ಗ್ರಾಹಕರ ಕೈಗೆ ಎಟುಕದ ಟೊಮೆಟೋ: ಹುಣಸೆ ಹಣ್ಣು ಕೂಡಾ ದುಬಾರಿ
ನಗರದಲ್ಲಿ ಟೊಮೆಟೋ ದರ ಕೇಜಿಗೆ 150 ಆಸುಪಾಸಿನಲ್ಲೇ ಮುಂದುವರಿದಿದ್ದು, ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ನಿಯಂತ್ರಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.
ಬೆಂಗಳೂರು (ಆ.02): ನಗರದಲ್ಲಿ ಟೊಮೆಟೋ ದರ ಕೇಜಿಗೆ 150 ಆಸುಪಾಸಿನಲ್ಲೇ ಮುಂದುವರಿದಿದ್ದು, ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ನಿಯಂತ್ರಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ. ಮಂಗಳವಾರವೂ ಸುತ್ತಲ ಜಿಲ್ಲೆಗಳಿಂದ ನಗರದ ಬಿನ್ನಿಪೇಟೆ, ಕಲಾಸಿಪಾಳ್ಯ ಸಗಟು ಮಾರುಕಟ್ಟೆಗೆ ಅತೀ ಕಡಿಮೆ ಟೊಮೆಟೋ ಬಂದಿದೆ. ಹಾಪ್‌ಕಾಮ್ಸ್‌ನಲ್ಲಿ ಕೇಜಿಗೆ 157 ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 140-145 ವರೆಗೆ ವ್ಯಾಪಾರವಾಗಿದೆ. ಪರಿಣಾಮ ಗ್ರಾಹಕರು ಟೊಮೆಟೋ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಜಯನಗರ, ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ಸೇರಿದಂತೆ ಇತರೆಡೆಗಳ ಅಂಗಡಿ ಮುಂಗಟ್ಟು, ತಳ್ಳುಗಾಡಿಯಲ್ಲಿ ಟೊಮೆಟೋ ದರ ಕೇಜಿಗೆ 135-140 ಇದ್ದರೆ, ಎರಡನೇ ದರ್ಜೆಯ ಟೊಮೆಟೋ 100-120 ಇತ್ತು. ನಗರದ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ 22 ಕೇಜಿ ಬಾಕ್ಸ್‌ಗೆ .3 ಸಾವಿರವರೆಗೆ ಬೆಲೆಯಿತ್ತು. ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಗ್ರಾಹಕರು ಒಂದು ಕಡೆ ತರಕಾರಿ ದರ ಏರುತ್ತಲೇ ಇದೆ. ದಿನಬಳಕೆಯ ಟೊಮೆಟೋ ಬೆಲೆ ಏರಿಕೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಕಡಿವಾಣ ಹಾಕಬೇಕು. ಬಡ ಹಾಗೂ ಮಧ್ಯಮ ವರ್ಗದವರು ಇತ್ತ ಟೊಮೆಟೋ, ಅತ್ತ ಹುಣಸೆ ಹಣ್ಣನ್ನು ಖರೀದಿ ಮಾಡಲು ಸಾಧ್ಯವೇ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧ ಮತ್ತೆ ಪ್ರಧಾನಿ ಮೋದಿ ವಾಗ್ದಾಳಿ
ತಿಂಗಳು ಕಳೆದರೂ ತಗ್ಗದ ‘ಕೆಂಪುಸುಂದರಿಯ’ ಆರ್ಭಟ: ಕಳೆದ ಒಂದು ತಿಂಗಳಿಂದ ‘ಕೆಂಪು ಸುಂದರಿ’ಗೆ ಎಲ್ಲಿಲ್ಲದ ಬೇಡಿಕೆ. ನಿತ್ಯವೂ ಸದಾ ಸುದ್ದಿಯಲ್ಲಿಯೇ ಇರುವ ಟೊಮೆಟೋ ಬೆಲೆಯಲ್ಲಿ ನಿತ್ಯವೂ ಏರಿಳಿತ ಕಾಣುತ್ತಿದೆ. ಇತ್ತ ಮಾರುಕಟ್ಟೆಗೆ ಬರುವ ಗ್ರಾಹಕರು ಬೆಲೆ ಏರಿಳಿಕೆ ಕಂಡು ಕಂಗಾಲಾಗಿ ಹೋಗಿದ್ದಾರೆ. ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಟೊಮೆಟೋ ಬೆಳೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇನ್ನು ಕೆಲವು ಕಡೆಗಳಲ್ಲಿ ಬೆಳೆಗೆ ರೋಗ ದಾಳಿ ಮಾಡಿದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಟೊಮೆಟೋ ಇಲ್ಲದಂತಾಗಿದೆ. ಮೊದಲು ಮಾರುಕಟ್ಟೆಗೆ ಬರುತ್ತಿದ್ದ ಟೊಮೆಟೋದಲ್ಲಿ ಈಗ ಶೇ. 30ರಷ್ಟೇ ಬರುತ್ತಿದೆ. ಇದರಿಂದಾಗಿ ಬೆಲೆಯಲ್ಲಿ ತೀವ್ರ ಏರಿಳಿಕೆ ಕಾಣುತ್ತಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯ.
