ಖಾನಾಪುರ, (ಡಿ.01) : ಪಾಲಕರು ತನ್ನ ಕಾಲೇಜಿನ ಫೀ ಭರಿಸದ ಕಾರಣ ಮನನೊಂದ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಬೀಡಿ ಗ್ರಾಮದ ನಿವಾಸಿ ಮೆಹೇಕ್ ಶಕೀಲ್ ಸಂಗೊಳ್ಳಿ (19) ಮೃತ ವಿದ್ಯಾರ್ಥಿನಿ. 

ಗದಗ; ಅನುಮಾನಕ್ಕೆ ಮದ್ದಿಲ್ಲ... ಮಲಗಿದ್ದ ಗಾರ್ಡ್ ಹೆಣವಾಗಿದ್ದ

ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಮೆಹೇಕ್ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಖಾಸಗಿ ಕಾಲೇಜಿನಲ್ಲಿ ಕಳೆದ ವರ್ಷ ಪ್ರಥಮ ವರ್ಷದ ಬಿಸಿಎ ಪದವಿ ಪೂರೈಸಿದ್ದಳು. 

ಈ ವರ್ಷದ ಕಾಲೇಜು ಫೀ ಭರಿಸಲು ಕೊರೋನಾ ಕಾರಣದಿಂದಾಗಿ ಪಾಲಕರು ವಿಫಲರಾಗಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.