾಗಬೇಕು. ಉತ್ತಮ ಆಹಾರಕ್ಕೆ ಆದ್ಯತೆ ನೀಡಬೇಕು. ವೈರಸ್ ಇರುವ ವ್ಯಕ್ತಿ ಸೇವಿಸಬೇಕಾದ ಕೆಲವು ಆಹಾರಗಳು ಇಲ್ಲಿವೆ.
•    ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯಕರ (Healthy) ಕಾರ್ಬೋಹೈಡ್ರೇಡ್ಸ್ (Carbohydrates) ಇರುವ ಪದಾರ್ಥಗಳನ್ನು ಸೇವಿಸಬೇಕು. ಬೇಳೆ-ಕಾಳುಗಳು (While Grains) ದೇಹಕ್ಕೆ ಬೇಕಾದ ಶಕ್ತಿಯನ್ನು (Energy) ನೀಡುತ್ತವೆ. ಬಾರ್ಲಿ, ಜೋಳ (Jowar), ಹುರುಳಿ, ಓಟ್ಸ್ (Oats) ಇತ್ಯಾದಿ ಸೇವನೆ ಮಾಡಬೇಕು. 

Rainbow Diet: ಈ ಸ್ಪೆಷಲ್ ಡಯೆಟ್ ಮಾಡಿದ್ರೆ ಕಾಯಿಲೆಗಳಿಂದ ದೂರವಿರ್ಬೋದು

•    ಪ್ರೊಟೀನ್ (Protein) ಭರಿತ ಆಹಾರಗಳಿಗೂ ಆದ್ಯತೆ ನೀಡಬೇಕು. ಮೊಟ್ಟೆ, ಮೀನು (Fish), ಮಾಂಸ, ಧಾನ್ಯಗಳಾದ ರಾಜ್ಮಾ (Rajma), ಹೆಸರುಬೇಳೆ (Moong Dal), ಕಡಲೆ ಇತ್ಯಾದಿ ಸೇವನೆ ಅತ್ಯಗತ್ಯ. ಏಕೆಂದರೆ, ಇವುಗಳಿಂದ ಮಾಂಸಖಂಡಗಳಲ್ಲಿ (Muscles) ದೌರ್ಬಲ್ಯ ಉಂಟಾಗುವುದಿಲ್ಲ. ಮಾಂಸಖಂಡಗಳ ತೂಕ ಇಳಿಕೆ ಆಗುವುದಿಲ್ಲ. 
•    ಹಾಲಿನ ಉತ್ಪನ್ನಗಳಲ್ಲಿ ಮೊಸರನ್ನು (Yogurt) ಮಿಸ್ ಮಾಡಲೇಬಾರದು. ಇದು ಕರುಳಿಗೆ (Gut) ಬೇಕಾದ ಉತ್ತಮ ಬ್ಯಾಕ್ಟೀರಿಯಾವನ್ನು ನೀಡುತ್ತದೆ. 
•    ವಿಭಿನ್ನ ಬಗೆಯ ಹಣ್ಣುಗಳ (Fruits) ಸೇವನೆಯೂ ಅಗತ್ಯ. ಆಯಾ ಕಾಲಕ್ಕೆ ದೊರೆಯುವ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು. ತರಕಾರಿಗಳನ್ನೂ (Vegetables) ಸಹ ದಿನವೂ ತಿನ್ನಬೇಕು. ಸೋಂಕಿನ ವಿರುದ್ಧ ಹೋರಾಟುವ ವಿಟಮಿನ್ ಮತ್ತು ಮಿನರಲ್ಸ್ ಇವುಗಳಲ್ಲೇ ದೊರೆಯುತ್ತದೆ. ಬ್ರೊಕೊಲಿ ಮತ್ತು ಎಳೆಯ ಸೌತೆಕಾಯಿ ಸೇವನೆ ಅತ್ಯುತ್ತಮ. 
•    ಆಹಾರದಲ್ಲಿ ಹೆಚ್ಚಿನ ಕೊಬ್ಬು (Fat) ಹಾಗೂ ಸಕ್ಕರೆ (Sugar) ಪ್ರಮಾಣ ಬಳಕೆ ಮಾಡಬಾರದು. ಆಲಿವ್ ಎಣ್ಣೆ (Olive Oil) ಹಾಗೂ ತೆಂಗಿನ (Coconut) ಎಣ್ಣೆಗಳ ಬಳಕೆ ಸೂಕ್ತವೆಂದು ಇದುವರೆಗಿನ ಅಧ್ಯಯನಗಳಲ್ಲಿ ಸಾಬೀತಾಗಿದೆ. 

