Asianet Suvarna News Asianet Suvarna News

ನಿನಗೆ ನಾನು ನನಗೆ ನೀನು : ಮೂರಡಿ ಯುವಕನ ಮದ್ವೆ ಆದ 2.8 ಅಡಿಯ ಯುವತಿ

  • ಬಿಹಾರದಲ್ಲಿ ನಡೆಯಿತು ವಿಶೇಷ ಮದುವೆ
  • ಮೂರಡಿ ಹುಡುಗನೊಂದಿಗೆ ಎರಡಡಿ ಹುಡುಗಿಯ ಮದ್ವೆ
  • ಮದ್ವೆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
3 foot tall groom marries 2.8 foot tall bride in Bihar akb
Author
Bihar, First Published May 6, 2022, 12:34 PM IST

ಸ್ವರ್ಗದಲ್ಲಿ ನಿಶ್ಚಯವಾದ ಮದುವೆಗಳು ಭೂಮಿಯ ಮೇಲೆ ನಡೆಯುತ್ತವೆ ಎಂಬ ಮಾತಿದೆ. ಹಾಗೆಯೇ ಮೂರು ಅಡಿ ಎತ್ತರದ ಯುವಕನಿಗೂ 2.8 ಅಡಿ ಎತ್ತರದ ಯುವತಿಗೂ ಮದ್ವೆಯಾಗಿದೆ. ಈ ಮದುವೆ ಊರಿನ ಟಾಕ್‌ ಆಫ್‌ ಟೌನ್‌ ಆಗಿತ್ತು. ಎಲ್ಲರೂ ಈ ಮದುವೆಗೆ ಆಗಮಿಸಿ ಯುವಕ ಯುವತಿಗೆ ಆಶೀರ್ವದಿಸಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಅಂದ ಹಾಗೆ ಈ ವಿಭಿನ್ನ ಮದುವೆ ಬಿಹಾರದಲ್ಲಿ ನಡೆದಿದೆ. 

ಬಿಹಾರದ ಭಾಗಲ್‌ಪುರದ (Bhagalpur) ನವಗಾಚಿಯಾದಲ್ಲಿ (Navgachia) ಮೂರು ಅಡಿ ಎತ್ತರದ ವರನಿಗೆ 2.8 ಅಡಿ ಎತ್ತರದ ವಧುವಿನೊಂದಿಗೆ ಮದುವೆಯ ಯೋಗ ಕೂಡಿ ಬಂದಿದೆ. ಅವರ ಮದುವೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿಶೋರಿ ಮಂಡಲ್ ಅವರ ಪುತ್ರಿ 24 ವರ್ಷದ ಮಮತಾ ಕುಮಾರಿ (Mamta Kumari) ಅವರನ್ನು ಬಿಂದೇಶ್ವರಿ ಮಂಡಲ್ ಅವರ ಪುತ್ರ 26 ವರ್ಷದ ಮುನ್ನಾ ಭಾರತಿ (Munna Bharti) ಅವರೊಂದಿಗೆ  ನಡೆಸಿ ಕೊಡಲಾಯಿತು. ವಧು ಮಮತಾ ಕುಮಾರಿ ನವಗಾಚಿಯಾದ ಅಭಿಯಾ ಬಜಾರ್ (Abhiya Bazar) ನಿವಾಸಿಯಾದರೆ ವರ ಮಸಾರು (Masaru) ನಿವಾಸಿ. 

ವಿಶ್ವದ ಅತ್ಯಂತ ಕುಬ್ಜ ಮನುಷ್ಯ ಖಗೇಂದ್ರ ಥಾಪಾ ಇನ್ನಿಲ್ಲ!

