ದೇವಸ್ಥಾನಕ್ಕೆ ಹೋಗಿ ಆನೆ ಕಾಲಡಿ ಸಿಲುಕಿದ ಭಕ್ತ... ಆತನ ಪೇಚಾಟ ನೋಡಿ

ದೇವಸ್ಥಾನಕ್ಕೆ ಹೋದ ವ್ಯಕ್ತಿಯೊಬ್ಬ ಸುಮ್ಮನೆ ದೇವರ ಪ್ರತಿಮೆ ಮುಂದೆ ಕೈ ಮುಗಿದು ಬೇಕಾದನ್ನು ಬೇಡಿಕೊಂಡು ಹೊರ ಬರುವ ಬದಲು ಅಲ್ಲೇ ಇದ್ದ ಪುಟ್ಟ ಆನೆ ಪ್ರತಿಮೆಯೊಂದರ ಕಾಲುಗಳ ಕೆಳಗೆ ನುಗ್ಗಲು ಹೋಗಿ ಮಧ್ಯದಲ್ಲಿ ಸಿಲುಕಿಕೊಂಡಿದ್ದಾನೆ.

devotee stucked in between elephant statue of the temple in Gujarath, video goes viral akb

ಅಹ್ಮದಾಬಾದ್: ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತಿದೆ. ಅದೂ ಯಾವುದೇ ವಿಚಾರವೂ ಆಗಿರಬಹುದು. ಪ್ರೀತಿಯಾದರೂ ಸರಿಯೇ ದ್ವೇಷವಾದರೂ ಸರಿಯೇ ಅತಿರೇಕ್ ಪ್ರೀತಿ ಹಾಗೂ ದ್ವೇಷ ಎರಡೂ ಹಾನಿಯುಂಟು ಮಾಡುತ್ತದೆ. ಅದೇ ರೀತಿ ಇಲ್ಲೊಬ್ಬನ ಅತೀಯಾದ ಭಕ್ತಿ ಆತನನ್ನು ಸಂಕಷ್ಟಕ್ಕೀಡು ಮಾಡಿದೆ. ದೇವಸ್ಥಾನಕ್ಕೆ ಹೋದ ವ್ಯಕ್ತಿಯೊಬ್ಬ ಸುಮ್ಮನೆ ದೇವರ ಪ್ರತಿಮೆ ಮುಂದೆ ಕೈ ಮುಗಿದು ಬೇಕಾದನ್ನು ಬೇಡಿಕೊಂಡು ಹೊರ ಬರುವ ಬದಲು ಅಲ್ಲೇ ಇದ್ದ ಪುಟ್ಟ ಆನೆ ಪ್ರತಿಮೆಯೊಂದರ ಕಾಲುಗಳ ಕೆಳಗೆ ನುಗ್ಗಲು ಹೋಗಿದ್ದಾನೆ. ಇಲ್ಲೇ ನೋಡಿ ಆಗಿದ್ದು, ಎಡವಟ್ಟು ಈತನೇನೋ ಆನೆಗಳ ಕಾಲಡಿ ತನ್ನ ಅರ್ಧ ದೇಹವನ್ನು ನುಗ್ಗಿಸಿದ್ದಾನೆ. ನಂತರ ಆಚೆಯೂ ಹೋಗಲಾಗದೇ ಈಚೆಯೂ ಬರಲಾಗದೇ ತ್ರಿಶಂಕು ಸ್ಥಿತಿ ಅನುಭವಿಸಿದ್ದಾನೆ. ಈತನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ. 

ಭಾರತದಲ್ಲಿ(India) ದೇವರ (God) ಆಶೀರ್ವಾದ (Blessings) ಪಡೆಯುವ ಸಲುವಾಗಿ ಅನೇಕರು ದೇಗುಲಗಳಿಗೆ ಆಗಾಗ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರನ್ನು ಬೇಡುತ್ತಾರೆ. ಹಾಗೆಯೇ ದೇವಸ್ಥಾನಕ್ಕೆ ಹೋದ ವ್ಯಕ್ತಿಯೊಬ್ಬ ಏನೋ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಘಟನೆ ಗುಜರಾತ್‌ನ (Gujarath)  ದೇವಸ್ಥಾನವೊಂದರಲ್ಲಿ ನಡೆದಿದೆ.

