ಭಾರತದಲ್ಲಿ ಡಿಜಿಟಲ್ ಜ್ಯೋತಿಷ್ಯ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಈ ಕ್ಷೇತ್ರದ ಮೇಲೆ ಇದೀಗ ರಿಲಯನ್ಸ್ ಕಣ್ಣು ಬಿದ್ದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಬೆಂಬಲಿತ ಜಿಯೋ ಪ್ಲಾಟ್ಫಾರ್ಮ್ಸ್ ಇದೀಗ JioAstro ಎಂಬ AI ಆಧಾರಿತ ವೈದಿಕ ಜ್ಯೋತಿಷ್ಯ ವೇದಿಕೆಯನ್ನು ಪರಿಚಯಿಸಿದೆ.
ಭಾರತದಲ್ಲಿ ಡಿಜಿಟಲ್ ಜ್ಯೋತಿಷ್ಯ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಈ ಕ್ಷೇತ್ರದ ಮೇಲೆ ಇದೀಗ ರಿಲಯನ್ಸ್ ಕಣ್ಣು ಬಿದ್ದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಬೆಂಬಲಿತ ಜಿಯೋ ಪ್ಲಾಟ್ಫಾರ್ಮ್ಸ್ ಇದೀಗ ಜಿಯೋ ಅಸ್ಟ್ರೊಎಂಬ AI ಆಧಾರಿತ ವೈದಿಕ ಜ್ಯೋತಿಷ್ಯ ವೇದಿಕೆಯನ್ನು ಪರಿಚಯಿಸಿದೆ. ವೈಯಕ್ತಿಕ ಜಾತಕ, ರಾಶಿಭವಿಷ್ಯ, ಕುಂಡಲಿ ವಿಶ್ಲೇಷಣೆ ಸೇರಿದಂತೆ ಹಲವು ಸೇವೆಗಳನ್ನು ಇದು ನೀಡಲಿದೆ. ಈ ಮೂಲಕ ಈಗಾಗಲೇ ಜನಪ್ರಿಯವಾಗಿರುವ ಆಸ್ಟ್ರೋಟಾಕ್, AstroSage ಸೇರಿದಂತೆ ಹಲವು ಜ್ಯೋತಿಷ್ಯ ಆ್ಯಪ್ಗಳಿಗೆ ಜಿಯೋ ಪೈಪೋಟಿ ನೀಡಲು ಸಜ್ಜಾಗಿದೆ.
ಜಿಯೋ ಅಸ್ಟ್ರೊನಲ್ಲಿ ಏನೆಲ್ಲಾ ಸೌಲಭ್ಯಗಳಿವೆ?
ಜಿಯೋ ಅಸ್ಟ್ರೊಬಳಕೆದಾರರ ಜನ್ಮ ದಿನಾಂಕ, ಜನನ ಸಮಯ ಮತ್ತು ಜನ್ಮಸ್ಥಳದ ಮಾಹಿತಿಯನ್ನು ಆಧರಿಸಿ ವೈಯಕ್ತಿಕ ಜನ್ಮ ಕುಂಡಲಿಯನ್ನು ಸಿದ್ಧಪಡಿಸುತ್ತದೆ. ಇದಕ್ಕಾಗಿ Swiss Ephemeris ಲೆಕ್ಕಾಚಾರ ವ್ಯವಸ್ಥೆಯನ್ನು ಬಳಸುತ್ತದೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಮಾದರಿಗಳಲ್ಲಿ D1 (ಲಗ್ನ) ಹಾಗೂ D9 (ನವಾಂಶ) ಚಾರ್ಟ್ಗಳನ್ನು ವೀಕ್ಷಿಸಬಹುದು.
ಇದರಲ್ಲಿರುವ AI ಜ್ಯೋತಿಷಿ 40ಕ್ಕೂ ಹೆಚ್ಚು ಯೋಗಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಮಾಂಗಲಿಕ ದೋಷ, ಕಾಲಸರ್ಪ ದೋಷ, ಪಿತೃ ದೋಷ ಮತ್ತು ಗ್ರಹಣ ದೋಷಗಳ ಬಗ್ಗೆಯೂ ವಿಶ್ಲೇಷಣೆ ನೀಡುತ್ತದೆ.
