ಬೆಂಗಳೂರು(ಆ.02): ಪ್ರಸಕ್ತ ಸಾಲಿನಲ್ಲಿ ಪದವಿ ತರಗತಿಗಳ ಪ್ರವೇಶಾತಿ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕವೂ ನಡೆಸುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ತಿಳಿಸಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಆನ್‌ಲೈನ್‌ ಪ್ರವೇಶಾತಿಗೂ ಆದ್ಯತೆ ನೀಡಲಾಗಿದ್ದು, ರಾಜ್ಯದಲ್ಲಿರುವ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಆನ್‌ಲೈನ್‌ನಲ್ಲಿ ಪ್ರವೇಶ ನೀಡುವಂತೆ ಇಲಾಖೆಯ ಆಯುಕ್ತ ಪ್ರದೀಪ್‌ ಸುತ್ತೋಲೆ ಹೊರಡಿಸಿದ್ದಾರೆ.

ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ ಕಾಲೇಜಿನಿಂದ ಮುದ್ರಿತ ಅರ್ಜಿ ಪಡೆದು ಭರ್ತಿ ವåಾಡಿ, ದ್ವಿತೀಯ ಪಿಯು ಅಂಕಪಟ್ಟಿಯ ದೃಢೀಕೃತ ಪ್ರತಿಯೊಂದಿಗೆ ಕಾಲೇಜಿಗೆ ಸಲ್ಲಿಸಬಹುದು. ಈ ಅರ್ಜಿಯಲ್ಲಿನ ವಿವರಗಳನ್ನು ಕಾಲೇಜಿನ ಆನ್‌ಲೈನ್‌ ಅರ್ಜಿ ಟೆಂಪ್ಲೇಟ್‌ನಲ್ಲಿ ಭರ್ತಿ ವåಾಡುವಂತೆ ಕಾಲೇಜುಗಳಿಗೆ ಸೂಚಿಸಿದೆ.

ಶುಲ್ಕ ಪಾವತಿಸದಕ್ಕೆ ಆನ್‌ಲೈನ್‌ ತರಗತಿ ತಡೆ ಹಿಡಿದ ಶಾಲೆ

ಅರ್ಜಿ ಸಲ್ಲಿಸುವ ವೇಳೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೆಲ್ಪ್‌ ಡೆಸ್ಕ್‌ ವ್ಯವಸ್ಥೆಗೊಳಿಸಬೇಕು. ಆಯ್ಕೆ ಪಟ್ಟಿಯನ್ನು ಸಹ ವಿದ್ಯಾರ್ಥಿಗಳ ಮೊಬೈಲ್‌ಗೆ ಸಂದೇಶ ರವಾನಿಸಬೇಕು ಎಂದು ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.