ಅಪರೂಪದ ಜೋಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಅದಕ್ಕೆ ಕಾರಣ ಇಬ್ಬರ ನಡುವಿನ ಲವ್ ಕಹಾನಿ. ಈಕೆ ಕಂಟೆಂಟ್ ಕ್ರಿಯೇಟರ್. ಆತ ವೃತ್ತ. ಒಂದು ವರ್ಷದಲ್ಲಿ ಚಿಗುರಿದ ಪ್ರೀತಿಯಿಂದ ಏನೆಲ್ಲಾ ಆಗಿದೆ? ಸ್ಟೋರಿ ಓದಿ..

ಉತ್ತರ ಪ್ರದೇಶ (ಅಕ್ಟೋಬರ್ 16): ಪ್ರೀತಿಗೆ ವಯಸ್ಸಿನ ಅಂತರ ಇರಲ್ಲ. ಪ್ರೀತಿ ಯಾವತ್ತಿದ್ದರೂ ಕುರುಡೆ. ತನಗೆ ಬೇಕಾದ ವ್ಯಕ್ತಿಯನ್ನ ಪ್ರೀತಿ ಹಿಂದೆ ಮುಂದೆ ನೋಡದೇ ಸೆಳೆದುಬಿಡುತ್ತದೆ. ಇದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಹೊಸ ವಿಚಾರವೇನೂ ಅಲ್ಲ. ಅಂತೆಯೇ ಉತ್ತರ ಪ್ರದೇಶದಲ್ಲಿ ಅಪರೂಪದ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಇದು ಪ್ರೀತಿ ಕುರುಡು ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದೆ!

ಹೌದು, ಉತ್ತರ ಪ್ರದೇಶದ ಔರೆಯಾ ಜಿಲ್ಲೆಯಲ್ಲಿ ಒಬ್ಬ ಯುವತಿ. ಆಕೆಗೆ ಇನ್ನೂ 30 ವರ್ಷ. ಹೆಸರು ರೀನಾ. ವೃತ್ತಿಯಲ್ಲಿ ಕಂಟೆಂಟ್ ಕ್ರಿಯೇಟರ್‍‌ ರೀಲ್ಸು, ಗೀಲ್ಸು ವ್ಯುವ್ಸು ಅಂತಾ ಊರೂರು ಸುತ್ತುವ ವೇಳೆ ಕಳೆದ ಒಂದು ವರ್ಷಗಳ ಹಿಂದೆ ತನಗಿಂತ 45 ವರ್ಷ ದೊಡ್ಡವರಾದ ವ್ಯಕ್ತಿಯೊಬ್ಬರ ಪರಿಚಯ ಆಗಿದೆ. ಅವರಿಗೆ 75 ವರ್ಷ.

ಈ 75 ವರ್ಷದ ವೃದ್ಧನ ಪರಿಚಯ ತುಂಬಾ ಗಾಢಕ್ಕೆ ತಿರುಗುತ್ತದೆ. ಆರಂಭದಲ್ಲಿ ಮೆಜೇಜು, ಫೋನ್ ಕಾಲ್‌ ಮೂಲಕ ಶುರುವಾದ ಮಾತುಕತೆ ತುಂಬಾ ಹತ್ತಿರಕ್ಕೆ ಕರೆದುಕೊಂಡು ಹೋಗಿದೆ. ಅವರಿಬ್ಬರು ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಒಬ್ಬರಿಗೊಬ್ಬರು ಬಿಟ್ಟಿರಲಾರದಂಥ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.

ವಯಸ್ಸಿನ ಅಂತರ ನೋಡದ ಪ್ರೇಮಿಗಳು!

ಪ್ರೀತಿಯಲ್ಲಿ ಬೀಳೋದೇನೋ ಸರಿ. ಆದರೆ ಇವರಿಬ್ಬರ ಮಧ್ಯೆ ಚರ್ಚೆ ಆಗ್ತಿರುವ ವಿಚಾರ ಏನೆಂದರೆ ವಯಸ್ಸಿನ ಅಂತರ. 45 ವರ್ಷಗಳ ಅಂತರ ಇದೆ. ಇವರಿಬ್ಬರು ಹೇಗೆ ಪ್ರೀತಿಯಲ್ಲಿ ಬೀಳಲು ಸಾಧ್ಯ ಎಂದು ಜನ ಮಾತಾಡಿಕೊಂಡಿದ್ದಾರೆ. ಆದರೆ ಇವರಿಬ್ಬರ ಪ್ರೀತಿಗೆ ವಯಸ್ಸು ಅಡ್ಡಿ ಆಗಲಿಲ್ಲ. ಇದೀಗ ಒಟ್ಟಿಗೆ ಕೈಹಿಡಿದು ನಡೆಯಲು ಪ್ಲಾನ್ ಮಾಡಿದ್ದಾರೆ.

