- Home
- Automobile
- Bike News
- TVS, Bajaj, Ola! ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಯಾವ ಕಂಪನಿ ಮೊದಲ ಸ್ಥಾನದಲ್ಲಿದೆ?
TVS, Bajaj, Ola! ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಯಾವ ಕಂಪನಿ ಮೊದಲ ಸ್ಥಾನದಲ್ಲಿದೆ?
ಎಲೆಕ್ಟ್ರಿಕ್ ವಾಹನಗಳಿಗೆ (EV: Electric Vehicle) ಬೇಡಿಕೆ ಹೆಚ್ಚುತ್ತಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಎಲೆಕ್ಟ್ರಿಕ್ ವಾಹನಗಳನ್ನ ಇಷ್ಟಪಡೋರ ಸಂಖ್ಯೆ ಹೆಚ್ಚಾಗಿದೆ. ಅಂತೆಯೇ ಕಳೆದ ಸೆಪ್ಟೆಂಬರ್ನಲ್ಲಿ ಎಲೆಕ್ಟ್ರಿಕ್ ಸ್ಕೋಟರ್ಗಳು ಮಾರಾಟವು ಏರಿಕೆ ಆಗಿದೆ. ಹೆಚ್ಚು ಮರಾಟವಾದ ಸ್ಕೂಟರ್ ಯಾವುದು?

ಯಾವುದು ಟ್ರೆಂಡಿಂಗ್ನಲ್ಲಿದೆ?
ಎಲೆಕ್ಟ್ರಿಕ್ ಸ್ಕೂಟರ್ಗಳ ಮಾರಾಟದಲ್ಲಿ ಟಿವಿಎಸ್ (TVS), ಬಜಾಜ್ (Bajaj), ವಿಡಾ (Vida) ಮತ್ತು ಓಲಾ (Ola) ಮಾರಾಟದಲ್ಲಿ ಪ್ರಭಾವ ಬೀರಿವೆ. ಕಳೆದ ಸೆಪ್ಟೆಂಬರ್ನಲ್ಲಿ ಮಾರಾಟವಾದ ಅಂಕಿ-ಅಂಶಗಳ್ನು ನಾವು ನೋಡೋದಾದ್ರೆ.. ಸೆಪ್ಟೆಂಬರ್ನಲ್ಲಿ ನಿರೀಕ್ಷೆಗೂ ಮೀರಿ ಸ್ಕೂಟರ್ಗಳು ಮಾರಾಟ ಆಗಿವೆ.. ಅದರಲ್ಲಿ ಟಿವಿಎಸ್ ಮೊದಲ ಸ್ಥಾನದಲ್ಲಿದೆ.
ಅಂಕಿ-ಅಂಶ ಏನು ಹೇಳ್ತಿದೆ?
ಮೊದಲ ಸ್ಥಾನದಲ್ಲಿರುವ ಟಿವಿಎಸ್ ಕಳೆದ ಸೆಪ್ಟೆಂಬರ್ನಲ್ಲಿ ದೇಶದಾದ್ಯಂತ ಒಟ್ಟು 54,037 ಯುನಿಟ್ಗಳನ್ನು ಮಾರಾಟ ಮಾಡಿದೆ. ಇದನ್ನು ಕಳೆದ ವರ್ಷಕ್ಕೆ ಹೋಲಿಸಿದರೆ.. ಶೇಕಡಾ 125.87 ರಷ್ಟು ಹೆಚ್ಚಳವಾದಂತೆ ಆಗಿದೆ. ಟಿವಿಎಸ್ನ ಐಕ್ಯೂಬ್, ಸ್ಪೋರ್ಟಿ ಜನರನ್ನು ಹೆಚ್ಚು ಆಕರ್ಷಿಸುತ್ತಿವೆ ಅನ್ನೋದು ಈ ಅಂಕಿ-ಅಂಶಗಳಿಂದ ತಿಳಿಯುತ್ತದೆ.
