ದೆಹಲಿಗೆ ಟೊಮೆಟೋ ಪೂರೈಕೆ ಮಾಡುವ ಪ್ರದೇಶಗಳಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದ ಕಾರಣ ಟೊಮೆಟೋ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ. ದೆಹಲಿಗೆ ಅಗತ್ಯವಿರುವ ತರಕಾರಿಯನ್ನು ಪೂರೈಸುವ ಆಜಾದ್‌ಪುರ ಮಾರುಕಟ್ಟೆಯಲ್ಲಿ ಕಳೆದ 2 ದಿನಗಳಿಂದ ಟೊಮೆಟೋ ಕೊರತೆ ಉಂಟಾಗಿದೆ. 

ನವದೆಹಲಿ(ಆ.03):  ಪೂರೈಕೆ ಕೊರತೆಯಿಂದಾಗಿ ಟೊಮೆಟೋ ಬೆಲೆ ಮತ್ತೆ ಏರಿಕೆ ಕಂಡಿದ್ದು, ದೆಹಲಿಯಲ್ಲಿ ಮದರ್‌ ಡೈರಿ ತನ್ನ ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ ಒಂದು ಕೇಜಿ ಟೊಮೆಟೋವನ್ನು 259 ರು.ಗೆ ಮಾರಾಟ ಮಾಡುತ್ತಿದೆ. ಇದು ಟೊಮೆಟೋದ ಈವರೆಗಿನ ಸಾರ್ವಕಾಲಿಕ ಗರಿಷ್ಠ ದರ ಎನ್ನಲಾಗಿದೆ.

ದೆಹಲಿಗೆ ಟೊಮೆಟೋ ಪೂರೈಕೆ ಮಾಡುವ ಪ್ರದೇಶಗಳಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದ ಕಾರಣ ಟೊಮೆಟೋ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ. ದೆಹಲಿಗೆ ಅಗತ್ಯವಿರುವ ತರಕಾರಿಯನ್ನು ಪೂರೈಸುವ ಆಜಾದ್‌ಪುರ ಮಾರುಕಟ್ಟೆಯಲ್ಲಿ ಕಳೆದ 2 ದಿನಗಳಿಂದ ಟೊಮೆಟೋ ಕೊರತೆ ಉಂಟಾಗಿದೆ. ಇದ್ದಕ್ಕಿದ್ದಂತೆ ಪೂರೈಕೆ ಕುಂಠಿತವಾಗಿರುವುದರಿಂದ ಚಿಲ್ಲರೆ ಮಾರಾಟ ದರ ಏರಿಕೆಯಾಗಿದೆ ಎಂದು ಮದರ್‌ ಡೈರಿಯ ವಕ್ತಾರ ಹೇಳಿದ್ದಾರೆ. ಏಷ್ಯಾದ ಅತಿದೊಡ್ಡ ತರಕಾರಿ ಮಾರುಕಟ್ಟೆಯಾದ ಆಜಾದ್‌ಪುರ ಮಾರುಕಟ್ಟೆಯಲ್ಲಿ ಬುಧವಾರ ಟೊಮೆಟೋ ಸಗಟು ದರ 170ರಿಂದ 220 ರು.ವರೆಗೂ ಇತ್ತು.

ಗ್ರಾಹಕರ ಕೈಗೆ ಎಟುಕದ ಟೊಮೆಟೋ: ಹುಣಸೆ ಹಣ್ಣು ಕೂಡಾ ದುಬಾರಿ

‘ಭಾರಿ ಮಳೆಯ ಪರಿಣಾಮವಾಗಿ ಕಳೆದ 3 ದಿನಗಳಿಂದ ಪೂರೈಕೆ ಭಾರಿ ಕುಸಿತ ಕಂಡಿದೆ. ಬುಧವಾರ ಕೇವಲ ಶೇ.15ರಷ್ಟುಮಾತ್ರ ಟೊಮೆಟೋ ಪೂರೈಕೆಯಾಗಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ 6 ಟ್ರಕ್‌ಗಳು ಮಾತ್ರ ಟೊಮೆಟೋ ಪೂರೈಸಿವೆ’ ಎಂದು ಆಜಾದ್‌ ಮಾರುಕಟ್ಟೆಟೊಮೆಟೋ ಅಸೋಸಿಯೇಶನ್‌ನ ಅಧ್ಯಕ್ಷ ಅಶೋಕ್‌ ಕೌಶಿಕ್‌ ಹೇಳಿದ್ದಾರೆ.