ಇಷ್ಟೇ ಅಲ್ಲದೆ, ಬಳಕೆದಾರರಿಗೆ ಹಲವು ವೈಯಕ್ತಿಕ ಜ್ಯೋತಿಷ್ಯ ಸೇವೆಗಳು ಲಭ್ಯವಿವೆ.
ದೈನಂದಿನ ಮತ್ತು ವಾರ್ಷಿಕ ರಾಶಿಭವಿಷ್ಯ
ಶುಭ ಕಾರ್ಯಗಳಿಗೆ ಮುಹೂರ್ತ ಸಲಹೆ
ತಿಥಿ, ನಕ್ಷತ್ರ ಸೇರಿದಂತೆ ದೈನಂದಿನ ಪಂಚಾಂಗ
ವೃತ್ತಿ, ಉದ್ಯೋಗ ಮತ್ತು ಆರ್ಥಿಕ ಸ್ಥಿತಿಯ ವಿಶ್ಲೇಷಣೆ
ಪ್ರೀತಿ, ಸಂಬಂಧ ಮತ್ತು ಆರೋಗ್ಯದ ಕುರಿತ ಭವಿಷ್ಯ
ಆಧ್ಯಾತ್ಮಿಕ ಜೀವನದ ಕುರಿತ ಮಾಹಿತಿ
ಇದರಲ್ಲಿರುವ 'Life Snapshot' ವೈಶಿಷ್ಟ್ಯವು ವ್ಯಕ್ತಿಯ ಜೀವನದ ವಿವಿಧ ಆಯಾಮಗಳ ಬಗ್ಗೆ ಸಂಕ್ಷಿಪ್ತ ವಿಶ್ಲೇಷಣೆ ನೀಡುತ್ತದೆ. ಬಳಕೆದಾರರು ತಮ್ಮ ಕುಟುಂಬದ ನಾಲ್ವರು ಸದಸ್ಯರ ಪ್ರೊಫೈಲ್ಗಳನ್ನು ಒಂದೇ ಖಾತೆಯಲ್ಲಿ ರಚಿಸಬಹುದು. ವೈಯಕ್ತಿಕ ಜ್ಯೋತಿಷ್ಯ ವರದಿಗಳನ್ನು PDF ರೂಪದಲ್ಲಿಯೂ ಡೌನ್ಲೋಡ್ ಮಾಡಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಜಿಯೋ ಅಸ್ಟ್ರೊಲಭ್ಯವಿದೆಯೇ?
ಸದ್ಯ ಜಿಯೋ ಅಸ್ಟ್ರೊಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಗುಜರಾತಿ ಸೇರಿದಂತೆ ನಾಲ್ಕು ಭಾಷೆಗಳನ್ನು ಬೆಂಬಲಿಸುತ್ತದೆ. ಆದರೆ ಕನ್ನಡ ಭಾಷೆಯ ಬೆಂಬಲದ ಬಗ್ಗೆ ಮಾಹಿತಿ ಲಭ್ಯವಿಲ್ಲ.
ಇನ್ನೊಂದು ಪ್ರಮುಖ ಸಂಗತಿಯೆಂದರೆ, ಜಿಯೋ ಅಸ್ಟ್ರೊನ ಪ್ರಸ್ತುತ ನಿಯಮಗಳ ಪ್ರಕಾರ ಮೊಬೈಲ್ ಆ್ಯಪ್ ಇನ್ನೂ ಆಹ್ವಾನ ಆಧಾರಿತ ಪ್ರೊಟೊಟೈಪ್ ಹಂತದಲ್ಲಿದೆ. ಆಂತರಿಕ ಪರೀಕ್ಷಾ ಕಾರ್ಯಕ್ರಮದ ಮೂಲಕ ಮಾತ್ರ ಲಭ್ಯವಿದ್ದು, ಸಾರ್ವಜನಿಕ ಬಳಕೆಗೆ ಯಾವಾಗ ಬಿಡುಗಡೆಯಾಗಲಿದೆ ಮತ್ತು ಸೇವೆಗಳ ಬೆಲೆ ಎಷ್ಟಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆಸ್ಟ್ರೋಟಾಕ್ಗೆ ನೇರ ಪೈಪೋಟಿ ನೀಡುತ್ತಾ ಜಿಯೋ ಅಸ್ಟ್ರೊ?