ಸಂಪ್ರದಾಯ (Rituals) ಅಥವಾ ಆಚರಣೆಯನ್ನು ಪಾಲಿಸುವ ಸಲುವಾಗಿಯೋ ಏನೋ ಆತ ಅಲ್ಲೇ ಇದ್ದ ಪುಟಾಣಿ ಆನೆ ಪ್ರತಿಮೆಯ ಕಾಲುಗಳ ಕೆಳಗೆ ನುಗ್ಗಿದ್ದಾನೆ. ಹೀಗೆ ನುಗ್ಗಲು ಹೊರಟವ ಅತ್ತ ಸಂಪೂರ್ಣವಾಗಿ ಮುಂದೆಯೂ ಹೋಗಲಾರದೇ ಹಿಂದೆಯೂ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕಾಣುವಂತೆ ಆನೆ ಪ್ರತಿಮೆಯ ಕಾಲಿನ ಕೆಳಗೆ ಸಿಲುಕಿ ಹಾಕಿಕೊಂಡಿರುವ ವ್ಯಕ್ತಿಯನ್ನು ಹೊರಗೆಳೆಯಲು ಅಲ್ಲಿದ್ದವರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ದೇವಸ್ಥಾನಕ್ಕೆ ಆ ಸಂದರ್ಭದಲ್ಲಿ ಭೇಟಿ ನೀಡಿದ ಅನೇಕರು ಹಾಗೆ ಮಾಡಿ ಹೀಗೆ ಮಾಡಿ ಎಂದು ಹೇಳುತ್ತಿರುವುದು ಕಾಣಿಸುತ್ತಿದೆ. ಇನ್ನು ಪ್ರತಿಮೆಯೊಳಗೆ ಸಿಲುಕಿರುವ ವ್ಯಕ್ತಿ ಹೊರಗೆ ಬರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾನೆ. ಆದರೂ ಆತನಿಂದ ಹೊರಗೆ ಬರಲು ಮಾತ್ರ ಸಾಧ್ಯವಾಗುವುದಿಲ್ಲ. 

ಗೃಹಪ್ರವೇಶದ ಪೂಜೆಯಲ್ಲಿ ಎಡವಟ್ಟು, ಬಲಿಗೆ ತಂದ ಕೋಳಿ ಸೇಫ್, ವ್ಯಕ್ತಿ ಸಾವು!

ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಡಿಸೆಂಬರ್ 4 ರಂದು ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಅತೀಯಾದ ಭಕ್ತಿ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅನೇಕರು ಭಕ್ತಿ ಇರಲಿ, ಆದರೆ ಅಂದ ಭಕ್ತಿ ಬೇಡ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದನ್ನು ಸಿಎ ಪರೀಕ್ಷೆ ಪಾಸು ಮಾಡುವ ವಿಧಾನಕ್ಕೆ ಹೋಲಿಸಿದ್ದಾರೆ. ಸಿಎ (CA) ಫೌಂಡೇಶನ್ ಆಯ್ತು, ಸಿಎ ಇಂಟರ್ ಕೂಡ ಆಯ್ತು, ಆರ್ಟಿಕಲ್ ಶಿಪ್ ಕೂಡ ಆಯ್ತು, ಆದರೆ ಸಿಎ ಪಾಸ್ ಮಾಡಲು ಮಾತ್ರ ಆಗಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 

ರಿಷಿ ಸುನಕ್‌ ಬದಲು ಅಶಿಶ್‌ ನೆಹ್ರಾ ಫೋಟೋ ಹಾಕಿ ಅಭಿನಂದಿಸಿದ ಬಿಜೆಪಿ ಕಾರ್ಯದರ್ಶಿ!

Latest Videos
Follow Us:
Download App:
  • android
  • ios