ಮಮತಾ ಮತ್ತು ಮುನ್ನಾ ಅವರ ಮದುವೆ ಸೆಲೆಬ್ರಿಟಿಗಳ ಮದುವೆಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇರಲಿಲ್ಲ. ಈ ವಿಶೇಷ ವಧು ವರರನ್ನು ಕಣ್ತುಂಬಿಕೊಳ್ಳಲು ನೂರಾರು ಮಂದಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ದಂಪತಿಯನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮದುವೆ ಹಾಲ್‌ ಮುಂದೆ ಜನ ಸೇರಿದ್ದರು ಎಂದು ನವವಿವಾಹಿತರ ಕುಟುಂಬ ತಿಳಿಸಿದೆ. ಅಲ್ಲದೇ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಜನರು ಇದನ್ನು 'ಸ್ವರ್ಗದಲ್ಲಿ ನಿಶ್ಚಿಯಿಸಿದ ಮದುವೆ' ಎಂದು ಕರೆದರು.

ಕೇವಲ 36 ಇಂಚು ಎತ್ತರದ ನನ್ನ ಮಗನಿಗೆ ವಧುವನ್ನು ಹುಡುಕುವುದು ನನಗೆ ಕಷ್ಟಕರವಾದ ಕೆಲಸವಾಗಿತ್ತು. ಆದರೆ ಈಗ ನಮ್ಮದೇ ಜಿಲ್ಲೆಯಲ್ಲಿ ಅದೇ ಎತ್ತರದ ವಧುವನ್ನು ನಾನು ಕಂಡುಕೊಂಡಿದ್ದೇನೆ, ನಾನು ಅದೃಷ್ಟಶಾಲಿಯಾಗಿದ್ದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಲ್ಲಿ ನೆರೆದು ಅವರನ್ನು ಆಶೀರ್ವದಿಸಿದರು ಎಂದು ವರನ ತಂದೆ ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.  ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅಲ್ಲದೇ ನೋಡುಗರು ಈ ವಿಶೇಷ ನವ ಜೋಡಿಗೆ ಶುಭಹಾರೈಸುತ್ತಿದ್ದಾರೆ. 

ತಾಯಿಯಾಗಿ ವಿಶ್ವ ದಾಖಲೆ ಬರೆದ ಅತೀ ಕುಬ್ಜ ಮಹಿಳೆ!

2021 ರಲ್ಲಿ ಕುಬ್ಜ ದೇಹದ ಕಾರಣಕ್ಕೆ ಮದುವೆ ಮಾತುಕತೆ ಪದೇ ಪದೇ ಮುರಿದು ಬೀಳುತ್ತಿರುವುದರಿಂದ ರೋಸಿ ಹೋದ ಯುವಕನೊಬ್ಬ ಕನ್ಯೆ ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದರು. ಕೊನೆಗೂ ಆತನಿಗೆ ಕನ್ಯೆ ಸಿಕ್ಕಿದ್ದು ಸಖತ್ ಖುಷಿಯಾಗಿದ್ದಾನೆ. ಎರಡು ಅಡಿ ಎತ್ತರವಿರುವ ತನಗೆ ಹುಡುಗಿ ಕೊಡಲು ಯಾರೂ ಒಪ್ಪುತ್ತಿಲ್ಲ. ನನ್ನ ಮನೆಯವರೂ ನೆರವಿಗೆ ನಿಲ್ಲುತ್ತಿಲ್ಲ. 'ನಾಗರಿಕ ಸೇವೆ'ಯ ಸೂತ್ರದಡಿ ನೀವಾದರೂ ಹುಡುಗಿ ಹುಡುಕಿಕೊಟ್ಟು ಮದುವೆ ಮಾಡಿಸಿ, ಎಂದು ಯುವಕ 26 ವರ್ಷದ  ಅಜೀಮ್‌ ಮನವಿ ಸಲ್ಲಿಸಿದ್ದ. ಐದು ವರ್ಷದಿಂದ ವಧು ಹುಡುಕುತ್ತಿದ್ದವನ ಪರಿಶ್ರಮಕ್ಕೆ 2021 ತೆರೆ ಬಿದ್ದಿತ್ತು.

Follow Us:
Download App:
  • android
  • ios