ನವದೆಹಲಿ(ಡಿ.02): ದೇಶದಲ್ಲಿ ಕೊರೋನಾ ಎರಡನೇ ಅಲೆಯ ಭೀತಿಯ ಮಧ್ಯೆಯೇ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕಳೆದ ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಶೇ.30ರಷ್ಟು ಇಳಿಕೆ ಆಗಿದೆ.

ದೇಶದ ಎಲ್ಲರಿಗೂ ಲಸಿಕೆ ನೀಡ್ತೀವಿ ಎಂದು ಹೇಳೇ ಇಲ್ಲ, ನಿರ್ದಿಷ್ಟ ವರ್ಗಕ್ಕೆ ಕೊಟ್ಟರೆ ಸಾಕು: ಕೇಂದ್ರ!

ಅಕ್ಟೋಬರ್‌ನಲ್ಲಿ ದಾಖಲಾದ 18.71 ಲಕ್ಷ ಕೇಸ್‌ಗಳಿಗೆ ಹೋಲಿಸಿದರೆ ನವೆಂಬರ್‌ನಲ್ಲಿ 12.78 ಲಕ್ಷ ಕೇಸ್‌ಗಳು ದಾಖಲಾಗಿವೆ. ಕಳೆದ ತಿಂಗಳು ಕೊರೋನಾಕ್ಕೆ 15,510 ಮಂದಿ ಬಲಿ ಆಗಿದ್ದಾರೆ. ಇನ್ನು ಸತತ 21ನೇ ದಿನವೂ ಸಕ್ರಿಯ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ 5 ಲಕ್ಷದ ಒಳಗೆ ಸೀಮಿತಗೊಂಡಿದೆ.

ಕಾಲೇಜು ಫೀ ಕಟ್ಟಲಾಗದೆ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳವಾರ ಮುಂಜಾನೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 31,118 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 94.62 ಲಕ್ಷಕ್ಕೆ ಏರಿಕೆ ಆಗಿದೆ. ಒಂದೇ ದಿನ 482 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 1,37,621ಕ್ಕೆ ತಲುಪಿದೆ.

ಇದೇ ವೇಳೆ 41,985 ಮಂದಿ ಕೊರೋನಾದಿಂದ ಗುಣಮುಖರಾಗುವುದರೊಂದಿಗೆ ಚೇತರಿಕೆ ಪ್ರಮಾಣ 88.89 ಲಕ್ಷಕ್ಕೆ ಏರಿಕೆ ಕಂಡಿದೆ. ಒಟ್ಟು ಪ್ರಕರಣದಲ್ಲಿ ಸಕ್ರಿಯ ಪ್ರಕರಣಗಳ ಪಾಲು ಕೇವಲ ಶೇ.4.60ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.