ನವದೆಹಲಿ(ಆ.21): ದೇಶದ ಶೇ.27ರಷ್ಟುವಿದ್ಯಾರ್ಥಿಗಳ ಬಳಿ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಅಗತ್ಯವಾದ ಲ್ಯಾಪ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್‌ನ ಸೌಲಭ್ಯ ಇಲ್ಲ. ಜೊತೆಗೆ ಪದೇ ಪದೇ ಕೈಕೊಡುವ ಅಥವಾ ವಿದ್ಯುತ್‌ ಅಲಭ್ಯತೆ ಆನ್‌ಲೈನ್‌ ತರಗತಿಗಳಿಗೆ ಬಹುದೊಡ್ಡ ಅಡ್ಡಿಯಾಗಿದೆ ಎಂದು ಎನ್‌ಸಿಇಆರ್‌ಟಿ ನಡೆಸಿದ ಸಮೀಕ್ಷೆಯೊಂದು ಹೇಳಿದೆ.

ಸಿಬಿಎಸ್‌ಇಯಡಿ ನೊಂದಾಯಿತ ಶಾಲೆಗಳು, ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ವಿದ್ಯಾಲಯಗಳ 34000 ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಾಲಾ ಮುಖ್ಯಸ್ಥರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ.

ಆನ್‌ಲೈನ್‌ ಕ್ಲಾಸ್‌ ವೇಳೆ ನಿದ್ದೆಗ ಜಾರಿದ 5 ವರ್ಷದ ಬಾಲಕ!

ಸಮೀಕ್ಷೆ ಅನ್ವಯ ಪರಿಣಾಮಕಾರಿ ಶೈಕ್ಷಣಿಕ ಚಟುವಟಿಕೆಗೆ ಅನುವಾಗುವಂತೆ ಲ್ಯಾಪ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್‌ ಬಳಕೆ ಬಗ್ಗೆ ಹೆಚ್ಚಿನ ಅರಿವು ಹೊಂದದೇ ಇರುವುದು ಮತ್ತು ಆನ್‌ಲೈನ್‌ ಶಿಕ್ಷಣದ ರೀತಿ ನೀತಿಗಳ ಬಗ್ಗೆ ಶಿಕ್ಷಕರಿಗೆ ಹೆಚ್ಚಿನ ಅರಿವು ಇಲ್ಲದೇ ಇರುವುದು ಕೂಡಾ ಸಮೀಕ್ಷೆಯಲ್ಲಿ ಕಂಡುಬಂದಿದೆ.

ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಬಹುತೇಕ ಜನ ತಾವು ಆನ್‌ಲೈನ ತರಗತಿಗಳಿಗೆ ಮೊಬೈಲ್‌ ಅವಲಂಬಿಸಿರುವುದಾಗಿ ಹೇಳಿದ್ದಾರೆ. ಶೇ.27ರಷ್ಟುವಿದ್ಯಾರ್ಥಿಗಳು ತಮ್ಮ ಬಳಿ ಸ್ಮಾರ್ಟ್‌ಫೋನ್‌ ಅಥವಾ ಲ್ಯಾಪ್‌ಟಾಪ್‌ ಇಲ್ಲ ಎಂದಿದ್ದಾರೆ. ಶೇ.36ರಷ್ಟುವಿದ್ಯಾರ್ಥಿಗಳು ತಮ್ಮ ಬಳಿ ಇರುವ ಪಠ್ಯಪುಸ್ತಕಗಳನ್ನು ಬಳಕೆ ಮಾಡಿದ್ದಾರೆ. ಶೇ.50ರಷ್ಟುವಿದ್ಯಾರ್ಥಿಗಳು ತಮಗೆ ಪಠ್ಯಪುಸ್ತಕ ಇನ್ನೂ ಸಿಕ್ಕಿಲ್ಲ ಎಂದಿದ್ದಾರೆ. ಆನ್‌ಲೈನ್‌ನಲ್ಲಿ ಪುಸ್ತಕಗಳು ಲಭ್ಯವಿದ್ದರೂ ಈ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕೊರತೆ ಇರುವುದು ಕಂಡುಬಂದಿದೆ ಎಂದು ಸಮೀಕ್ಷೆ ಹೇಳಿದೆ.

ಆನ್‌ಲೈನ್‌ನಲ್ಲೇ ಡಿಗ್ರಿ ಕಾಲೇಜಿಗೆ ಪ್ರವೇಶ ನಡೆ​ಸ​ಲು ಸರ್ಕಾರ ಸೂಚ​ನೆ

ಗಣಿತ- ವಿಜ್ಞಾನ ಕಬ್ಬಿಣದ ಕಡಲೆ:

ಬಹುತೇಕ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಗಣಿತ ವಿಷಯ ಕಲಿಯುವುದು ಅತ್ಯಂತ ಕಷ್ಟಕರ ಎಂದಿದ್ದಾರೆ. ನಂತರದ ಕಠಿಣ ವಿಷಯದಲ್ಲಿ ವಿಜ್ಞಾನ ವಿಷಯವಿದೆ. ಶೇ.17ರಷ್ಟುವಿದ್ಯಾರ್ಥಿಗಳು ಭಾಷೆಯನ್ನು ಆನ್‌ಲೈನ್‌ನಲ್ಲಿ ಕಲಿಯುವುದು ಕಠಿಣ ಎಂದಿದ್ದಾರೆ.

ಇನ್ನು ಬೋಧನೆ ವಿಷಯದಲ್ಲಿ ಶಿಕ್ಷಕರಿಗೆ ಲ್ಯಾಪ್‌ಟಾಪ್‌ ಎರಡನೇ ಆದ್ಯತೆಯಾಗಿದೆ. ಪಾಠ ಮಾಡಲು ಟೆಲಿವಿಷನ್‌ ಮತ್ತು ರೇಡಿಯೋವನ್ನು ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದೆ.

ಬಹುತೇಕ ಪೋಷಕರು ಮಕ್ಕಳಿಗೆ ಆನ್‌ಲೈನ್‌ ಮೂಲಕವೇ ದೈಹಿಕ ಶಿಕ್ಷಣ ನೀಡುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.