150ರ ವರೆಗೂ ಮಾರಾಟ: ಕಳೆದ 3-4 ದಿನಗಳ ಹಿಂದೆ ಮೊಹರಂ ಹಬ್ಬದ ಪೂರ್ವದಲ್ಲಿ ಕೆಜಿಗೆ 150160ರ ವರೆಗೂ ಮಾರಾಟವಾಗಿದೆ. ಇನ್ನು 22ಕೆಜಿಯ ಬಾಕ್ಸ್‌ಗೆ 2800ರಿಂದ 3100ರ ವರೆಗೂ ಮಾರಾಟವಾಗಿದೆ. ಜು. 28ರಂದು ಕೆಜಿಗೆ .150ರಿಂದ .160, ಜು. 29ರಂದು ಕೆಜಿಗೆ 130ರಿಂದ 140 ಮಾರಾಟವಾದರೆ, ಜು. 30ರಂದು ಕೆಜಿಗೆ .90ರಿಂದ .100ರ ವರೆಗೆ ಮಾರಾಟವಾಗಿದೆ. ಜು.31ರಂದು ಕೆಜಿಗೆ 130ರಿಂದ 140ರ ವರೆಗೆ ಮಾರಾಟವಾದರೆ ಆಗಸ್ಟ್ 1ರ ಮಂಗಳವಾರ 110ರಿಂದ 120ಕ್ಕೆ ಮಾರಾಟವಾಗಿದೆ.
ಸಂತಸ-ಸಂಕಟ: ಈಗ ಎಲ್ಲಿಲ್ಲದ ಬೇಡಿಕೆ ಬಂದಿರುವುದರಿಂದ ಟೊಮೆಟೋ ಬೆಳೆದ ರೈತರು ಸಂತಸದಲ್ಲಿದ್ದರೆ, ನೂರಾರು ರುಪಾಯಿ ಕೊಟ್ಟು ಖರೀದಿಸುತ್ತಿರುವ ಗ್ರಾಹಕರು ಸಂಕಟ ಪಡುವಂತಾಗಿದೆ. ಹಿಂದೆ ಕೆಜಿಗೆ .10, .15 ನೀಡಿ ಖರೀದಿಸುತ್ತಿದ್ದೆ. ಆದರೆ, ಈಗ ಕೆಜಿಗೆ .120-.130 ನೀಡಿ ಖರೀದಿಸುವ ಸ್ಥಿತಿ ಬಂದಿದೆ. ಹೀಗಾದರೆ ಮಧ್ಯಮ ವರ್ಗದ ಜನ ಬದುಕುವುದಾದರೂ ಹೇಗೆ ಎಂದು ಮಾರುಕಟ್ಟೆಗೆ ತರಕಾರಿ ಖರೀದಿಗೆ ಆಗಮಿಸಿದ್ದ ಗ್ರಾಹಕ ಯಮನೂರ ಡಾಲಾಯತ್ ಪ್ರಶ್ನಿಸುತ್ತಾರೆ.
ಬಿಜೆಪಿ ಲೀಡರ್‌ಲೆಸ್ ಪಾರ್ಟಿ: ಜಗದೀಶ್ ಶೆಟ್ಟರ್
ಹಸಿಶುಂಠಿ ಬೆಲೆಯಲ್ಲೂ ಏರಿಕೆ: ಟೊಮೆಟೋದೊಂದಿಗೆ ಈಗ ಕಳೆದ 15ದಿನಗಳಿಂದ ಹಸಿ ಶುಂಠಿಯ ಬೆಲೆಯಲ್ಲೂ ಭಾರಿ ಏರಿಕೆ ಕಂಡುಬಂದಿದೆ. ಹಿಂದೆ ಕೆಜಿಗೆ .50ರಿಂದ .60ಗೆ ಬರುತ್ತಿದ್ದ ಹಸಿ ಶುಂಠಿ ಈಗ .140ರಿಂದ .160ರ ವರೆಗೆ ಹೆಚ್ಚಳವಾಗಿದೆ. ಕಳೆದ ಮೊಹರಂ ವೇಳೆ ಕೆಜಿ ಹಸಿಶುಂಠಿಗೆ .200ರ ಗಡಿ ದಾಟಿತ್ತು. ಈಗ ಕೊಂಚ ಇಳಿಕೆ ಕಂಡುಬಂದಿದೆ. ಆದರೆ, ಇದೂ ಟೊಮೆಟೋದಂತೆ ನಿತ್ಯವೂ ಬೆಲೆಯಲ್ಲಿ ಏರಿಳಿಕೆ ಕಾಣುತ್ತಿದೆ.