ಅಯೋಧ್ಯೆ ರಾಮ ಮಂದಿರ ವಿಶ್ವದ ಮೂರನೇ ಅತಿದೊಡ್ಡ ದೇವಾಲಯ, ಟಾಪ್‌ 5 ಟೆಂಪಲ್ ಇಲ್ಲಿದೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಹುತೇಕ ಅಂತಿಮ ಹಂತ ತಲುಪಿದೆ. ಈ ದೇವಾಲಯದ ತೆರೆಯುವ ದಿನವನ್ನು ಜನವರಿ 22 ರಂದು ನಿಗದಿಪಡಿಸಲಾಗಿದೆ. ಪೂರ್ಣಗೊಂಡಾಗ, ಇದು ವಿಶ್ವದ ಮೂರನೇ ಅತಿದೊಡ್ಡ ದೇವಾಲಯವಾಗಲಿದೆ. 

ayodhya ram mandir will be third largest temple in world suh

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಹುತೇಕ ಅಂತಿಮ ಹಂತ ತಲುಪಿದೆ. ಈ ದೇವಾಲಯದ ತೆರೆಯುವ ದಿನವನ್ನು ಜನವರಿ 22 ರಂದು ನಿಗದಿಪಡಿಸಲಾಗಿದೆ. ಪೂರ್ಣಗೊಂಡಾಗ, ಇದು ವಿಶ್ವದ ಮೂರನೇ ಅತಿದೊಡ್ಡ ದೇವಾಲಯವಾಗಲಿದೆ. 

ಅಯೋಧ್ಯೆಯ ಈ ರಾಮಮಂದಿರದ ನಕ್ಷೆಯನ್ನು 37 ವರ್ಷಗಳ ಹಿಂದೆ ಮಾಡಲಾಗಿತ್ತು. ನಂತರ ಈ ಯೋಜನೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡುವ ಮೂಲಕ ನಿರ್ಮಾಣವಾಗುತ್ತಿರುವ ದೇವಾಲಯವು ಇನ್ನೂ ದೊಡ್ಡದಾಗಿದೆ ಮತ್ತು ಹೆಚ್ಚು ಸುಂದರವಾಗಿರುತ್ತದೆ. ಸಿದ್ಧವಾದಾಗ ಅಯೋಧ್ಯೆಯ ರಾಮಮಂದಿರವು ವಿಶ್ವದ ಮೂರನೇ ಅತಿದೊಡ್ಡ ದೇವಾಲಯವಾಗಲಿದೆ. 237 ಅಡಿ ಎತ್ತರದ ಈ ದೇವಾಲಯವು 71 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 

ಶ್ರೀರಂಗನಾಥ ದೇವಾಲಯ
ತಮಿಳುನಾಡಿನ ತಿರುಚ್ಚಿಯಲ್ಲಿರುವ ಶ್ರೀರಂಗನಾಥ ದೇವಾಲಯವು ವಿಶ್ವದ ಎರಡನೇ ಅತಿದೊಡ್ಡ ದೇವಾಲಯವಾಗಿದೆ. ಈ ವಿಷ್ಣು ದೇವಾಲಯವು 155 ಎಕರೆ ಪ್ರದೇಶದಲ್ಲಿ ಕಟ್ಟಲಾಗಿದೆ.

ಅಕ್ಷರಧಾಮ ದೇವಾಲಯ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಅಕ್ಷರಧಾಮ ದೇವಾಲಯವು ಸ್ವಾಮಿನಾರಾಯಣ ಪಂಥದ ಆರಾಧನೆಯ ಸ್ಥಳವಾಗಿದೆ. ಈ ದೇವಾಲಯವು 59.3 ಎಕರೆ ಪ್ರದೇಶದಲ್ಲಿ ನಿರ್ಮಾಣಮಾಡಲಾಗಿದೆ.

ತಿಲ್ಲೈ ನಟರಾಜ ದೇವಾಲಯ
ತಮಿಳುನಾಡಿನ ಈ ಶಿವ ದೇವಾಲಯವನ್ನು ಚಿದಂಬರಂ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯವು 39 ಎಕರೆ ಪ್ರದೇಶದಲ್ಲಿ ಕಾಣಬಹುದಾಗಿದೆ.

ಬೇಲೂರಿನಲ್ಲಿರುವ ಚೆನ್ನಕೇಶವ ದೇವಸ್ಥಾನ
ಪ್ರಸಿದ್ಧ ಬೇಲೂರು ಬೇಲೂರಿನಲ್ಲಿರುವ ಚೆನ್ನಕೇಶವ ದೇವಸ್ಥಾನ ಐದನೇ ಸ್ಥಾನದಲ್ಲಿದೆ. ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ವಿಷ್ಣುವಿನ 24 ಅವತಾರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಈ ಭವ್ಯ ದೇವಾಲಯವನ್ನು ವಿಜಯನಾರಾಯಣನಿಗೆ ಅರ್ಪಿಸಲಾಗಿದೆ. 

ಬೃಹದೇಶ್ವರ ದೇವಾಲಯ
ತಮಿಳುನಾಡಿನ ತಂಜಾವೂರಿನಲ್ಲಿರುವ ಈ ಶಿವ ದೇವಾಲಯವು 1000 ವರ್ಷಗಳಷ್ಟು ಹಳೆಯದು. ಇದು 25 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.

ಅಣ್ಣಾಮಲಯ ದೇವಾಲಯ
ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಈ ಶಿವ ದೇವಾಲಯವು ತನ್ನ ಬೃಹತ್ ಎತ್ತರದ ಕಂಬಗಳಿಗೆ ಹೆಸರುವಾಸಿಯಾಗಿದೆ. ಈ ದೇವಾಲಯವು 24.9 ಎಕರೆ ಪ್ರದೇಶದಲ್ಲಿ ಹರಡಿದೆ.

Latest Videos
Follow Us:
Download App:
  • android
  • ios