ಕಳೆದ 25 ವರ್ಷಗಳಲ್ಲಿ 14 ರಾಜ್ಯಗಳಲ್ಲಿ 1200ಕ್ಕೂ ಹೆಚ್ಚು ದರೋಡೆ ನಡೆಸಿ, ಪೊಲೀಸರ ನಿದ್ದೆಗೆಡಿಸಿದ್ದ ನದೀಂ ಖುರೇಷಿ ಎಂಬ ಕುಖ್ಯಾತ ದರೋಡೆಕೋರ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೋಲ್ಕತಾ: ಕಳೆದ 25 ವರ್ಷಗಳಲ್ಲಿ 14 ರಾಜ್ಯಗಳಲ್ಲಿ 1200ಕ್ಕೂ ಹೆಚ್ಚು ದರೋಡೆ ನಡೆಸಿ, ಪೊಲೀಸರ ನಿದ್ದೆಗೆಡಿಸಿದ್ದ ನದೀಂ ಖುರೇಷಿ ಎಂಬ ಕುಖ್ಯಾತ ದರೋಡೆಕೋರ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಉತ್ತರಪ್ರದೇಶದ ಗಾಜಿಯಾಬಾದ್‌ ಮೂಲದವನಾದ ನದೀಂ ತನ್ನ 17ನೇ ವಯಸ್ಸಿನಲ್ಲಿ ಎಮ್ಮೆ ಕದಿಯುವ ಮೂಲಕ ಕಳ್ಳತನದ ವೃತ್ತಿಗೆ ಇಳಿದಿದ್ದ. ನಂತರದ 25 ವರ್ಷಗಳಲ್ಲಿ ದೇಶದ 14 ರಾಜ್ಯಗಳಲ್ಲಿ 1200ಕ್ಕೂ ಹೆಚ್ಚು ದರೋಡೆ, ಸುಲಿಗೆ, ಹತ್ಯೆ ಯತ್ನದಂಥ ಕೃತ್ಯಗಳನ್ನು ನಡೆಸಿದ್ದ. ವಿವಿಧ ಪ್ರಕರಣಗಳಲ್ಲಿ ಈವರೆಗೆ ಈತ 8 ಬಾರಿ ಪೊಲೀಸರ ಅತಿಥಿಯಾಗಿದ್ದ. ಬಳಿಕ ಜಾಮೀನು ಪಡೆದು ಹೊರಬಂದು ತನ್ನ ಕೃತ್ಯಗಳನ್ನು ಮುಂದುವರೆಸುತ್ತಿದ್ದ.

ಬಸ್ ಹತ್ತುವ ವೇಳೆ ಮಹಿಳೆಯ ಚಿನ್ನಾಭರಣ ಕಳ್ಳತನ; ಇಬ್ಬರು ಸರಗಳ್ಳಿಯರ ಬಂಧನ

ವಿಶಿಷ್ಟದರೋಡೆ:

ನದೀಂ ತನ್ನ ಕಳ್ಳತನದಲ್ಲಿ ಒಂದಷ್ಟು ಹೊಸತನಗಳನ್ನು ಅಳವಡಿಸಿಕೊಂಡಿದ್ದ. ಯಾವಾಗಲೂ ಟಿಪ್‌ಟಾಪ್‌ ಆಗಿ ಕಾರ್ಪೊರೆಟ್‌ ಶೈಲಿಯಲ್ಲೇ ಬಟ್ಟೆ ತೊಡುತ್ತಿದ್ದ. ಇದೇ ರೀತಿ ವಸ್ತ್ರ ಧರಿಸಿ ಅಪಾರ್ಟ್‌ಮೆಂಟ್‌ ಮತ್ತು ಏಕಾಂಗಿಯಾಗಿರುವ ಮನೆಗಳನ್ನು ಹುಡುಕಿ ಅಲ್ಲಿಗೆ ಕಾರಿನಲ್ಲಿ ತೆರಳುತ್ತಿದ್ದ. ಈತನ ವೇಷಭೂಷಣ ನೋಡಿದ ಯಾರೂ ಅನುಮಾನ ಪಡುತ್ತಿರಲಿಲ್ಲ. ಹೀಗೆ ಅಪಾರ್ಟ್‌ಮೆಂಟ್‌ಗೆ ತೆರಳಿದ ಬಳಿಕ ಲಿಫ್ಟ್‌ನಲ್ಲಿ ಮೇಲಿನ ಮಹಡಿಗೆ ತೆರಳಿ ಅಲ್ಲಿಂದ ಒಂದೊಂದೇ ಮಹಡಿ ಇಳಿದು ಬಂದು, ಬೀಗ ಹಾಕಿದ ಮನೆಗಳನ್ನು ನೋಡಿ ಕಳ್ಳತನ ಮಾಡುತ್ತಿದ್ದ.

ಎಲ್ಲಾ ಬೆಳಗ್ಗೆ ಕೆಲಸಕ್ಕೆ ಹೋದ್ರೆ, ಇವ್ರು ಹೋಗೋದು ಮಾತ್ರ ಕಳ್ಳತನಕ್ಕೆ..ಇಲ್ಲೊಂದು ಕಳ್ಳರ ಕುಟುಂಬ..!

ಕಳ್ಲತನದ ಬಳಿಕ ಸೆಡಾನ್‌ ಕಾರಿನಲ್ಲೇ ಪರಾರಿಯಾಗುತ್ತಿದ್ದ. ಹೀಗಾಗಿ ಯಾರೂ ಈತನ ಬಗ್ಗೆ ಅನುಮಾನವನ್ನೂ ಪಡುತ್ತಿರಲಿಲ್ಲ ಮತ್ತು ಈತ ಸುಲಭವಾಗಿ ಸಿಕ್ಕಿಬೀಳುತ್ತಲೇ ಇರಲಿಲ್ಲ. ಆದರೆ ಇತ್ತೀಚೆಗೆ ಈತನ ಗ್ರಹಚಾರ ಕೈಕೊಟ್ಟು ರಾಜಸ್ಥಾನ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾನೆ. ವಿಚಾರಣೆ ವೇಳೆ ಈತನ ಪುರಾಣ ಬೆಳಕಿಗೆ ಬಂದಿದೆ. ಕದ್ದು ಕದ್ದೇ ಈತ ಕೋಟ್ಯಧಿಪತಿಯಾಗಿದ್ದಾನೆ ಎಂಬ ವಿಚಾರವೂ ತನಿಖೆ ವೇಳೆ ಬಯಲಾಗಿದೆ.

Software Engineer ಮನೆಯಲ್ಲಿ ಕದಿಯಲು ಏನೂ ಇಲ್ಲ ಎಂದು 500 ರೂ. ಇಟ್ಟು ಹೋದ ಕಳ್ಳರ ಗ್ಯಾಂಗ್‌!