Asianet Suvarna News Asianet Suvarna News

ಅಯೋಧ್ಯೆ ಧರ್ಮಪಥದಲ್ಲಿ 40 ಸೂರ್ಯಸ್ತಂಭ ನಿರ್ಮಾಣ: ಉರಿದಾಗ ಸೂರ್ಯನಂತೆ ಕಂಗೊಳಿಸಲಿರುವ ಬೀದಿದೀಪಗಳು

ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆಯೇ ನಗರವನ್ನು ಸುಂದರೀಕರಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಈ ನಡುವೆ ಅಯೋಧ್ಯೆಯ ಧರ್ಮಪಥದ ಉಭಯ ಬದಿಗಳಲ್ಲಿ ತಲಾ 10 ಬೀದಿದೀಪಗಳ ಸ್ತಂಭಗಳು ನಿರ್ಮಾಣವಾಗುತ್ತಿದ್ದು, ಅವುಗಳಲ್ಲಿ ಜ್ಯೋತಿ ಬೆಳಗಿಸಿದಾಗ ಸೂರ್ಯನ ಆಕಾರದಲ್ಲಿ ಕಂಗೊಳಿಸುವಂತೆ ವಿನ್ಯಾಸ ಮಾಡಲಾಗಿದೆ.

40 Sun Pillars or suryastambha in Ayodhya Dharmapath this Street lamps that will be decorated like the sun when the lamp is lit akb
Author
First Published Dec 28, 2023, 8:11 AM IST | Last Updated Dec 28, 2023, 8:13 AM IST

ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆಯೇ ನಗರವನ್ನು ಸುಂದರೀಕರಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಈ ನಡುವೆ ಅಯೋಧ್ಯೆಯ ಧರ್ಮಪಥದ ಉಭಯ ಬದಿಗಳಲ್ಲಿ ತಲಾ 10 ಬೀದಿದೀಪಗಳ ಸ್ತಂಭಗಳು ನಿರ್ಮಾಣವಾಗುತ್ತಿದ್ದು, ಅವುಗಳಲ್ಲಿ ಜ್ಯೋತಿ ಬೆಳಗಿಸಿದಾಗ ಸೂರ್ಯನ ಆಕಾರದಲ್ಲಿ ಕಂಗೊಳಿಸುವಂತೆ ವಿನ್ಯಾಸ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಅಯೋಧ್ಯೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ಎ.ಪಿ. ಸಿಂಗ್‌, ‘30 ಅಡಿ ಎತ್ತರದ ತಲಾ 10 ಸ್ತಂಭಗಳನ್ನು ಲತಾ ಮಂಗೇಷ್ಕರ್‌ ವೃತ್ತದಿಂದ ಅಯೋಧ್ಯೆ ಬೈಪಾಸ್‌ವರೆಗೆ ಉಭಯ ಬದಿಗಳಲ್ಲಿ ಸ್ಥಾಪಿಸಲಾಗುತ್ತಿದೆ. ಉಳಿದ 20 ಸೂರ್ಯಸ್ತಂಭಗಳನ್ನು ಧರ್ಮ ಪಥದ ಸತ್ರಂಗಿ ಪೂಲ್‌ ಬಳಿ ಸ್ಥಾಪಿಸಲಾಗುತ್ತಿದೆ. ಇದರ ಕಾಮಗಾರಿ ಡಿ.29ರೊಳಗೆ ಮುಗಿಯಲಿದ್ದು, ಡಿ.30ರಂದು ನರೇಂದ್ರ ಮೋದಿಯವರನ್ನು ಈ ಸೂರ್ಯಸ್ತಂಭಗಳು ಅಯೋಧ್ಯೆಗೆ ಸ್ವಾಗತಿಸಲಿವೆ’ ಎಂದು ತಿಳಿಸಿದ್ದಾರೆ.

ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಲ್ಲಿ ಸ್ಟಾರ್ಸ್ ಮೆರಗು: ರಿಷಬ್ ಬಳಿಕ ಯಶ್‌ಗೂ ಬಂತು ಆಹ್ವಾನ!

ಸೂರ್ಯಸ್ತಂಭಗಳನ್ನು ಮುಂಬೈ ಮೂಲದ ಸನ್‌ಸಿಟಿ ಇನೋವೇಷನ್ಸ್‌ ಸಂಸ್ಥೆಯವರು ನಾಸಿಕ್‌ನಲ್ಲಿ ತಯಾರಿಸಿದ್ದು, 30 ಅಡಿ ಎತ್ತರದ ಈ ಸ್ತಂಭಗಳನ್ನು ಕಾಂಕ್ರೀಟ್‌ ಪಿಲ್ಲರ್‌ನಿಂದ ನಿರ್ಮಾಣ ಮಾಡಲಾಗಿದೆ. ಅಲ್ಲದೆ ದೀಪಗಳ ಹೊದಿಕೆಯನ್ನು ಕಾಪರ್‌ ಪ್ಲೇಟ್‌ನಿಂದ ತಯಾರಿಸಲಾಗಿದ್ದು, ಸ್ತಂಭಕ್ಕೆ ಗಾಜಿನ ಫೈಬರ್‌ ಹೊದಿಕೆ ಹಾಕಲಾಗಿದೆ ಎಂದು ಸಂಸ್ಥೆಯ ಮ್ಯಾನೇಜರ್‌ ಸಚಿನ್‌ ನಿಕುಂಭ್‌ ಮಾಹಿತಿ ನೀಡಿದ್ದಾರೆ.

ಅಯೋಧ್ಯೆ ರಾಮ ಮಂದಿರ ವಿಶ್ವದ ಮೂರನೇ ಅತಿದೊಡ್ಡ ದೇವಾಲಯ, ಟಾಪ್‌ 5 ಟೆಂಪಲ್ ಇಲ್ಲಿದೆ

Latest Videos
Follow Us:
Download App:
  • android
  • ios