ನವದೆಹಲಿ(ಆ.13): ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗಲೇ ನಿದ್ದೆ ಮಾಡುವ ಚಾಳಿ ಇರುವ ಮಕ್ಕಳು ಇನ್ನು ಆನ್‌ಲೈನ್‌ ಕ್ಲಾಸ್‌ನಲ್ಲಿ ಸುಮ್ಮನಿರುತ್ತಾರೆಯೇ? ಆನ್‌ಲೈನ್‌ ಪಾಠ ಕೇಳಲು ಲ್ಯಾಪ್‌ಟಾಪ್‌ ಮುಂದೆ ಕೂತ 5 ವರ್ಷದ ಬಾಲಕನೊಬ್ಬ ಕುರ್ಚಿಯ ಮೇಲೆಯೇ ಮಲಗಿ ನಿದ್ದೆ ಮಾಡಿದ್ದಾನೆ.

ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ಕಟ್‌!

ಆ ಕಡೆಯಿಂದ ಶಿಕ್ಷಕಿ ತನ್ನ ಪಾಡಿಗೆ ಜೂಮ್‌ ಆ್ಯಪ್‌ನಲ್ಲಿ ಆನ್‌ಲೈನ್‌ ಪಾಠವನ್ನು ಮುಂದುವರಿಸಿದ್ದಾಳೆ.

ಇಂಗ್ಲಿಷ್‌ ಲೇಖಕಿ ಕೇರಾ ಮೆಕ್‌ಡೊವೆಲ್‌ ಎಂಬಾಕೆ ಟ್ವಿಟ್ಟರ್‌ನಲ್ಲಿ ಈ ಫೋಟೋವನ್ನು ಹಾಕಿದ್ದು, ವೈರಲ್‌ ಆಗಿದೆ.