ಅಂತೆಯೇ.. ತಮ್ಮಿಬ್ಬರ ನಡುವಿನ ಪ್ರೀತಿಯನ್ನ ವೃದ್ಧನ ಕುಟುಂಬ ಮತ್ತು ಯುವತಿಯ ಕುಟುಂಬ ಒಪ್ಪಿಕೊಂಡಿದೆ. ಮದುವೆ ಆಗಲು ಗ್ರೀನ್ ಸಿಗ್ನಲ್ ಸಿಕ್ಕಾಗಿದೆ. ಮದುವೆಯ ಮುಂದುವರಿದ ಭಾಗವಾಗಿ ಎರಡೂ ಮನೆಯವರು ಒಪ್ಪಿ ನಿಶ್ಚಿತಾರ್ಥ ನೆರವೇರಿಸಿದ್ದಾರೆ. ಸದ್ಯದಲ್ಲೇ ಈ ಜೋಡಿ ಸಪ್ತಪದಿ ತುಳಿಯಲು ಸಜ್ಜಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್

ಹೇಳಿಕೇಳಿ ರೀನಾ ಕಂಟೆಂಟ್ ಕ್ರಿಯೇಟರ್. ಸೋಶಿಯಲ್ ಮೀಡಿಯಾದಲ್ಲಿ ಅವರದ್ದೇ ಆದ ಫಾಲೋವರ್ಸ್ ಹೊಂದಿದ್ದಾರೆ. ಯಾವಾಗ ತಾವು ಮದುವೆ ಆಗಲು ಸಿದ್ಧನಾಗಿದ್ದೇನೆ ಎಂದು ಎಂಗೇಜ್ಮೆಂಟ್‌ನ ಫೋಟೋ ಶೇರ್ ಮಾಡಿದರೋ.. ಆಗ ಆಕೆಯ ಫಾಲೋವರ್ಸ್ ಒಂದು ಕ್ಷಣ ಆಘಾತಕ್ಕೆ ಒಳಾಗಿದ್ದಾರೆ. ನಂತರ ನಿಧಾನಕ್ಕೆ ಸುಧಾರಿಸಿಕೊಂಡು ನಿಶ್ಚಿತಾರ್ಥ ಫೋಟೋಗಳನ್ನ ನೋಡಿ ಓ ವಿಷಯ ಹಿಂಗಾ ಎಂದು ಪ್ರಶ್ನೆ ಮಾಡಿಕೊಂಡಿದ್ದಾರೆ. ಯಾವಾಗ 75 ವರ್ಷದ ವೃದ್ಧನ ಕೈಹಿಡಿಯಲು ರೀನಾ ಹೊರಟಿದ್ದಾಳೆ ಎಂದು ಗೊತ್ತಾಗುತ್ತಿದ್ದಂತೆಯೇ ವಯಸ್ಸಿನ ಅಂತರ ಇಟ್ಕೊಂಡು ಲೆಕ್ಕಾಚಾರ ಹಾಕ್ತಿದ್ದಾರತೆ. ಇಬ್ಬರ ಮಧ್ಯೆ 45 ವರ್ಷಗಳ ಅಂತರ ಇದೆ. ರೀನಾ ನಿನ್ನ ಆಯ್ಕೆ ಸರಿ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಕೆಲವರು ಪ್ರೀತಿಗೆ ವಯಸ್ಸಿನ ಅಂತರ ಇಲ್ಲ. ನಿಮ್ಮಿಬ್ಬರ ಪ್ರೀತಿ ನಿಜವಾಗಿದ್ದರೆ.. ಆದಷ್ಟು ಬೇಗ ಎಂಗೇಜ್ ಮಾಡಿಕೊಂಡಂತೆ.. ಬೇಗ ಮದುವೆ ಆಗಿ. ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ.

View post on Instagram