 

ದೇಹಕ್ಕೆ ವಿಟಮಿನ್ ಬಿ 12 ಬೇಕೇ ಬೇಕು, ಇಲ್ಲದಿದ್ರೆ ಏನಾಗುತ್ತೆ ?

•    ಆರೋಗ್ಯಕರ ಬೀಜಗಳನ್ನು (Nuts) ಸೇವನೆ ಮಾಡಬೇಕು. ದಿನವೂ ವಾಲ್ ನಟ್ ಮತ್ತು ಬಾದಾಮಿ (Almond) ಸೇವನೆ ಮಾಡುವಂತೆ ಸಾಮಾನ್ಯವಾಗಿ ಸೂಚಿಸಲಾಗುತ್ತದೆ. 
•    ಎಚ್ ಐವಿ ಪೀಡಿತರ ಆಹಾರ ಮೃದು(Soft)ವಾಗಿರಬೇಕು. ಇಡ್ಲಿ, ಮೊಳಕೆ ಬರಿಸಿದ ಕಾಳು ಹೀಗೆ ಯಾವುದೇ ಆದರೂ ಮೃದುವಾಗಿದ್ದರೆ ಸೂಕ್ತ. 
•    ಆರೋಗ್ಯಕರ ತಿನಿಸುಗಳನ್ನು ಎರಡು ಗಂಟೆಗೆ ಒಮ್ಮೆಯಂತೆ ಸೇವಿಸಬೇಕು. 
•    ದ್ರವಾಹಾರ ಸೇವನೆ ಹೆಚ್ಚಬೇಕು. ಆರೋಗ್ಯಕರ ಜ್ಯೂಸ್ (Juice) ಗಳನ್ನು ಪದೇ ಪದೆ ಕುಡಿಯಬೇಕು. ಸ್ಟ್ರಾಬೆರಿ, ಪೈನಾಪಲ್, ಕಿತ್ತಳೆ ಜ್ಯೂಸ್ ಉತ್ತಮ.
•    ಇವರಿಗೆ ಸಲಾಡ್ ಗಿಂತ ಸೂಪ್ ಹೆಚ್ಚು ಉತ್ತಮ. 
•    ಅತಿ ಬಿಸಿಯಾದ, ಅತಿ ತಣ್ಣಗಿನ, ಅತಿ ಮಸಾಲೆಯುಕ್ತ, ಆಸಿಡಿಟಿ (Acidity) ಉಂಟು ಮಾಡುವ ಆಹಾರದ ಸೇವನೆ ಬೇಡ.
•    ಟೋಸ್ಟ್ ಜತೆಗೆ ಪೀನಟ್ ಬಟರ್, ಆಲ್ಮಂಡ್ ಬಟರ್ ಗಳನ್ನು ಬಳಕೆ ಮಾಡಬಹುದು.
•    ರೆಡಿ ಟು ಈಟ್ (Ready to Eat) ಆಹಾರ ಬೇಡವೇ ಬೇಡ. 
•    ಒಮೆಗಾ-3 (Omega 3) ಹೊಂದಿರುವ ವಾಲ್ ನಟ್, ಕಾಮಕಸ್ತೂರಿ, ಅಗಸೆ ಬೀಜಗಳನ್ನು ಬಳಕೆ ಮಾಡಬೇಕು. ಇವು ಸೋಂಕು ಮತ್ತು ಉರಿಯೂತದಿಂದ ರಕ್ಷಣೆ ನೀಡಲು ಸಹಕಾರಿಯಾಗಿವೆ. 
•    ಉಪ್ಪಿನಕಾಯಿ, ಮದ್ಯಪಾನ (Drinking), ಧೂಮಪಾನ (Smoking), ಕರಿದ ತಿಂಡಿ, ಟೀ, ಕಾಫಿ, ಸಂಸ್ಕರಿತ ಆಹಾರಗಳಿಂದ ದೂರವಿರಬೇಕು. 

Follow Us:
Download App:
  • android
  • ios