ಭಾರತದಲ್ಲಿ ಆನ್ಲೈನ್ ಜ್ಯೋತಿಷ್ಯ ಸೇವೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ಮಾರುಕಟ್ಟೆಯಲ್ಲಿ ಆಸ್ಟ್ರೋಟಾಕ್ಪ್ರಮುಖ ಕಂಪನಿಯಾಗಿ ಬೆಳೆದಿದೆ. 2026ರ ಆರಂಭದಲ್ಲಿ ಉದ್ಯೋಗಿಗಳ ಷೇರುಗಳ ಮರುಖರೀದಿ (ESOP Buyback) ಮೂಲಕ ಕಂಪನಿಯ ಮೌಲ್ಯ 1 ಬಿಲಿಯನ್ ಡಾಲರ್ ತಲುಪಿದ್ದು, ಯುನಿಕಾರ್ನ್ ಸ್ಥಾನಮಾನ ಪಡೆದಿದೆ. ಇದರ ವಾರ್ಷಿಕ ಆದಾಯದ ರನ್ ರೇಟ್ 2,500 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ವರದಿಯಾಗಿದೆ.
ಆದರೆ ಆಸ್ಟ್ರೋಟಾಕ್ಮತ್ತು ಜಿಯೋ ಅಸ್ಟ್ರೊನಡುವೆ ಪ್ರಮುಖ ವ್ಯತ್ಯಾಸವಿದೆ. ಆಸ್ಟ್ರೋಟಾಕ್ಬಳಕೆದಾರರನ್ನು ನೈಜ ಜ್ಯೋತಿಷಿಗಳೊಂದಿಗೆ ಸಂಪರ್ಕಿಸುವ ಮೂಲಕ ಪಾವತಿ ಆಧಾರಿತ ಚಾಟ್ ಮತ್ತು ಕರೆಗಳ ಸೇವೆ ನೀಡುತ್ತದೆ. ಜಿಯೋ ಅಸ್ಟ್ರೊಮಾತ್ರ AI ಆಧಾರಿತ ಸ್ವಯಂಚಾಲಿತ ಜ್ಯೋತಿಷ್ಯ ವಿಶ್ಲೇಷಣೆ ಮತ್ತು ಸಂವಾದಾತ್ಮಕ ಮಾರ್ಗದರ್ಶನಕ್ಕೆ ಆದ್ಯತೆ ನೀಡುತ್ತಿದೆ.
ಇನ್ನು AstroSage, Astroyogi, InstaAstro, Clickastro ಮತ್ತು GaneshaSpeaks ಕೂಡ ಈ ಕ್ಷೇತ್ರದ ಪ್ರಮುಖ ಕಂಪನಿಗಳಾಗಿವೆ. ಇವುಗಳಲ್ಲಿ ಕೆಲವು ಉಚಿತ ಕುಂಡಲಿ ರಚನೆ ಮತ್ತು ಜಾತಕ ವಿಶ್ಲೇಷಣೆ ನೀಡಿದರೆ, ಇನ್ನು ಕೆಲವು ಜ್ಯೋತಿಷಿಗಳೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಕಲ್ಪಿಸುತ್ತವೆ. ಟ್ಯಾರೋ ರೀಡಿಂಗ್, ಸಂಖ್ಯಾಶಾಸ್ತ್ರ ಸೇರಿದಂತೆ ಹಲವು ಸೇವೆಗಳನ್ನೂ ಈ ಆ್ಯಪ್ಗಳು ಒದಗಿಸುತ್ತಿವೆ.