ಬಜಾಜ್ ಆಟೋ (Bajaj Auto)
ಸೆಪ್ಟೆಂಬರ್ 2026ರಲ್ಲಿ 48,429 ಯೂನಿಟ್ಗಳನ್ನ ಮಾರಾಟ ಮಾಡುವ ಮೂಲಕ ಬಜಾಜ್ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 138.87% ರಷ್ಟಯ ಹೆಚ್ಚಳವಾಗಿದೆ. ಬಜಾಜ್ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನರು ಹೆಚ್ಚಾಗಿ ಇಷ್ಟಪಟ್ಟಿದ್ದಾರೆ. ಚೇತಕ್ ಪ್ರೀಮಿಯಂ, ಚೇತಕ್ ಅರ್ಬೇ ಜನರ ಪ್ರೀತಿಗಾ ಪಾತ್ರವಾಗಿದೆ. ಬಜೆಟ್ ಸ್ನೇಹಿ, ವಿಶ್ವಾಸರ್ಹ ಗುಣಮಟ್ಟದಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ.
ಎಥರ್ ಎನರ್ಜಿ (Ather Energy)
ಇನ್ನು ಮೂರನೇ ಸ್ಥಾನದಲ್ಲಿ ಎಥರ್ ಇದೆ. ಕಳೆದ ಸೆಪ್ಟೆಂಬರ್ನಲ್ಲಿ ಇದು 30533 ಯುನಿಟ್ಗಳನ್ನ ಮಾರಾಟ ಮಾಡಿದೆ. ಕಂಪನಿಯು ವರ್ಷದಿಂದ ವರ್ಷಕ್ಕೆ 55.62ರಷ್ಟು ಸ್ಥಿರ ಬೆಳವಣಿಗೆ ಕಾಣ್ತಿದೆ.
ಹಿರೋ ವಿಡಾ (Hero Vida)
ಹೀರೋ ಮೋಟೋಕಾರ್ಪ್ನ ಎಲೆಕ್ಟ್ರಿಕ್ ಬ್ರ್ಯಾಂಡ್ ವಿಡಾ ಸೆಪ್ಟೆಂಬರ್ 2026 ರಲ್ಲಿ 24,321 ಯುನಿಟ್ಗಳನ್ನ ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ.. ಶೇಕಡಾ 83.24 ಬೆಳವಣಿಗೆ ಸಾಧಿಸಿದೆ. ವಿಡಾ ವಿ1 ಪ್ಲಸ್ ಮತ್ತು ವಿಡಾ ವಿ1 ಪ್ರೊ ಮಾದರಿ ಜನರಿಗೆ ಇಷ್ಟವಾಗಿದೆ.
ಓಲಾ ಎಲೆಕ್ಟ್ರಿಕ್ (Ola Electric)
ಬೇರೆ ಎಲ್ಲಾ ಕಂಪನಿಗಳಿಗೆ ಹೋಲಿಸಿದರೆ ಓಲಾ ಮಾರಾಟ ವಿಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಕಳೆದ ಸೆಪ್ಟೆಂಬರ್ನಲ್ಲಿ ಒಟ್ಟು 13451 ಎಲೆಕ್ಟ್ರಿಕ್ ಸ್ಕೂಟರ್ಗಳನ್ನ ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 2.96 ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಓಲಾ ಎಸ್ 1 ಎಕ್ಸ್ ಸರಣಿ, ಓಲಾ ಎಸ್ 1 ಏರ್ ಮತ್ತು ಪ್ರೀಮಿಯಂ ಫ್ಲ್ಯಾಗ್ಶಿಪ್ ಓಲಾ ಎಸ್ 1 ಪ್ರೊ (ಜನರಲ್ 2) ಸೇರಿವೆ ಜನರನ್ನ ಆಕರ್ಷಿಸಿವೆ.

